ಎಲ್ಲರಿಗೂ ಹೆಲ್ತ್ ಐಡಿ ಕಾರ್ಡ್ : ಸ್ವಾತಂತ್ರ್ಯ ಸಂಭ್ರಮದಲ್ಲೇ ಮಹತ್ವದ ಯೋಜನೆ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.15-ಸ್ವಾತಂತ್ರ್ಯೂ ದಿನೋತ್ಸವದ ಅಂಗವಾಗಿ ದೇಶದ ಆರೋಗ್ಯವಲಯದಲ್ಲಿ ಮತ್ತೊಂದು ಹೊಸ ಕ್ರಾಂತಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮುನ್ನುಡಿ ಬರೆದಿದ್ದಾರೆ.

ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಅಭಿಯಾನ ಜಾರಿ ಮತ್ತು ದೇಶದ ಪ್ರತಿಯೊಬ್ಬರಿಗೂ ಹೆಲ್ತ್ ಐಡಿ ಕಾರ್ಡ್(ಆರೋಗ್ಯ ಗುರುತು ಚೀಟಿ) ಲಭ್ಯವಾಗಲಿದೆ ಎಂದು ಘೋಷಿಸಿರುವ ಪ್ರದಾನಿ ಮೋದಿ. ಇದು ದೇಶದ ಆರೋಗ್ಯ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಲಿದೆ ಎಂದರು.

74ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ಇಂದು ಬೆಳಗ್ಗೆ ರಾಷ್ಟ್ರೀಯ ತ್ರಿವರ್ಣ ದ್ವಜಾರೋಹಣ ನೆರವೇರಿಸಿ ಪ್ರಧಾನಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು. ದೇಶದಲ್ಲಿ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಅಭಿಯಾನ ಇಂದಿನಿಂದ ಜಾರಿಗೆ ಬರಲಿದೆ.

ಇದರಿಂದ ಆರೋಗ್ಯ ಕ್ಷೇತ್ರವು ಡಿಜಿಟಲ್ ವ್ಯವಸ್ಥೆಗೆ ಒಳಪಡಲಿದೆ. ಆಥುನಿಕತೆಯೊಂದಿಗೆ ನವೀನತೆ ಸ್ಪರ್ಶ ಈ ವಲಯಕ್ಕೆ ಲಭಿಸಲಿದೆ ಎಂದರು. ದೇಶದ ಪ್ರತಿಯೊಬ್ಬರಿಗೂ ಆರೋಗ್ಯ ಐಡಿ ಕಾರ್ಡುಗಳನ್ನು ನೀಡಲಾಗುವುದು.

ಜನರು ಪ್ರತಿ ಬಾರಿ ಕ್ಲಿನಿಕ್‍ಗಳು, ಆಸ್ಪತ್ರೆಗಳು ಅಥವಾ ಔಷ ಅಂಗಡಿಗಳಿಗೆ ಹೋದಾಗ ಹೆಲ್ತ್ ಐಡಿ ಕಾಡ್ ಲಾಗ್ ಆಗುತ್ತದೆ.

ಈ ವೇಳೆ ವೈದ್ಯರೂ ನೀಡುವ ಆರೋಗ್ಯ ಸಲಹೆಗಳು ಮತ್ತು ಔಷಗಳ ಪ್ರತಿಯೊಂದು ವಿವರಗಳು ಆರೋಗ್ಯ ಕಾರ್ಡ್‍ನಲ್ಲಿ ದಾಖಲಾಗುತ್ತದೆ ಎಂದು ಮೋದಿ ತಿಳಿಸಿದರು.

Facebook Comments

Sri Raghav

Admin