ಭಾರೀ ಮಳೆಗೆ ತತ್ತರಿಸಿದ ವಾಣಿಜ್ಯ ನಗರಿ ಮುಂಬೈ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.4- ಭಾರೀ ಮಳೆಯಿಂದ ವಾಣಿಜ್ಯ ನಗರಿ ಮುಂಬೈನಲ್ಲಿ ಜನಜೀವನ ಸಂಪೂರ್ಣ ಸ್ತಬ್ಧಗೊಂಡಿದೆ. ಕೊರೊನಾ ಹೊಡೆತದಿಂದ ಈಗಾಗಲೇ ತತ್ತರಿಸಿರುವ ಮಹಾನಗರಿಗೆ ಈಗ ವರುಣನ ಆರ್ಭಟದಿಂದ ಮತ್ತಷ್ಟು ಸಂಕಷ್ಟ ಎದುರಾಗಿದೆ.

ಕಳೆದೆರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಇಡೀ ಮುಂಬೈ ನಗರ ನೀರಿನಿಂದ ಆವೃತವಾಗಿದೆ. ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಮನೆಯಿಂದ ಹೊರಬರಲು ಜನರು ಪರಿತಪಿಸುತ್ತಿದ್ದಾರೆ.

ಬೃಹತ್ ಮುಂಬೈ ಮಹಾನಗರ ಪಾಲಿಕೆ ತುರ್ತು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇಂದು ಇಡೀ ದಿನ ಎಲ್ಲ ಸರ್ಕಾರಿ ಕಚೇರಿಗಳು, ವಾಣಿಜ್ಯ ಮಳಿಗೆಗಳು ಸೇರಿದಂತೆ ಎಲ್ಲ ವ್ಯವಹಾರಗಳೂ ಬಂದ್ ಆಗಲಿವೆ.

ಅಗತ್ಯ ವಸ್ತುಗಳ ಸೇವೆಯನ್ನು ಮುಂದುವರಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಅಕ್ಕಪಕ್ಕದ ಜಿಲ್ಲೆಗಳಿಗೂ ಸಂಪರ್ಕ ಕಡಿತಗೊಂಡಿದ್ದು, ವಿದ್ಯುಚ್ಛಕ್ತಿ ಕೂಡ ಕಡಿತಗೊಂಡಿದೆ. ಒಟ್ಟಾರೆ ಮುಂಬೈ ಮಹಾನಗರ ದ್ವೀಪದಂತೆ ಕಾಣಿಸುತ್ತಿದೆ.

Facebook Comments

Sri Raghav

Admin