ಪೊಲೀಸ್ ಅಕಾಡೆಮಿಗೆ ಡ್ರಗ್ಸ್ ಪೂರೈಸುತ್ತಿದ್ದ ಹೆಡ್ ಕಾನ್ಸ್ ಟೇಬಲ್ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಜಲಾಂಧರ್ ( ಪಂಜಾಬ್), ಮೇ 11- ಪೊಲೀಸ್ ಅಕಾಡೆಮಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಹೆಡ್ ಕಾನ್ಸ್ ಟೇಬಲ್ ಹಾಗೂ ಕ್ಲಾಸ್ 4 ನೌಕರನನ್ನು ಬಂಧಿಸುವಲ್ಲಿ ಪೈಲುಯಾರ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂತ ಹೆಡ್ ಕಾನ್ಸ್ಟೇಬಲ್ನನ್ನು ಶಕ್ತಿ ಕುಮಾರ್ ಹಾಗೂ ಕುಮಾರ್ ಎಂದು ಗುರುತಿಸಲಾಗಿದೆ. ಶಕ್ತಿಕುಮಾರ್ ಅವರ ತಂದೆ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಮೃತಪಟ್ಟಿದ್ದರಿಂದ ಕನಿಕರ ಆಧಾರದ ಮೇಲೆ 2017ರಲ್ಲಿ ನೌಕರಿ ನೀಡಲಾಗಿತ್ತು.

ಪಂಜಾಬ್ನ ಜಲಾಂಧರ್ನಲ್ಲಿ ಕೆಲಸ ನಿರ್ವಹಿಸಲು ಆರಂಭಿಸಿದಾಗ ಶಕ್ತಿ ಕುಮಾರ್ಗೆ ಕುಮಾರ್ ಎಂಬ ಕ್ಲಾಸ್ 4 ನೌಕರ ಪರಿಚಯವಾಗಿದ್ದು, ಆತನಿಗೆ ನಿಯಮಿತವಾಗಿ ಡ್ರಗ್ಸ್ ಕೊಡಿಸುವ ಮೂಲಕ ಆತನನ್ನು ಮಾದಕ ವ್ಯಸನಿಯಾಗಿಸಿದ್ದನು.

ಇತ್ತೀಚೆಗೆ ಪೊಲೀಸ್ ಅಕಾಡೆಮಿಯ ಜೈರಾಜ್ ಸೇರಿದಂತೆ ಕೆಲವರಿಗೆ ಕುಮಾರ್ ಡ್ರಗ್ಸ್ ಸರಬರಾಜು ಮಾಡುತ್ತಿರುವುದರ ಬಗ್ಗೆ ಅನುಮಾನಗೊಂಡು ತನಿಖೆ ನಡೆಸಿದಾಗ ಮಾದಕ ವಸ್ತು ಸರಬರಾಜು ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕುಮಾರ್ ಹಾಗೂ ಶಕ್ತಿಕುಮಾರ್ ವಿರುದ್ಧ ಪೈಲುಯಾರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಡು ಮುಂದಿನ ಕ್ರಮೈಕೊಂಡಿದ್ದಾರೆ.

Facebook Comments

Sri Raghav

Admin