ಬೆಂಗಳೂರಲ್ಲಿ ದೀಪಾವಳಿ ಬದಲು ಶಿವರಾತ್ರಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.28- ನಗರದಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಎಸ್‍ಎಸ್‍ಆರ್ ಬಡಾವಣೆಯ ನಿವಾಸಿಗಳು ದೀಪಾವಳಿ ಬದಲು ಶಿವರಾತ್ರಿ ಜಾಗರಣೆ ಆಚರಿಸುವಂತಾಯಿತು.

ಪ್ರತಿ ಬಾರಿ ಮಳೆ ಸುರಿದಾಗಲೂ ಎಚ್‍ಎಸ್‍ಆರ್ ಬಡಾವಣೆಯ ಎರಡು ಮತ್ತು ಮೂರನೆ ಸೆಕ್ಟರ್‍ಗಳಲ್ಲಿ ನೀರು ತುಂಬಿಕೊಳ್ಳುವುದು ಸರ್ವೇ ಸಾಮಾನ್ಯ. ಪ್ರತಿ ಬಾರಿ ಮಳೆಯಾದಾಗಲೂ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರೂ ಇದುವರೆಗೂ ಅದು ಸಾಧ್ಯವಾಗಿಲ್ಲ.

ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಎರಡು ಮತ್ತು ಮೂರನೆ ಸೆಕ್ಟರ್‍ಗಳ ರಸ್ತೆಗಳಲ್ಲಿ ಆಳುದ್ದ ನೀರು ನಿಂತಿದ್ದಲ್ಲದೆ ಮನೆಗಳಿಗೂ ನೀರು ನುಗ್ಗಿತು. ಮನೆಗಳಿಗೆ ನೀರು ನುಗ್ಗಿದ್ದರಿಂದ ದೀಪಾವಳಿ ಆಚರಿಸುವ ಸಂಭ್ರಮದಲ್ಲಿದ್ದ ಸ್ಥಳೀಯರು ಶಿವರಾತ್ರಿ ಜಾಗರಣೆ ಆಚರಿಸುವಂತಾಯಿತು.

ಘಟನಾ ಸ್ಥಳಕ್ಕೆ ಶಾಸಕ ಸತೀಶ್ ರೆಡ್ಡಿ , ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸಮಸ್ಯೆ ಬಗೆಹರಿಸದ ಬಿಬಿಎಂಪಿ ಧೋರಣೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ಬಾರಿ ಅನಾಹುತವಾದಾಗ ಸ್ಥಳಕ್ಕೆ ಭೇಟಿ ನೀಡುತ್ತೀರಾ ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡುತ್ತೀರಾ. ಈಗಲೂ ನೀವು ಬಂದು ಸಮಸ್ಯೆ ಕೇಳುತ್ತಿದ್ದೀರಾ. ಇಲ್ಲಿಂದ ಹೋದ ನಂತರ ಮತ್ತೆ ಇತ್ತ ತಲೆ ಹಾಕುವುದಿಲ್ಲ ಎಂದು ಸ್ಥಳೀಯರು ಶಾಸಕ ಮತ್ತು ರಂದೀಪ್ ಅವರನ್ನು ತರಾಟೆಗೆ ತೆಗೆದುಕೊಂಡರು.

Facebook Comments

Sri Raghav

Admin