ಆಸ್ಟಮಿ ರೋಗಿಗಳಿಗೆ ಡಿಜಿಟಲ್ ಸಂಪರ್ಕಿತ ಗುಣಮಟ್ಟದ ಸೇವೆ
ನವದೆಹಲಿ, ಅ.7- ಶಸ್ತ್ರಚಿಕಿತ್ಸೆಯ ನಂತರ ಅದರಲ್ಲೂ ವಿಶೇಷವಾಗಿ ಕೊಲೊರೆಕ್ಟಲ್ ಅಥವಾ ಯಾವುದೇ ಕರುಳಿನ ಕ್ಯಾನ್ಸರ್ನಂತಹ ಕ್ಯಾನ್ಸರ್ಗಳಿಗೆ ಸಂಬಂಸಿದಂತೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಗ ರೋಗಿಯ ದಿನಚರಿಯ ಮಾರ್ಪಾಡುಗಳು ಅನಿವಾರ್ಯವಾಗಿರುತ್ತದೆ ಮತ್ತು ಹೆಚ್ಚಿನ ಕಾಳಜಿಯ ಅಗತ್ಯವಿರುತ್ತದೆ.
ಕೊಲೊರೆಕ್ಟಲ್ ಕ್ಯಾನ್ಸರ್ನ ಶಸ್ತ್ರಚಿಕಿತ್ಸೆಯು ಹೆಚ್ಚಾಗಿ ಆಸ್ಟಮಿ ಶಸ್ತ್ರಚಿಕಿತ್ಸೆಗಳೊಂದಿಗೆ ಸಂಬಂಸಿರುತ್ತದೆ. ಕೊಲೊರೆಕ್ಟಲ್ ಕ್ಯಾನ್ಸರ್ನಿಂದ ಬದುಕುಳಿದವರು ಕ್ಯಾನ್ಸರ್ ಚಿಕಿತ್ಸೆ ಸಮಯದಲ್ಲಿ ಅನೋಸ್ಟೊಮಿ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಅಲ್ಲಿ ತ್ಯಾಜ್ಯವು ಹಾದುಹೋಗಲು ಬಾಹ್ಯ ಶಸ್ತ್ರಚಿಕಿತ್ಸೆಯ ಹಾದಿಯನ್ನು ರಚಿಸುವುದು ಮುಖ್ಯವಾಗುತ್ತದೆ.
ಬೆಂಗಳೂರಿನ ಬನ್ನೇರುಘಟ್ಟ ಸಮೀಪವಿರುವ ಪೋರ್ಟಿಸ್ ಹಾಸ್ಪಿಟಲ್ನ ಶಸ್ತ್ರಚಿಕಿತ್ಸಾತ್ಮಕ ಗಂತಿಶಾಸ್ತ್ರ ಹಾಗೂ ರೊಬೋಟಿಕ್ ಮತ್ತು ಲ್ಯಪರೋಸ್ಕೋಪಿಕ್ ಶಸ್ತ್ರಚಿಕಿತ್ಸೆ ವಿಭಾಗದ ನಿರ್ದೇಶಕ ಡಾ. ಸಂದೀಪ್ ನಾಯಕ್ ಮಾತನಾಡಿ, ಆಸ್ಟಮಿ ಶಸ್ತ್ರಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ನಂತರದ ಆರೈಕೆಯ ಬಗ್ಗೆ ಸೂಕ್ತ ರೀತಿಯಲ್ಲಿ ಮಾಹಿತಿ ಲಭ್ಯವಾಗುವುದು ಸಾಮಾನ್ಯವಾಗಿ ರೋಗಿಗಳಿಗೆ ದೊಡ್ಡ ಸವಾಲಾಗುತ್ತದೆ.
ಸ್ಟೋಮಾ ಫೇಸ್ ಬಳಸುವ ರೋಗಿಗಳು ಸಾಮಾಜಿಕ ಕಳಂಕ ಒಂದು ದೊಡ್ಡ ತಡೆಗೋಡೆಯಾಗುತ್ತದೆ. ಮಾಹಿತಿ ಪಡೆಯುವ ಸಲುವಾಗಿ, ಮತ್ತು ಜನಸಾಮಾನ್ಯರಲ್ಲಿ ಹೆಚ್ಚಿನ ಅರಿವು ಮೂಡಿಸಲು, ಸೂಕ್ತ ವೇದಿಕೆ ಲಭ್ಯವಾಗುವುದು ಇಂದಿನ ಅವಶ್ಯಕತೆಯಾಗಿದೆ. ಅಂತಹ ಸನ್ನಿವೇಶಗಳಲ್ಲಿ, ಅವಶ್ಯಕತೆ ಈಡೇರಿಸಲು, ಸೂಕ್ತ ರೀತಿಯ ಮಾಹಿತಿ ಪಡೆದುಕೊಳ್ಳಲು ಆಸ್ಟೊಮೇಟ್ಗಳಿಗೆ ಡಿಜಿಟಲ್ ಆಗಿ ಲಭ್ಯವಿರುವ ಒಂದು ಸಂಪರ್ಕಿತ ಪರಿಸರ ವ್ಯವಸ್ಥೆ ಬಹಳ ಮುಖ್ಯ ಎಂದು ಹೇಳಿದರು.
ವರ್ಷಗಳಿಂದೀಚೆಗೆ, ಆರೋಗ್ಯ ಸೇವಾಕರ್ತರು ವಿಶ್ಲೇಷಣಾತ್ಮಕ ಸಾಧನಗಳ ಸಹಾಯದಿಂದ ತಮ್ಮ ಸೇವೆಗಳನ್ನು ಡಿಜಿಟಲೀಕರಣಗೊಳಿಸುವುದು ಅತ್ಯಂತ ನಿರ್ಣಾಯಕವಾಗಿದೆ. ಆಸ್ಟೋಮೇಟ್ಗಳ ಉತ್ತಮ ತಿಳುವಳಿಕೆ ಮತ್ತು ಅವರ ಅವಶ್ಯಕತೆಗಳನ್ನು ಪೂರೈಸಲು ಅಭಿವೃದ್ಧಿಪಡಿಸಲಾಗಿದೆ.
ವೆಬ್ ಅಪ್ಲಿಕೇಷನ್ಗಳು, ಫೋನ್ ಅಪ್ಲಿಕೇಷನ್ಗಳು ಸಂಪರ್ಕಿತ ಪರಿಸರ ವ್ಯವಸ್ಥೆಯನ್ನು ರಚಿಸಲು ದಾರಿ ಮಾಡಿಕೊಡುತ್ತಿವೆ. ರೋಗಿಗಳನ್ನು ಆರೋಗ್ಯ ವೃತ್ತಿ ಪರರೊಂದಿಗೆ ಸಂಪರ್ಕಿಸಲು ಒಂದು ಅನನ್ಯ ವೇದಿಕೆಯನ್ನು ರಚಿಸಲು ಡಿಜಿಟಲೀಕರಣವು ಇದನ್ನು ಸಮಗ್ರ ವಿಧಾನವನ್ನಾಗಿ ಮಾಡಿದೆ.
ಆಸ್ಟಮಿ ರೋಗಿಗಳೊಂದಿಗೆ ಡಿಜಿಟಲ್ ಆಗಿ ಸಂಪರ್ಕ ಸಾಸುವುದು ಆರೋಗ್ಯ ಪೂರೈಕೆದಾರರಿಗೆ ಅವರ ಪರಿಸ್ಥಿತಿಗಳ ಬಗ್ಗೆ ಶಿಕ್ಷಣ ನೀಡಲು, ಅವರ ಜೀವನಶೈಲಿಯ ಆಧಾರದ ಮೇಲೆ ಅವರ ದಿನಚರಿಯನ್ನು ನಿರ್ವಹಿಸಲು ಮತ್ತು ಅವರಿಗೆ ಒಂದು ಸಮುದಾಯವನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
ಭಾರತದಲ್ಲಿ ಆಸ್ಟೋಮಿ ರೋಗಿಗಳಿಗಾಗಿ ಡಿಜಿಟಲ್ ಪ್ಲಾಟ್ಫಾರ್ಮ್ಗಳ ಬಳಕೆಯ ಕುರಿತು ಪ್ರತಿಕ್ರಿಯಿಸಿದ ನವದೆಹಲಿಯ ಇಂದ್ರಪ್ರಸ್ಥ ಅಪೆÇಲೊ ಆಸ್ಪತ್ರೆಗಳ ಹಿರಿಯ ಸಲಹೆಗಾರ ಮತ್ತು ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಜಿಐ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ.ದೀಪಕ್ ಗೋವಿಲ್ ಹೇಳುತ್ತಾರೆ.
ಆಸ್ಟೋಮಿ ರೋಗಿಗಳಿಗೆ ಡಿಜಿಟಲ್ ಸಂಪರ್ಕಿತ ಪರಿಸರ ವ್ಯವಸ್ಥೆ ಬಹಳ ಮುಖ್ಯವಾಗಿದೆ. ರೋಗಿಗಳಿಗೆ ನಿಖರವಾದ ಮಾಹಿತಿಯನ್ನು ಒದಗಿಸಿ, ಆಸ್ಟಮಿ ಬಗ್ಗೆ ಅವರ ಅರಿವನ್ನು ಹೆಚ್ಚಿಸುವಲ್ಲಿ ಅಪ್ಲಿಕೇಷನ್ಗಳು ಪ್ರಯೋಜನಕಾರಿಯಾಗುತ್ತವೆ. ಸ್ಟೊಮಾ ಕೇರ್ ಆರೋಗ್ಯ ಸಿಬ್ಬಂದಿಗಳು ಮತ್ತು ವೈದ್ಯರೊಂದಿಗೆ ಯಾವುದೇ ತೊಂದರೆಯಿಲ್ಲದೆ ಸಂಪರ್ಕ ಸಾಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.