ಗಾಳಿ-ಮಳೆಯ ರಭಸಕ್ಕೆ ತಲೆ ಮೇಲೆ ಇಟ್ಟಿಗೆ ಬಿದ್ದು ಯುವತಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ನಗರದಲ್ಲಿ ನಿನ್ನ ಸಂಜೆ ಸುರಿದ ಗಾಳಿ ಸಮೇತ ಭಾರಿ ಮಳೆಯಿಂದಾಗಿ, ನಂದಿನಿ ಲೇಔಟ್ ನ ರಾಮಣ್ಣ ಬಡಾವಣೆಯಲ್ಲಿ ದುರ್ಘಟನೆಯೊಂದು ನಡೆದಿದೆ

ಮಳೆ ಮತ್ತು ಗಾಳಿ ರಭಸಕ್ಕೆ ನಿರ್ಮಾಣ ಹಂತದಲ್ಲಿದ್ದ 3ನೇ ಹಂತಸ್ತಿನ ಕಟ್ಟಡದಿಂದ ಇಟ್ಟಿಗೆ ಜಾರಿ ಪಕ್ಕದ ಮನೆಯ ಸೀಟಿನ ಮೇಲೆ ಬಿದ್ದಿದೆ.ಈ ವೇಳೆ ಸೀಟಿನ ಮನೆಯಲ್ಲಿ ವಾಸವಿದ್ದ ರಾಜಣ್ಣ ಅವರ ಮಗಳು ಶಿಲ್ಪ (21) ವರ್ಷ ಬಿಎಸ್ ಸಿ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದರು.

ಅವರ ತಲೆ ಮೇಲೆ ಇಟ್ಟಿಗೆ ಬಿದ್ದಿದ್ದು ಪರಿಣಾಮ ತೀವ್ರಾಗಿವಾಗಿ ಗಾಯಗೊಂಡಿದ್ದ ಶಿಲ್ಪ ಅವರನ್ನ ತಕ್ಷಣವೇ ನಂದಿನಿ ಲೇಔಟ್ ನ ಕಣ್ವಾ ಆಸ್ಪತ್ರೆಗೆ ಸೇರಿಸಲಾಗಿತ್ತು, ಆದರೆ ಅಷ್ಟರಲ್ಲೇ ಶಿಲ್ಪರವರ ಪ್ರಾಣಪಕ್ಷಿ ಹಾರಿ ಹೋಗಿದೆ.

ಈ ವಿಷಯ ತಿಳಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ ಗೋಪಾಲಯ್ಯನವರು ಆಸ್ಪತ್ರೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ 50 ಸಾವಿರ ರೂಪಾಯಿ ಹಣವನ್ನು ಪರಿಹಾರವಾಗಿ ನೀಡಿದ್ದರು.
ಸ್ಥಳಕ್ಕೆ ಬಿ ಬಿ ಎಂ ಪಿ ಅಧಿಕಾರಿಗಳು ನಂದಿನಿ ಲೇಔಟ್ ಪೋಲಿಸ್ ಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

Facebook Comments

Sri Raghav

Admin