ಕರ್ನಾಟಕದಲ್ಲಿ ಮಹಾಮಳೆ, 12ಕ್ಕೇರಿದ ಸಾವಿನ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.22- ಕರಾವಳಿ ತೀರಪ್ರದೇಶ ಸೇರಿದಂತೆ ಉತ್ತರಕರ್ನಾಟಕ, ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ ಭಾಗಗಳಲ್ಲಿ ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಹಾಮಳೆ 12 ಜನರನ್ನು ಬಲಿತೆಗೆದುಕೊಂಡಿದ್ದು, ರಾಜ್ಯ ಮತ್ತೊಂದು ಮಹಾಪ್ರವಾಹಕ್ಕೆ ಸಿಲುಕುವ ಭೀತಿ ಎದುರಾಗಿದೆ.

ಮಂಗಳವಾರ ಮಹಾಮಳೆಗೆ ಮತ್ತೆ ಐದು ಮಂದಿ ಬಲಿಯಾಗಿದ್ದು, ಬೆಳಗಾವಿಯಲ್ಲಿ ಇಬ್ಬರು, ಕೊಪ್ಪಳ ಮೂವರು, ಹಾವೇರಿಯಲ್ಲಿ ಇಬ್ಬರು, ರಾಯಚೂರು, ಬಾಗಲಕೋಟೆ, ಧಾರವಾಡ ತಲಾ ಮಂಡ್ಯದಲ್ಲಿ ತಲಾ ಒಬ್ಬರು ಸೇರಿದಂತೆ ಒಟ್ಟು 12 ಮಂದಿ ಸಾವನ್ನಪ್ಪಿದ್ದಾರೆ.

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ಗಂಜಿಗೆರೆ ಗ್ರಾಮದಲ್ಲಿ ಮನೆ ಕುಸಿದುಬಿದ್ದು ಕುಮಾರ್(40) ಎಂಬುವರು ಮೃತಪಟ್ಟಿದ್ದಾರೆ. ಕೊಪ್ಪಳ ಹಾಗೂ ರಾಯಚೂರಿನಲ್ಲಿ ಕೊಚ್ಚಿ ಹೋಗಿರುವ ಐವರು ಈವರೆಗೂ ಪತ್ತೆಯಾಗಿಲ್ಲ. ಶೋಧ ಕಾರ್ಯ ಮುಂದುವರಿಸಲಾಗಿದೆ. ಮಹಾಮಳೆಗೆ 5,444 ಮನೆಗಳು ಹಾನಿಯಾಗಿದ್ದು, 45 ಜಾನುವಾರುಗಳು ಸಾವನ್ನಪ್ಪಿವೆ.

ವಿವಿಧೆಡೆ 12 ಕಾಳಜಿಕೇಂದ್ರಗಳನ್ನು ತೆರೆಯಲಾಗಿದ್ದು, 2176 ಮಂದಿಗೆ ಆಶ್ರಯ ನೀಡಲಾಗಿದೆ.  ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಶಿರಾಬಡಗಿ ಗ್ರಾಮದಲ್ಲಿ ರಾಮಪ್ಪ ಮಲ್ಲಪ್ಪ ಹೊನ್ನಾನವರ(5) ಎಂಬ ರೈತ ಮಳೆ ನೀರಿನಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ್ದಾರೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಚಿಂಚೋಳಿ ಗ್ರಾಮದಲ್ಲಿ ಧನ ಮೇಯಿಸಲು ಹೋಗಿದ್ದ ಸಂತೋಷ ದೇವೇಗೌಡ(16) ಎಂಬ ಯುವಕ ಮಳೆಗೆ ಕೊಚ್ಚಿಹೋಗಿದ್ದು ಹುಡುಕಾಟ ಮುಂದುವರೆದಿದೆ.
ಒಟ್ಟು ಸಾವು -12 , ಜಾನುವಾರುಗಳು -45 ,  ಮನೆಗಳ ಹಾನಿ- 5444, ಕಾಳಜಿ ಕೇಂದ್ರ-12,  ಆಶ್ರಯ ಪಡೆದವರು-2176

Facebook Comments

Sri Raghav

Admin