ಮಳೆಗೆ ಉರುಳಿ ಬಿದ್ದ ಮರಗಳು, ಕಾರುಗಳು ಜಖಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 27- ಕಳೆದ ರಾತ್ರಿ ನಗರದಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ಅಪಾರ ನಷ್ಟ ಸಂಭವಿಸಿದೆ. ನಗರದ ವಿವಿಧೆಡೆ ಹಲವಾರು ಮರಗಳು ಧರೆಗುರುಳಿ ಬಿದ್ದಿದ್ದು ಕೆಲವು ಕಡೆ ಮನೆಗಳ ಮೇಲೆ ಮರಗಳು ಬಿದ್ದಿದ್ದರೆ, ಇನ್ನು ಕೆಲವು ಕಡೆ ಕಾರುಗಳ ಮೇಲೆ ವೃಕ್ಷಗಳು ಉರುಳಿ ಬಿದ್ದ ಪರಿಣಾಮ ಕಾರುಗಳು ಜಖಂಗೊಂಡಿವೆ.

ನಿಮ್ಹಾನ್ಸ್ ಆಸ್ಪತ್ರೆಯ ಕಾಂಪೌಂಡ್ ಉರುಳಿ ಬಿದ್ದಿದ್ದರೆ, ಜಯನಗರದ 9ನೇ ಬಡಾವಣೆಯಲ್ಲಿ ಮರವೊಂದು ವಿದ್ಯುತ್ ಕಂಬದ ಮೇಲೆ ಉರುಳಿದೆ. ಅರಬ್ಬೀ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಳ್ಮೈ ಸುಳಿ ಗಾಳಿಯಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗುತ್ತಿದ್ದು, ಮೇ 31ರವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನಿಡಿದೆ.

Facebook Comments