‘9 ಲಕ್ಷ ಕೊಟ್ರೆ ಮಾತ್ರ ಮೃತದೇಹ ಕೊಡ್ತೀವಿ’ : ಕ್ರೂರತೆ ಮೆರೆದ ಧನದಾಹಿ ಖಾಸಗಿ ಆಸ್ಪತ್ರೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.24- ಒಂಬತ್ತು ಲಕ್ಷ ನೀಡದಿದ್ದರೆ ಮೃತದೇಹ ನೀಡಲು ಸಾಧ್ಯವಿಲ್ಲ ಎಂದು ಒಂದು ದಿನದಿಂದ ಖಾಸಗಿ ಆಸ್ಪತ್ರೆಯವರು ಸತಾಯಿಸುತ್ತಾ ತನ್ನ ಕ್ರೂರತೆಯನ್ನು ಮೆರೆದಿದ್ದಾರೆ.

ನಗರದ ಮಹದೇವಪುರದಲ್ಲಿ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಮೃತ ಮಹಿಳೆಯ ಶವವನ್ನು ವಾರಸುದಾರರಿಗೆ ನೀಡದೆ ಹಣಕ್ಕಾಗಿ ಸತಾಯಿಸುತ್ತಿದ್ದಾರೆ.

ಹಣ ಕೊಟ್ಟು ಮೃತದೇಹವನ್ನು ತೆಗೆದುಕೊಂಡು ಹೋಗುವಂತೆ ಒತ್ತಡ ಹೇರುತ್ತಿರುವುದು ಅಮಾನವೀಯತೆಗೆ ಸಾಕ್ಷಿಯಾಗಿದೆ.

46 ವರ್ಷದ ಬಿ.ಆಫ್ರೋಜ್ ಎಂಬ ಮಹಿಳೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.ಐಸಿಯುನಲ್ಲಿ ಚಿಕಿತ್ಸೆ ನೀಡಬೇಕೆಂದು ವೈದ್ಯರು ಹೇಳಿದ್ದರು. ಈ ಸುದ್ದಿ ಕೇಳಿದಾಕ್ಷಣ ಮಹಿಳೆ ಗಂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ತಂದೆಯ ಅಂತ್ಯಕ್ರಿಯೆ ಮುಗಿಸಿಬಂದ ಮಗನಿಗೂ ಕೂಡ ಹೃದಯಾಘಾತವಾಗಿ ಎರಡು ದಿನಗಳ ಬಳಿಕ ಸಾವನ್ನಪ್ಪಿದ್ದಾನೆ. ನಿನ್ನೆ ಮುಂಜಾನೆ 8.45ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದು, ಆ ಮೃತದೇಹ ಕೊಡಬೇಕಾದರೆ ಬಿಲ್ ಪಾವತಿ ಮಾಡುವಂತೆ ಆಸ್ಪತ್ರೆಯವರು ಒತ್ತಾಯಿಸಿದ್ದಾರೆ.

ಅಲ್ಲದೆ, ಬಿಬಿಎಂಪಿಯವರು ಹೇಳಿದರೆ ಮೃತದೇಹ ನೀಡುವುದಾಗಿ ಸಿಬ್ಬಂದಿ ಹೇಳುತ್ತಾರೆ. ಬಿಬಿಎಂಪಿಯವರಿಗೆ ಕರೆ ಮಾಡಿ ನಾವು ಮಾತನಾಡಿದ್ದೇವೆ, ನಿಮಗೆ ಅವರು ಮೃತದೇಹ ನೀಡುತ್ತಾರೆ.

ನೀವು ಪಡೆದುಕೊಳ್ಳಿ ಎಂದು ಅವರು ಹೇಳುತ್ತಾರೆ. ಮೃತದೇಹಕ್ಕಾಗಿ ಆಸ್ಪತ್ರೆ ಮುಂದೆ ನಿನ್ನೆಯಿಂದ ಕುಟುಂಬದವರು ಪರದಾಡುತ್ತಿದ್ದಾರೆ.

 

 

Facebook Comments

Sri Raghav

Admin