ವರುಣನ ಅರ್ಭಟಕ್ಕೆ ನೂರಾರು ಮನೆ ಕುಸಿತ, ಬಾಲಕಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಮುದ್ದೇಬಿಹಾಳ, ಸೆ.27- ವರುಣನ ಆರ್ಭಟಕ್ಕೆ ಅಜ್ಜಿಯ ಮನೆಗೆ ತೆರಳಿದ್ದ ಬಾಲಕಿಯೊಬ್ಬಳು ಬಲಿಯಾಗಿರುವ ಘಟನೆ ತಾಲ್ಲೂಕಿನ ಡೋಂಕಮಡು ಗ್ರಾಮದಲ್ಲಿ ನಡೆದಿದೆ.

ಅಜ್ಜಿಯ ಮನೆಗೆ ತೆರಳಿದ್ದ ಮರೆಮ್ಮ ಹುಲಗಪ್ಪ ಬಿಜ್ಜೂರ(11) ಮೃತ ಬಾಲಕಿ. ತಾಲೂಕಿನಲ್ಲಿ ವರುಣನ ಅರ್ಭಟ ಎರಡನೆ ದಿನಕ್ಕೆ ಕಾಲಿಟ್ಟಿದ್ದು ವಿವಿಧ ಗ್ರಾಮಗಳಲ್ಲಿ ನೂರಾರು ಮನೆಗಳು ಕುಸಿಯುತ್ತಿವೆ.

ಮೂಲತಃ ಅಬ್ಯಾಳ ಗ್ರಾಮದವಳಾದ ಬಾಲಕಿ ನಿನ್ನೆ ಅಜ್ಜಿಯ ಮನೆಗೆ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ. ರೇಕಾ ಲೋಟಗೇರಿ ಎಂಬ ಇನ್ನೋರ್ವ ಬಾಲಕಿಗೆ ಗಾಯವಾಗಿದ್ದ ಗಾಯಾಳುವಾಗಿದ್ದು , ಚಿಕಿತ್ಸೆ ಪಡೆಯುತ್ತಿದ್ದಾಳೆ.

ಡೋಂಕಮಡು ಗ್ರಾಮಕ್ಕೆ ತಹಶೀಲ್ದಾರ ಜಿ.ಎಸ್.ಮುಳಜಿ , ಕಂದಾಯ ನಿರೀಕ್ಷಕ ಎನ್.ಬಿ.ಮಾವಿನಮಟ್ಟಿ , ಗ್ರಾಮ ಲೆಕ್ಕಾಕಾರಿ ಆರ್.ಎಸ್.ಹೋಸುರ , ಕಾರ್ಯದರ್ಶಿ ಗುರಡ್ಡಿ ಬಿರಾದಾರ ಭೇಟಿ ನೀಡಿ ಮೃತ ಬಾಲಕಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದು ಸರ್ಕಾರದಿಂದ ಬರುವ ಪರಿಹಾರವನ್ನು ಶೀಘ್ರವಾಗಿ ತಲುಪಿಸಲಾಗುವುದು ಎಂದು ತಿಳಿಸಿದ್ದಾರೆ.

ಇದಲ್ಲದೆ ತಾಲೂಕಿನ ಜಕ್ಕೇರಾಳ ಗ್ರಾಮದಲ್ಲಿ ನಿಂಗಪ್ಪ ಇಂಗಳಗೇರಿ ಎನ್ನುವವರ ಮನೆ ಗೋಡೆ ಕುಸಿದು ಮನೆಯ ಪಕ್ಕದಲ್ಲಿ ಕಟ್ಟಿದ್ದ ಮೇಕೆಯೊಂದು ಮೃತಪಟ್ಟಿದೆ. ದೇವುರ, ಚಿರ್ಚನಕಲ್, ಕವಡಿಮಟ್ಟಿ, ನಾಗರಾಳ, ಮುದೂರ, ಯರಝರಿ, ಕುಂಚಗನೂರ, ಜಂಗಮುರಾಳ, ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಮನೆ ಕುಸಿದು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾಲೂಕಿನ ಚವನಬಾವಿ ಗ್ರಾಮದಲ್ಲಿ 12 ಮನೆಗಳು ಕುಸಿದಿದ್ದು , ಬಸಮ್ಮ ಹಣಮಂತ ಪೂಜಾರಿ ಮತ್ತು ಕಸ್ತೂರಿ ಬಾಯಿ ಹಿರೇಮಠ ಇವರ ಮನೆಗಳು ಸಂಪೂರ್ಣವಾಗಿ ಕುಸಿದಿವೆ. ಮಳೆ ನಿರಂತರವಾಗಿ ಸುರಿಯುತ್ತಿರುವ ಕಾರಣ ಕೈಯಲ್ಲಿ ಜೀವ ಹಿಡಿದುಕೊಂಡು ಬದುಕುವಂತಾಗಿದೆ.

ಪ್ರತಿ ವರ್ಷಕ್ಕಿಂತ ಈ ವರ್ಷ ಮಳೆಯ ಆರ್ಭಟಕ್ಕೆ ಸಜ್ಜೆ, ತೊಗರಿ ಬೆಳೆ ಸಂಪೂರ್ಣ ನಾಶವಾಗುವ ಹಂತಕ್ಕೆ ಬಂದಿವೆ. ತಾಲೂಕು ಆಡಳಿತವು ಕೂಡಲೇ ಮನೆ ಕುಸಿದಿರುವವರಿಗೆ ಮತ್ತು ಬೆಳೆ ನಾಶವಾದ ರೈತರಿಗೆ ಕೂಡಲೆ ಪರಿಹಾರ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Facebook Comments

Sri Raghav

Admin