ಸಿಲಿಕಾನ್ ಸಿಟಿಯಲ್ಲಿ ಮುಂದುವರೆದ ಮಳೆ ಅವಾಂತರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.16- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಅವಾಂತರ ಮುಂದುವರೆದಿದ್ದು, ರಾತ್ರಿ ಸುರಿದ ಮಳೆಯಿಂದಾಗಿ ಎರಡು ತಡೆಗೋಡೆಗಳು ನೆಲಸಮವಾದರೆ, ಹಲವು ಕಡೆಗಳಲ್ಲಿ ಮರಗಳು ನೆಲಕ್ಕುರಳಿವೆ.ಎಡಬಿಡದೆ ಸುರಿಯುತ್ತಿರುವ ಮಹಾ ಮಳೆಗೆ ಮೂರು ವರ್ಷಗಳ ಹಿಂದೆ ಬಿಬಿಎಂಪಿ ನಿರ್ಮಿಸಿದ್ದ ಗೋಡೆಯೊಂದು ಬಿದ್ದಿರುವ ಘಟನೆ ದಾಸರಹಳ್ಳಿ ಕ್ಷೇತ್ರದ ಮಲ್ಲಸಂದ್ರದಲ್ಲಿರುವ ಕೆಂಪೇಗೌಡ ಪಾರ್ಕïನಲ್ಲಿ ನಡೆದಿದೆ.

ಕಳಪೆ ಕಾಮಗಾರಿಯಿಂದ 25 ಅಡಿ ಎತ್ತರದ ಕೋಟೆಯ ಗೋಡೆ ಕುಸಿದಿದೆ. 7 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಕೆಂಪೇಗೌಡ ಬೃಹತ್ ಪಾರ್ಕ್ ಇದಾಗಿದ್ದು, ಪಾರ್ಕ್ನಲ್ಲಿ ಆಡಿಟೋರಿಯಂ, ಪ್ರತಿಮೆಗಳು ಸೇರಿದಂತೆ 24 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಪಾಲಿಕೆ ಕೈಗೊಂಡಿತ್ತು.

ಅದೇ ರೀತಿ, ಎಲೆಕ್ಟ್ರಾನಿಕ್ ಸಿಟಿ ಬಳಿಯ ವಿಪ್ರೊ ಕಂಪೆನಿಯ ತಡೆಗೋಡೆ ಕುಸಿತಗೊಂಡಿದ್ದು, ಕಂಪೆನಿಯ ಒಳಗೆ ಮಳೆ ನೀರು ನುಗ್ಗಿದೆ. ಜತೆಗೆ ಗೋಡೆ 3ರಿಂದ 4 ಕಡೆ ಬಿರುಕು ಬಿಟ್ಟಿದೆ. ಎರಡು ವರ್ಷಗಳ ಹಿಂದೆ ಇದೇ ರೀತಿ ತಡೆಗೋಡೆ ಕುಸಿದಿತ್ತು. ಇನ್ನಷ್ಟು ಮಳೆಯಾದರೆ ಸಂಪೂರ್ಣ ಕಾಂಪೌಂಡ್ ಕುಸಿಯುವ ಆತಂಕ ಎದುರಾಗಿದೆ.

ಇನ್ನು ನಗರದ ಅಲ್ಲಲ್ಲಿ ಮರಗಳು ಧರೆಗೆ ಉರುಳಿ ಬೀಳುತ್ತಿವೆ. ಯಶವಂತಪುರದ ಮೈಸೂರು ಲ್ಯಾಂಕ್ಸ್ ರಸ್ತೆಯಲ್ಲಿ ಬೃಹತ್ ಮರ ಉರುಳಿದ್ದು, ಅದೃಷ್ಟವಶಾತ್ ಯಾರಿಗೂ ಹಾನಿಯಾಗಿಲ್ಲ. ಎರಡೂ ರಸ್ತೆಗಳಿಗೆ ಸಂಪೂರ್ಣ ಅಡ್ಡಲಾಗಿ ಪಾದಚಾರಿ ಮಾರ್ಗದಲ್ಲಿದ್ದ ಮರ ಬಿದ್ದಿದೆ ಸಾರ್ವಜನಿಕ ರಿಗೆ ತೊಂದರೆಯಾಗಿದೆ.

ಓಂಬರ್ ಲೇಔಟïನ, ಸಿಎಂಆರ್ ಲಾ ಕಾಲೇಜ್ ಬಳಿ ಮೊದಲನೇ ಕ್ರಾಸ್ನಲ್ಲಿ ಮರ ಬಿದ್ದಿದ್ದು ತೆರವು ಮಾಡಲಾಗಿದೆ. ಹೈಗ್ರೌಂಡ್ ಹಾಗೂ ಕೆಆರ್ ಗಾರ್ಡನ್ ಮೊದಲನೆ ಹಂತದಲ್ಲೂ ಮರ ಬಿದ್ದಿದ್ದು ತೆರವುಗೊಳಿಸಲಾಯಿತು. ಪಶ್ಚಿಮ ವಲಯದಲ್ಲಿ ಕಡಿಮೆ ಮಳೆಯಾಗಿದ್ದು, ಯಾವುದೇ ಸಮಸ್ಯೆ ಆಗಿಲ್ಲ.

ದಕ್ಷಿಣ ವಲಯ: ಈ ವಲಯದಲ್ಲಿ ಅತ್ಯಕ ಮಳೆಯಾಗಿದೆ. ಕುಮಾರಸ್ವಾಮಿ ಲೇಔಟ್ನ ಇಸ್ರೋ ಲೇಔಟ್ ಬಸ್ ನಿಲ್ದಾಣದಲ್ಲಿ ಮರಗಳು ಧರೆಗುರುಳಿದ್ದು, ತೆರವು ಮಾಡಲಾಗಿದೆ.ಪ್ರತಿಕ್ರಿಯೆ: ಮಳೆ ಕುರಿತು ಪ್ರತಿಕ್ರಿಯಿಸಿದ ಪಾಲಿಕೆ ಅಕಾರಿಯೊಬ್ಬರು, ಆರ್ಆರ್ ನಗರದಲ್ಲಿ ಸಾಧಾರಣ ಮಳೆಯಾಗಿದ್ದು, ನಾಗದೇವನಹಳ್ಳಿಯಲ್ಲಿ ಕಟ್ಟಡದ ಸ್ಲೇರ್ ಒಳಗೆ ನೀರು ತುಂಬಿದೆ.

ಈ ಬಗ್ಗೆ ಪಾಲಿಕೆಗೆ ದೂರು ಬಂದಿದ್ದು, ಸ್ಥಳೀಯ ಇಂಜಿನಿಯರ್ ಗಮನಕ್ಕೆ ತರಲಾಗಿದೆ. ಮಹದೇವಪುರದಲ್ಲಿ ಸಾಧಾರಣ ಮಳೆಯಾಗಿದ್ದು, ಪೈ ಲೇಔಟ್ಗೆ ನೀರು ನುಗ್ಗಿದೆ ಎಂದರು.ಒಟ್ಟಾರೆ, ನಗರದಲ್ಲಿ ಶುಕ್ರವಾರ ಸಂಜೆ ಹಾಗೂ ರಾತ್ರಿ ವೇಳೆ ಒಟ್ಟು 15 ಮಿ.ಮೀ ಮಳೆಯಾಗಿದೆ. ಇಂದು ಮತ್ತು ನಾಳೆಯೂ ಮೋಡಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆಯಾಗಲಿದೆ.

# ಬೀಳುವ ಹಂತದಲ್ಲಿವೆ ಸರ್ಕಾರಿ ಲೋಕೋಪಯೋಗಿ ಕ್ವಾಟ್ರರ್ಸ್
-ನಗರದಲ್ಲಿ ಬೀಳುವ ಹಂತದಲ್ಲಿವೆ ಸರ್ಕಾರಿ ಲೋಕೋಪಯೋಗಿ ಕ್ವಾಟ್ರರ್ಸ್ಗಳು. ಶಾಂತಿನಗರದ ಬಳಿ ಇರುವ ಬಿಲ್ಡಿಂಗ್ ಆಗಲೋ, ಈಗಲೋ ಬೀಳುವ ಹಂತದಲ್ಲಿದೆ. ಬಿಲ್ಡಿಂಗ್ ಕಟ್ಟಿ 60-70 ವರ್ಷ ಆಗಿದೆಯಂತೆ. ಆದರೆ, ಅಲ್ಲಲ್ಲಿ ಗೋಡೆಗಳು ಬಿರುಕು ಬಿಟ್ಟಿದ್ದು ಯಾವಾಗ ಉರುಳಲಿದೆಯೋ ತಿಳಿಯದು.

# ಕುಸಿಯುವ ಹಂತದಲ್ಲಿರುವ ಮನೆಗಳು:
ಶಾಂತಿನಗರದಲ್ಲಿ ಎಷ್ಟೋ ಮನೆಗಳು ಕುಸಿಯುವ ಹಂತದಲ್ಲಿವೆ. ಗ್ರೌಂಡ್ ಫ್ಲೋರ್ ನಲ್ಲಿ ಯಾರೂ ವಾಸ ಮಾಡುತ್ತಿಲ್ಲ. ಆದರೆ ಮಳೆ ಬಂದರೆ ಸಾಕು, ಮನೆ ಒಳಗೆ ಬರತ್ತದೆ. ಮಳೆ ನೀರು ನುಗ್ಗುತ್ತದೆ. ಹಾಗಾಗಿ ಪ್ರತಿದಿನ ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ ಇಲ್ಲಿನ ನಿವಾಸಿಗಳು. ಯಾವಾಗ ಮನೆ ಬೀಳುತ್ತೋ, ಏನಾಗುತ್ತೋ ಎಂಬ ಭಯ ಅವರನ್ನು ಕಾಡುತ್ತಿದೆ.

Facebook Comments

Sri Raghav

Admin