ಸಾರ್ವಜನಿಕ ಸೇವೆಗೆ ಸಿದ್ದಾರ್ಥ ಅಡ್ವಾನ್ಸ್ ಹಾರ್ಟ್ ಸೆಂಟರ್ ಅರ್ಪಣೆ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಅ.27- ಆತ್ಯಾಧುನಿಕ ಉಪಕರಣಗಳು ಮತ್ತು ನುರಿತ ವೈದ್ಯರನ್ನು ಒಳಗೊಂಡ ಹೃದಯ ತಪಾಸಣೆ ಮತ್ತುಚಿಕಿತ್ಸಾ ಕೇಂದ್ರ ಸಿದ್ದಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್ ನಗರದ ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಾರ್ವಜನಿಕ ಸೇವೆಗೆ ಅರ್ಪಣೆಗೊಂಡಿತು. ಅತ್ಯಾಧುನಿಕ ಸೌಲಭ್ಯವುಳ್ಳ ಹೃದಯ ರೋಗ ತಪಾಸಣಾ ಮತ್ತುಚಿಕಿತ್ಸಾ ಕೇಂದ್ರವನ್ನು ನವದೆಹಲಿಯ ಏಮ್ಸ್ ಸಿ.ಟಿ. ಕೇಂದ್ರದ ಪ್ರಾಧ್ಯಾಪಕ ಡಾ.ದೇವಗೌರೌ ವೇಲಾಯುಧನ್ ಲೋಕಾರ್ಪಣೆ ಮಾಡಿ ಮಾತನಾಡಿ ದರು.

ವಿದೇಶಿ ಗುಣಮಟ್ಟದ ಆಧುನಿಕ ಸಲಕರಣೆಗಳನ್ನು ಒಳಗೊಂಡ ನುರಿತ ವೈದ್ಯರತಂಡ ನೂತನ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಲಿದೆ. ಗ್ರಾಮಾಂತರ ಪ್ರದೇಶದ ಜನರಲ್ಲಿ ಇತ್ತೀಚಿಗೆ ಹೆಚ್ಚಾಗುತ್ತಿರುವ ಹೃದಯ ಸಂಬಂಧಿತ ರೋಗಗಳಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ದೊರೆಯುವ ಮಾದರಿ ಕೇಂದ್ರವಾಗಲಿದೆ. ಹೃದಯದಿಂದ- ಹೃದಯಕ್ಕೆ ಎನ್ನುವ ಪರಿಕಲ್ಪನೆಯ ಅನ್ವಯ ಆಸ್ಪತ್ರೆಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ನೀಡಲು ವೈದ್ಯತಂಡ ಕಾರ್ಯನಿರ್ವಹಿಸಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದ ತನಕ ಶಿಕ್ಷಣ ಕ್ರಾಂತ ಮಾಡಿರುವ ಸಂಸ್ಥೆ ಈಗ ಆರೋಗ್ಯ ಸೇವೆಯನು ಇನ್ನುಷ್ಟು ಪ್ರಗತಿ ಸಾಧಿಸಲು ಮುಂದಾಗಿದೆ. ಹೃದಯ ರೋಗ ತಪಾಸಣೆ ಮತ್ತು ಎಲ್ಲ ರೀತಿ ಚಿಕಿತ್ಸೆ ನೀಡಲು ಹೃದಯಕೇಂದ್ರ ಆರಂಭಿಸಿ, ಅದರಲ್ಲಿ ಆಧುನಿಕ ಸೌಲಭ್ಯಗಳ ಮೂಲಕ ಚಿಕಿತ್ಸೆ ನೀಡಲು ಹೊಸ ಸವಾಲಿಗೆ ಮುಂದಾಗಿದ್ದೇವೆ. ಈ ಸೇವೆ ಸಮಾಜಮುಖಿಯಾಗಿರುತ್ತದೆ ಎಂದರು.

ನೂತನ ಕೇಂದ್ರದಲ್ಲಿ ಕೇವಲ ಚಿಕಿತ್ಸೆಯಷ್ಟೆ ಅಲ್ಲದೆ, ಹೃದಯಕ್ಕೆ ಸಂಬಂಧಿಸಿದ ರೋಗಗಳ ಕುರಿತಾದ ಸಂಶೋಧನೆ, ಹೊಸ ಆವಿಷ್ಕಾರಗಳನ್ನು ನಡೆಸುವುದು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಪ್ರಾಯೋಗಿಕ ಅಧ್ಯಯನಕ್ಕೆ ಪೂರಕವಾದ ವಾತಾವರಣವನ್ನುತರಲಾಗುತ್ತದೆ. ಇದರಿಂದ ವೈದ್ಯಕೀಯಕ್ಷೇತ್ರದಲ್ಲಿಉನ್ನತಅಧ್ಯಯನಕ್ಕೆ ವಿದೇಶಕ್ಕೆ ಹೋಗಬೇಕಂಬ ಹಂಬಲವಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್ ಮುಖ್ಯಸ್ಥ ಡಾ. ತಮಿನ್ ಅಹಮದ್ ಮಾತನಾಡಿ, ಶಿವಮೋಗ್ಗದಿಂದ -ಬೆಂಗಳೂರು, ದಾವಣೆಗೆರೆಯಿಂದ ಬೆಂಗಳೂರು ಮಾರ್ಗ, ಮೃಸೂರು-ತುಮಕೂರು ನಡುವೆ ಸುಸಜ್ಜಿತ ಹೃದಯ ಆಸ್ಪತ್ರೆ ಇಲ್ಲದಿರುವುದನ್ನು ಮನಗಂಡ ಸಿದ್ದಾರ್ಥ ಸಂಸ್ಥೆ ನೂತನವಾಗಿ ಹೃದಯ ರೋಗ ಚಿಕಿತ್ಸಾ ಘಟಕ ತೆರೆಯುತ್ತಿರುವುದರಿಂದ ಜನಸಾಮಾನ್ಯರಿಗೆ ಉಪಯೋಗವಾ ಗಲಿದೆ ಎಂದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಡಾ.ಜಿ.ಎಸ್.ಆನಂದ್, ಕನ್ನಿಕಾ ಪರಮೇಶ್ವರ, ಉಪಕುಲಪತಿ ಡಾ.ಪಿ.ಬಾಲಕೃಷ್ಣ ಶೆಟ್ಟಿ, ಸಿಇಒ ಪಿ.ಕೆ.ಡಾ.ದೇವದಾಸ್, ಪ್ರಾಂಶುಪಾಲರಾದ ಡಾ. ಎ.ಜಿ.ಶ್ರೀನಿವಾಸಮೂರ್ತಿ, ಉಪ ಪ್ರಾಂಶುಪಾಲರಾದ ಡಾ.ಪ್ರಭಾಕರ್, ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅತಿಕ್, ಜಿಲ್ಲಾ ಆರೋಗ್ಯ ಇಲಾಖೆಯ ವೈದ್ಯಾಧೀಕಾರಿ ಡಾ.ವೀರಭದ್ರಯ್ಯ, ಮಾಜಿ ಶಾಸಕ ಷಫಿ ಅಹಮ್ಮದ್, ಸಾಹೇ ವಿವಿಕುಲಸಚಿವರಾದ ಡಾ.ಎಂ.ಝಡ್ ಕುರಿಯನ್ ಮತ್ತಿತರರು ಭಾಗವಹಿಸಿದ್ದರು.

Facebook Comments