ಹೌಡಿ ಮೋದಿ ಮೆಗಾ ಸಮಾವೇಶಕ್ಕೂ ಮುನ್ನ ಹೌಸ್ಟನ್‍ನಲ್ಲಿ ವರುಣಾಘಾತ..!

ಈ ಸುದ್ದಿಯನ್ನು ಶೇರ್ ಮಾಡಿ

ಹೌಸ್ಟನ್, ಸೆ.20-ಭಾರತೀಯ ಸಂಜಾತ ಅಮೆರಿಕನ್ನರ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಂಟಿ ಭಾಷಣಕ್ಕೆ ವೇದಿಕೆ ಸಜ್ಜಾಗಿರುವಾಗಲೇ ಹೌಸ್ಟನ್ ನಗರದಲ್ಲಿ ಭಾರೀ ಬಿರುಗಾಳಿಯಿಂದ ಕೂಡಿದ ಧಾರಾಕಾರ ಮಳೆ ಸುರಿಯುತ್ತಿದ್ದು, ಕೆಲವೆಡೆ ಸಾವು-ನೋವು ಸಂಭವಿಸಿದೆ.

ಭಾರೀ ಮಳೆ ಮತ್ತು ಜಲಪ್ರಳಯದಿಂದಾಗಿ ಟೆಕ್ಸಾಸ್ ರಾಜ್ಯದ ಹಲವು ಭಾಗಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇಮೆಲ್ಡಾ ಎಂಬ ಹೆಸರಿನ ವಾಯುಭಾರ ಕುಸಿತದಿಂದ ಟೆಕ್ಸಾಸ್‍ನ ಅನೇಕ ಪ್ರಾಂತ್ಯಗಳಲ್ಲಿ ಚಂಡಮಾರುತ ಅಪ್ಪಳಿಸಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಆಗ್ನೇಯ ಟೆಕ್ಸಾಸ್‍ನ 13 ಕೌಂಟರ್‍ಗಳಲ್ಲಿ ಗೌರ್ನರ್ ಗ್ರೆಗ್ ಅಬೊಟ್ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಕೆಲವೆಡೆ ಭಾರೀ ಮಳೆಯಿಂದ ಸಾವು-ನೋವು ಸಂಭವಿಸಿ ಆಸ್ತಿ-ಪಾಸ್ತಿಗೂ ಹಾನಿಯಾಗಿದೆ.

ಸೆ.22ರ ಭಾನುವಾರ ಭಾರತೀಯ ಮೂಲದ 50,000ಕ್ಕೂ ಹೆಚ್ಚು ಅಮೆರಿಕನ್ನರನ್ನು ಉದ್ದೇಶಿಸಿ ಮೋದಿ ಮತ್ತು ಟ್ರಂಪ್ ಮಾಡಲಿರುವ ಭಾಷಣ ಇಡೀ ವಿಶ್ವದ ಗಮನಸೆಳೆದಿರುವಾಗಲೇ ಪ್ರಕೃತಿ ವಿಕೋಪದ ಕರಾಳ ಛಾಯೆ ಹೌಸ್ಟನ್ ನಗರವನ್ನು ಆವರಿಸಿದೆ.

Facebook Comments

Sri Raghav

Admin