ಟೆಲಿ ಐಸಿಯು ಕಾರ್ಟ್ ಉದ್ಘಾಟನೆ ಮಾಡಿದ ಆರೋಗ್ಯ ಸಚಿವ ಶ್ರೀರಾಮುಲು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.2-ಟೆಲಿ ಐಸಿಯು ಕಾರ್ಟ್ ಉದ್ಘಾಟನೆ ಮಾಡಿದ ಆರೋಗ್ಯ ಸಚಿವ ಶ್ರೀರಾಮುಲು ಅವರು, ವಿಕ್ಟೋರಿಯಾ ಅಸ್ಪತ್ರೆ ರೋಗಿ ಜೊತೆ ಮಾತನಾಡಿದರು. ನಗರದ ಬಾಲಬ್ರೂಹಿ ಅತಿಥಿ ಗೃಹದಲ್ಲಿ ಐಸಿಯು ಟೆಲಿ ಕಾರ್ಟ್ ಉದ್ಘಾಟನೆ ಮಾಡಿದರು.

ಕೋವಿಡ್ ರೋಗಿಗಳನ್ನು ವಾರ್ಡ್ ಗೆ ಹೋಗದೇ ಹ್ಯಾಂಡಲ್ ಮಾಡೋ ಸಿಸ್ಟಮ್ ಟೆಲಿ ಐಸಿಯು ಕಾರ್ಟ್. ಕೋವಿಡ್ ವಾರ್ಡ್ ರೋಗಿಗಳಿಗೆ ಚಿಕಿತ್ಸೆ ಮಾಡಿರೋ ಡೆಮೋ ತೋರಿಸಲಾಗಿದೆ. ಐಸಿಯು ವಾರ್ಡ್ ಗೆ ಡಾಕ್ಟರ್ ಗಳು ಹೋಗದೇ ಚಿಕಿತ್ಸೆ ಮಾಡುವ ಸಿಸ್ಕೋದವರು ಡವಲ್ಪ್ ಮಾಡಿರುವ ಹೊಸ ಟೆಕ್ನಾಲಜಿ ಇದಾಗಿದೆ.

ದೂರ ಇದ್ರು ವೈದ್ಯರು ರೋಗಿಗೆ ಈ ತಂತ್ರಜ್ಞಾನದ ಮೂಲಕ ಚಿಕಿತ್ಸೆ ನೀಡಬಹುದಾಗಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು. ಎಲ್ಲಾ ಆಸ್ಪತ್ರೆಗಳಲ್ಲಿ ಕೂಡ ಇದನ್ನು ಬಳಕೆ ಮಾಡಲು ಚರ್ಚೆ ಮಾಡುತ್ತೇವೆ. ಸದ್ಯ ಈಗ ಒಂದನ್ನು ವಿಕ್ಟೋರಿಯ ಹಾಗು ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಹಾಕಲಾಗಿದೆ.

ವೈದ್ಯರ ಸಮೂಹ ಉಳಿಸಬೇಕು ಅಂದರೆ. ಈ ತಂತ್ರಜ್ಞಾನದ ಅವಶ್ಯಕತೆ ಇದೆ. ನನ್ನ ಆಸೆ ಇದೆ ಎಲ್ಲಾ ಆಸ್ಪತ್ರೆಗಳಲ್ಲಿ ಕೂಡ ಮಾಡಬೇಕು.‌ಮೊದಲ ಹಂತದಲ್ಲಿ ವಿಕ್ಟೋರಿಯ ಆಸ್ಪತ್ರೆಯಲ್ಲಿ ಮಾಡಲಾಗಿದೆ. ವಾರ್ಡ್ 2 ಅಂಬ್ಯುಲೆನ್ಸ್ ಮೀಸಲಿಡಲು ಸಿಎಂ ತೀರ್ಮಾನ ಮಾಡಿದ್ದಾರೆ. ಇನ್ನು ಮುಂದೆ ಯಾವುದೇ ಸಮಸ್ಯೆ ಯಾಗುವುದಿಲ್ಲ. ಕಡಿಮೆಯಾದರೆ, ಬಾಡಿಗೆಗೆ ತೆಗೆದುಕೊಳ್ಳುತ್ತೇವೆ.

ಶವಗಾರದಲ್ಲಿ ಕೊರೋನಾ ಟೆಸ್ಟ್ ಆಗದೆ ಶವ ಕೊಡ್ತಾ ಇಲ್ಲ ಅನ್ನೋ ವಿಚಾರದ ಬಗ್ಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ 46 ಟೆಸ್ಟಿಂಗ್ ಲ್ಯಾಬ್ ಇದೆ. ಇದಕ್ಕೆ ಲೋಡ್ ಜಾಸ್ತಿಯಾಗ್ತಾ ಇದೆ. ತಜ್ಞರು ಈ ಬಗ್ಗೆ ನಿನ್ನೆ ಸಿಎಂ ಜತೆ ಚರ್ಚೆಯಲ್ಲಿ ತಿಳಿಸಿದ್ದಾರೆ. ಅದಕ್ಕೆ ಇನ್ನೂ ಹೆಚ್ಚಿನ ಲ್ಯಾಬ್ ಮಾಡಲು ಸಿಎಂ ಆದೇಶ ನೀಡಿದ್ದಾರೆ.

ಶವ ಕೊಡೊದು ಕೂಡ ಲೇಟ್ ಆಗ್ತಾ ಅನ್ನೋ ವಿಚಾರ ಚರ್ಚೆ ಆಗಿದೆ. ಇನ್ನು ಮುಂದೆ ಈ ಸಮಸ್ಯೆ ಆಗೋದಿಲ್ಲ ಪ್ಲಾಸ್ಮಾ ಥೆರಪಿ ಎಲ್ಲಾ ಜಿಲ್ಲೆಗಳನ್ನು ಮಾಡಲು ತೀರ್ಮಾನ. ಪ್ಲಾಸ್ಮಾ ಬ್ಯಾಂಕ್ ಗಳನ್ನು ಎಲ್ಲಾ ಕೇಂದ್ರಗಳಲ್ಲಿ ಆರಂಭ ಮಾಡುತ್ತೇವೆ ಎಂದರು.

ಜುಲೈ 8 ರಿಂದ ಗುತ್ತಿಗೆ ವೈದ್ಯರು ಮುಷ್ಕರಕ್ಕೆ ನಿರ್ಧಾರ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಅವರಿಗೆ ಕೈ ಮುಗಿದು ಮನವಿ ಮಾಡುತ್ತೇನೆ ಸೇವೆ ಮುಂದುವರೆಸಿ. ವೈದ್ಯರ ಎರಡು ಡಿಮ್ಯಾಂಡ್ ಇದೆ ಒಂದು ಸಂಬಳದ್ದು ಇನ್ನೊಂದು ಖಾಯಂ ಆಗಬೇಕು ಎನ್ನುವಂತದ್ದು. ನಿನ್ನೆ ಸಿಎಂ ಕೂಡ ಕರೆದು ಹೇಳಿದ್ದಾರೆ. ಬೇಡಿಕೆ ಬಗ್ಗೆಯು ಮಾತನಾಡಿದ್ದಾರೆ.

ಸಂಬಳ ಹೆಚ್ಚು ಮಾಡಲು ಸಿಎಂ ಕೂಡ ಒಪ್ಪಿದ್ದಾರೆ. ಆದರೆ ಈ ವಿಚಾರ ಸಂಪುಟ ಸಭೆಗೆ ಹೋಗಬೇಕಿದೆ. ಹಾಗಾಗಿ ಅದರ ಬಗ್ಗೆ ಹೆಚ್ಚು ಮಾತನಾಡಲ್ಲ. ನಿಮ್ಮ ಜೊತೆ ನಾವು ಇದ್ದೇವೆ ನಿಮ್ಮ ಬೇಡಿಕೆ ಈಡೇರಿಸುತ್ತೇವೆ ದಯವಿಟ್ಟು ನಿಮ್ಮ ಕೆಲಸ ನಿಲ್ಲಿಸಬೇಡಿ ಎಂದು ಶ್ರೀರಾಮುಲು ಮನವಿ ಮಾಡಿದರು.

ಬಳ್ಳಾರಿಯಲ್ಲಿ ಎಲ್ಲೆಂದರಲ್ಲಿ ಶವಗಳನ್ನು ಎಸೆಯುತ್ತಾ ಇರೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಲ್ಲಿ ನಾಲ್ವರನ್ನು ಸಸ್ಪೆಂಡ್ ಮಾಡಲಾಗಿದೆ. ಘಟನೆ ಕೂಡ ನಮ್ಮ ಗಮನಕ್ಕೆ ಬಂದಿದೆ ಎಂದರು.

Facebook Comments

Sri Raghav

Admin