ಗಣೇಶ ಹಬ್ಬದ ಎಫೆಕ್ಟ್ : ಪೌರಕಾರ್ಮಿಕರಿಗೆ ಬಿಡುವಿಲ್ಲದ ಕೆಲಸ

ಈ ಸುದ್ದಿಯನ್ನು ಶೇರ್ ಮಾಡಿ

Lord-Ganesha-In-Lake
ಬೆಂಗಳೂರು, ಸೆ.19- ಮಳೆ ನಿಂತರೂ ಮರದ ಹನಿ ನಿಲ್ಲದು ಎಂಬಂತೆ ಹಬ್ಬಗಳು ಮುಗಿದರೂ ಪೌರ ಕಾರ್ಮಿಕರ ಕೆಲಸಕ್ಕೆ ಮಾತ್ರ ಬಿಡುವಿರದು. ವರಮಹಾಲಕ್ಷ್ಮಿ, ಗಣೇಶ, ದಸರಾ ಹಾಗೂ ದೀಪಾವಳಿ ಹಬ್ಬಗಳಲ್ಲಿ ಮಾರುಕಟ್ಟೆಗೆ ಬರುವ ವಸ್ತುಗಳು ಬಿಕರಿಯಾಗದೆ ಉಳಿದು ಸೃಷ್ಟಿಸುವ ಕಸದ ತೆರಿಗೆ ಪೌರ ಕಾರ್ಮಿಕರು ಹಬ್ಬದ ನಂತರವೂ ಕೆಲಸ ಮಾಡಿ ನಗರ ಸ್ವಚ್ಛತೆಗೆ ಆದ್ಯತೆ ನೀಡುತ್ತಾರೆ.

ಆದರೆ, ಗಣೇಶನ ಹಬ್ಬದಲ್ಲಿ ಗಣೇಶ ವಿಸರ್ಜನೆಯಿಂದ ಕೆರೆಗಳಲ್ಲಿ ತುಂಬುವ ತ್ಯಾಜ್ಯ ಸಂಸ್ಕರಣೆಯೇ ದೊಡ್ಡ ಸವಾಲು. ಹಬ್ಬಕ್ಕೂ ಮುನ್ನವೇ ಪರಿಸರ ಗಣಪತಿ ಪ್ರತಿಷ್ಠಾಪಿಸುವಂತೆ ಬಿಬಿಎಂಪಿ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಜಾಗೃತಿ ಮೂಡಿಸಿದ ಪರಿಣಾಮ ಪರಿಸರ ಗಣಪತಿಯನ್ನೇ ಆರಾಧಿಸಿ ಬಹಳಷ್ಟು ಹೆಚ್ಚಾಗಿ ಬಣ್ಣದ ಮತ್ತು ಪಿಒಪಿ ಗಣಪತಿಗಳ ಮಾರಾಟ ಈ ಬಾರಿ ತಗ್ಗಿದೆ. ಆದರೆ, ಸಂಪೂರ್ಣ ನಿಂತಿಲ್ಲ.

ಹಾಗಾಗಿ ನಗರದ ಪ್ರತಿಷ್ಠಿತ ಕೆರೆಗಳಾದ ಯಡಿಯೂರು, ಲಾಲ್‍ಬಾಗ್, ಸ್ಯಾಂಕಿಕೆರೆ, ಹಲಸೂರು ಕೆರೆಗಳಲ್ಲಿ ಮುಳುಗಿರುವ ಬೃಹತ್ ಗಾತ್ರದ ಗಣೇಶ ಮೂರ್ತಿಗಳ ತ್ಯಾಜ್ಯ ಕೆರೆ ಆವರಿಸಿದೆ. ಅದನ್ನು ಸ್ವಚ್ಛಗೊಳಿಸಿ ಮತ್ತೆ ಕೆರೆಗಳಿಗೆ ಎಂದಿನಂತೆ ಆಕರ್ಷ ಣೆ ಮರಳಿಸಲು ಕಾರ್ಮಿಕರು ಶ್ರಮಿಸಲೇಬೇಕಾಗುತ್ತದೆ. ಅದೇ ರೀತಿ ಇದೀಗ ಕೆರೆಗಳಲ್ಲಿ ಗಣೇಶನ ವಿಸರ್ಜನೆ ಬಳಿಕ ಸ್ವಚ್ಛತೆಗೆ ಎಡಬಿಡದೆ ಕೆಲಸ ನಡೆಯುತ್ತಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin