ಮಳೆಯಿಂದ ಮುಳುಗಿದ ದೆಹಲಿ, ಪಂಜಾಬ್-ರಾಜಸ್ತಾನದಲ್ಲಿ ಜನ ಜೀವನ ಅಯೋಮಯ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.20- ರಾಜಧಾನಿ ನವದೆಹಲಿ ನಿರಂತರ ಭಾರೀ ಮಳೆಯಿಂದ ಮತ್ತೆ ತತ್ತರಿಸಿದೆ. ದೆಹಲಿ-ರಾಷ್ಟ್ರರಾಜಧಾನಿ ಪ್ರಾಂತ್ಯ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಧಾರಾಕಾರ ವರ್ಷಧಾರೆಯಿಂದ ಬಹುತೇಕ ಪ್ರದೇಶಗಳು ಜಲಾವೃತವಾಗಿವೆ.

ಸತತ ಮಳೆಯಿಂದಾಗಿ ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಎತ್ತ ನೋಡಿದರೂ ರಸ್ತೆಗಳು ಹೊಳೆಯಾಗಿ ಪರಿಣಮಿಸಿದೆ. ಅನೇಕ ವಾಹನಗಳು ಮಳೆ ನೀರಿನಲ್ಲಿ ಭಾಗಶಃ ಮುಳುಗಡೆಯಾಗಿದೆ.

ರಸ್ತೆಗಳು ಸಂಪೂರ್ಣ ಜಲಾವೃತವಾಗಿರುವುದರಿಂದ ವಾಹನಗಳು ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗಿದ್ದು, ಜನಜೀವನ ಅತಂತ್ರವಾಗಿದೆ.

ನಿರಂತರ ಮಳೆಯಿಂದಾಗಿ ದೆಹಲಿಯ ಜನತೆ ಮನೆಯೊಳಗೆ ಬಂಯಗಿದ್ದಾರೆ. ಹೊರಗೆ ಹೋದವರು ಮರಳಿ ಮನೆಗೆ ಹಿಂದಿರುಗಲಾಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಮುಂದಿನ 48 ಗಂಟೆಗಳಲ್ಲಿ ದೆಹಲಿಯಲ್ಲಿ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ರಕ್ಷಣಾ ದಳಗಳು ಪರಿಸ್ಥಿತಿ ನಿಭಾಯಿಸಲುತೀವ್ರಕಟ್ಟೆಚ್ಚರ ವಹಿಸಿವೆ. ಪಂಜಾಬ್ ಮತ್ತುರಾಜಸ್ತಾನ ರಾಜ್ಯಗಳಲ್ಲೂ ವರುಣಾರ್ಭಟದಿಂದ ಅಪಾರ ಹಾನಿ ಸಂಭವಿಸಿದೆ.

ಮಧ್ಯ ಭಾರತದಲ್ಲಿ ಮುಂದಿನ ಐದು ದಿನಗಳಲ್ಲಿ ಭಾರೀ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ತೀವ್ರಕಟ್ಟೆಚ್ಚರ ವಹಿಸಲಾಗಿದೆ.

ಉತ್ತರ ಭಾಗದ ಬಳಿಕ ದೇಶ ಪೂರ್ವ ಮತ್ತು ಪಶ್ಚಿಮ ಬಾರತದಲ್ಲಿ ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತಗಳು ಸಂಭಿವಿಸಿದ್ದು, ಸಾವು-ನೋವು, ಆಸ್ತಿ-ಪಾಸ್ತಿ ನಷ್ಟದೊಂದಿಗೆ ಲಕ್ಷಾಂತರ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮತ್ತು ಕೇಂದ್ರೀಯ ಜಲ ಆಯೋಗ (ಸಿಡಬ್ಲ್ಯುಸಿ) ಹಲವು ರಾಜ್ಯಗಳಿಗೆ ನೆರೆ ಹಾವಳಿ ಬಗ್ಗೆ ಎಚ್ಚರಿಕೆ ನೀಡಿದೆ. ದೇಶದ ಉತ್ತರ ಭಾಗದಲ್ಲಿ ಮತ್ತೆ ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತಗಳು ಸಂಭವಿರುವ ಸಾಧ್ಯತೆ ಬಗ್ಗೆ ಮುನ್ಸೂಚನೆ ನೀಡಿದೆ.

ದೇಶದ ಹಲವಾರು ರಾಜ್ಯಗಳಲ್ಲಿ ಮುಂಗಾರು ಮಳೆ ಆರ್ಭಟತಿ ೀವ್ರಗೊಂಡಿದೆ. ಮಹಾರಾಷ್ಟ್ರ, ಬಿಹಾರ, ಉತ್ತರಪ್ರದೇಶ, ಅಸ್ಸಾಂ, ಪಂಬಾಬ್,ರಾಜಸ್ತಾನ, ಗುಜರಾತ್, ಗೋವಾ, ಕರ್ನಾಟಕ ಸೇರಿದಂತೆ ದೇಶದ 20 ರಾಜ್ಯಗಳಲ್ಲಿ ಮುಂಗಾರು ಆರಂಭವಾದಾಗಿನಿಂದ ಈವರೆಗೆ 1,400ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ಧಾರೆ.

ಅನೇಕರು ತೀವ್ರಗಾಯಗೊಂಡಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಲಕ್ಷಾಂತರ ಮಂದಿ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.

Facebook Comments

Sri Raghav

Admin