ಕೊರೋನಾ ಹಿಮ್ಮೆಟ್ಟಿಸಲು ಮುಂದೆಯೂ ಸಹಕರಿಸಿ ; ಶ್ರೀರಾಮುಲು ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ; ಕೊರೋನಾ ಸೋಂಕನ್ನು ದೇಶದಿಂದ ಹಿಮ್ಮೆಟ್ಟಿಸಲು ಪ್ರತಿಯೊಬ್ಬ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶ್ರೀರಾಮುಲು ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೊವಿಡ್ -19 ಕುರಿತು ಮುಂಜಾಗೃತಿ ಕ್ರಮಗಳ‌ ಸಂಬಂಧ ಅಧಿಕಾರಿಗಳ ಸಭೆಯ ಬಳಿಕ ಮಾತನಾಡಿದ ಅವರು ಸದ್ಯದ ಪರಿಸ್ಥಿತಿಯಲ್ಲಿ ಕೊರೋನಾ ಸೋಂಕಿನಿಂದ ದೇಶ ಹೊರ ಬಂದಿಲ್ಲ ; ಜನರಿಗೆ ಹೆಚ್ಚು ಹರಡುವಿಕೆಯನ್ನು ತಡೆಯಲಾಗಿದೆ ಅಷ್ಟೇ ಇನ್ನೂ ಮೂರ್ನಾಲ್ಕು ತಿಂಗಳುಗಳು ಕೊರೋನಾ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ಹೋಗಲಾಡಿಸುವಲ್ಲಿ ಸಾರ್ವಜನಿಕರು ಸರ್ಕಾರ- ವೈದ್ಯರು -ಪೊಲೀಸರೊಂದಿಗೆ ಸಹಕರಿಸಬೇಕಿದೆ ಎಂದರು .

ಮೇ.3 ರ ನಂತರವೂ ಸಹ ಕೊರೋನಾ ವಿರುದ್ಧ ಹೋರಾಟ ಮುಂದುವರಿಯಬೇಕಿದೆ ದೇಶದಲ್ಲಿ ಲಾಕ್ ಡೌನ್ ಮುಂದುವರಿಸ ಬೇಕಾ ಎಂಬ ವಿಚಾರವಾಗಿ ಪ್ರಧಾನಿಯವರ ಸೂಚನೆಯನ್ನು ರಾಜ್ಯದಲ್ಲಿಯೂ ಪಾಲಿಸಲಾಗುವುದು. ಇನ್ನೂ ಒಂದು ವರ್ಷ ಇದೇ ಸುರಕ್ಷತೆ ಹಾಗೂ ಮತ್ತಷ್ಟು ಎಚ್ಚರಿಕೆಯಿಂದ ಇರಬೇಕಾಗಿದೆ ಎಂದು ಸಲಹೆ ನೀಡಿದರು.
ಹಾಸನ ಜಿಲ್ಲೆ ಕೊರೋನಾ ಮುಕ್ತವಾಗಿದ್ದು ಜಿಲ್ಲಾಡಳಿತದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

# ಹಲ್ಲೆಕೊರರಿಗೆ ಕಠಿಣ ಶಿಕ್ಷೆ..!!
ಕೋರೋನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿ ಸುತ್ತಿದೆ ಹಲ್ಲೆ ಮಾಡಿದವರಿಗೆ 5 ವರ್ಷ ಜೈಲು ಹಾಗೂ ದಂಡ ವಿಧಿಸುವ ಕಾನೂನು ಜಾರಿಯಲ್ಲಿದೆ ಎಂದು ತಿಳಿಸಿದರು .

ಪ್ಲಾಸ್ಮ ಥೆರಪಿಗೆ ಆರಂಭಿಕ ಯಶಸ್ಸು ಸಿಕ್ಕಿದ್ದು ಮತ್ತಷ್ಟು ಪರೀಕ್ಷೆ ನಡೆದ ಬಳಿಕ ಇದರ ಉಪಯೋಗವನ್ನು ರಾಜ್ಯದ ಇತರೆಡೆ ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಡಿಆರ್ ಡಿ ಒ ಅಧಿಕಾರಿ ಹರ್ಷವರ್ಧನ್ ಅವರು ನೀಡಿದ ಸಲಹೆ ಮೇರೆಗೆ ಕೊರೋನಾ ಪರೀಕ್ಷೆಯನ್ನು ತ್ವರಿತ ಗೊಳಿಸಲಾಗುವುದು ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಶ್ರೀರಾಮುಲು ಸ್ಪಷ್ಟಪಡಿಸಿದರು.

Facebook Comments

Sri Raghav

Admin