ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ : ಐಎಂಡಿ ಮುನ್ನೆಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.25- ದೇಶದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಇಂದು ದೆಹಲಿ, ಪಂಜಾಬ್, ಹರ್ಯಾಣದಲ್ಲಿ ಹೆಚ್ಚು ಮಳೆಯಾಗಲಿದೆ. ನಂತರದ ದಿನಗಳಲ್ಲಿ ಕೊಂಕನ್, ಗೋವಾ, ಪಶ್ಚಿಮ ಮಧ್ಯಪ್ರದೇಶ, ಹಿಮಾಚಲ ಪ್ರದೇಶಗಳಲ್ಲೂ ಭಾರಿ ಮಳೆಯಾಗುವ ಮುನ್ಸೂಚನೆಗಳಿವೆ.

ಉತ್ತರಪ್ರದೇಶದ ಝಾನ್ಸಿ, ಜಲೌನ್, ರಾಂಪುರ, ಬರೇಲಿ, ರಾಯ್‍ಬರೇಲಿ, ಪ್ರತಾಪ್ಘರ್, ಮೊರಾದಾಬದ್ ಜಿಲ್ಲೆಗಳಲ್ಲಿ ಗುಡುಗುಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ.  ಮುಂಬೈ, ಥಾಣೆ, ರಾಯ್‍ಘಡ, ಪಲ್ಹಾಘರ್, ರತ್ನಗರಿ ಮತ್ತು ನಾಸಿಕ್‍ಗಳಲ್ಲೂ ವರ್ಷಧಾರೆಯಾಗಲಿದೆ ಎಂದು ಇಲ್ಲಿನ ಹಮಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರಪೂರ್ವ ರಾಜ್ಯಗಳಾದ ಅಸ್ಸಾಮ್, ಮೇಘಾಲಯ, ನಾಗಲ್ಯಾಂಡ್ ಮಿಜೋರಾಮ್, ತ್ರಿಪುರದಲ್ಲೂ ಜು.27ರವರೆಗೂ ಭಾರೀ ಮಳೆಯಾಗಲಿದೆ ಎಂದು ತಿಳಿಸಲಾಗಿದೆ. ಜುಲೈ 29ರ ಹೊತ್ತಿಗೆ ಮಾನ್ಸೂನ್ ಉತ್ತರದತ್ತ ಸಾಗುವುದರಿಂದ ಅಸ್ಸಾಂ, ಮೇಘಾಲಯ ಮತ್ತು ಅರುಣಾಚಲ ಪ್ರದೇಶದ ಮುಂಗಾರು ಮಳೆಯಾಗಲಿದೆ. ಉಳಿದ ದಿನಗಳಲ್ಲಿ ಈಶಾನ್ಯ ರಾಜಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್ ತಿಳಿಸಿದೆ.

ನೈರುತ್ಯ ಮತ್ತು ಪಶ್ಚಿಮ-ಮಧ್ಯ ಅರೇಬಿಯನ್ ಸಮುದ್ರದಲ್ಲಿ 40-50 ಕಿ.ಮೀ ವೇಗದಲ್ಲಿ ವೇಗದ ಗಾಳಿ ಬೀಸುವ ಸಾಧ್ಯತೆಯಿದ್ದು, ದಕ್ಷಿಣ ತಮಿಳುನಾಡು ಕರಾವಳಿಯಲ್ಲಿ ಪರಿಸ್ಥಿತಿ ಬಿಗಡಾಯಿಸಲಿದೆ. ಇಂದಿನಿಂದ ಕೆಲವು ದಿನಗಳವರೆಗೆ ಈ ಪ್ರದೇಶಗಳಲ್ಲಿ ಸಮುದ್ರಕ್ಕೆ ಹೋಗದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

Facebook Comments