ಡಿ.14 ಮತ್ತು 15ರಂದು ‘ಒಂದು ರಾಷ್ಟ್ರ ಒಂದು ಚುನಾವಣೆ’ ಕುರಿತು ವಿಧಾನಸಭೆಯಲ್ಲಿ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.7- ಡಿಸೆಂಬರ್ 14 ಮತ್ತು 15ರಂದು ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ಚರ್ಚೆ ನಡೆಯಲಿದೆ. ಕರೊನಾ ಹಿನ್ನೆಲೆಯಲ್ಲಿ ಸದಸ್ಯರು ಸ್ವಯಂ ಶಿಸ್ತು ಅಳವಡಿಸಿಕೊಳ್ಳಬೇಕು ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭೆಯಲ್ಲಿ ತಿಳಿಸಿದರು. ಕೊರೊನಾ ಎರಡನೇ ಅಲೆ ಪ್ರಾರಂಭವಾಗುತ್ತಿದೆ. ತಜ್ಞರು ಸಲಹೆ ನೀಡಿರುವುದು ನಮ್ಮೆಲ್ಲರಿಗೂ ತಿಳಿದಿದೆ.

ಎಲ್ಲರೂ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಸಿ ಅಂತರ ಕಾಯ್ದುಕೊಳ್ಳಬೇಕು. ಅನಾರೋಗ್ಯದ ಲಕ್ಷಣ ವಿದ್ದವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬಹುದು. ಅಗತ್ಯವಿದ್ದರೆ ಚಿಕಿತ್ಸೆ ಕೊಡಿಸಲಾಗುವುದು ಎಂದರು. ನಿರ್ಲಕ್ಷಿಸಲಾಗುತ್ತಿದೆ ಎಂಬ ಆರೋಪವಿದೆ. ಸದನ ಕಾರ್ಯ ಕಲಾಪದಲ್ಲಾಗಲಿ, ಸಾರ್ವಜನಿಕ ಜೀವನದಲ್ಲಾಗಲಿ ನಿರ್ಲಕ್ಷಿಸದೆ ಸ್ವಯಂ ಶಿಸ್ತನ್ನು ಪಾಲಿಸೋಣ. ಅದೇರೀತಿ ಸದನದಲ್ಲಿ ಕೂಡಾ ಶಿಸ್ತಿನಿಂದ ಕಾರ್ಯಕಲಾಪದಲ್ಲಿ ಪಾಲ್ಗೊಳ್ಳಿ ಗುಂಪು ಗೂಡುವುದು ಬೇಡ ಎಂದು ತಿಳಿಸಿದರು.

ನ.25 ಮತ್ತು 26ರಂದು ಗುಜರಾತ್‍ನ ಕೆ.ವಾಡಿಯಲ್ಲಿ ನಡೆದ ಅಖಿಲ ಭಾರತ ಪೀಠಾಶೀನ ಅಧಿಕಾರಿಗಳ ಸಮಾವೇಶ ನಡೆಯಿತು. ಸಮ್ಮೇಳನದ ಸಮಾರೋಪದಲ್ಲಿ ವಚ್ರ್ಯುಯಲ್ ಭಾಷಣ ಮಾಡಿದ ಪ್ರಧಾನಿ ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ಚರ್ಚೆಯಾಗಲಿ. ಡಿ.14 ಮತ್ತು 15ರ ಎಡೂ ದಿನ ವಿಚಾರದ ಬಗ್ಗೆ ವಿಶೇಷ ಚರ್ಚೆ ನಡೆಲಾಗುವುದು ಎಂದಿದ್ದರು.

ಈ ಕುರಿತಂತೆ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕರೊಂದಿಗೂ ಚರ್ಚೆ ನಡೆಸಲಾಗಿದೆ. ನಾಳೆ ನಡೆಯುವ ಕಾರ್ಯ ಕಲಾಪಗಳ ಸಲಹಾ ಸಮಿತಿ ಸಭೆಯಲ್ಲೂ ಚರ್ಚೆ ಮಾಡಬಹುದು. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆ ಗುಜರಾತ್‍ನಲ್ಲಿ ನಿರ್ಮಾಣವಾಗಿದೆ. ಅದು ಜಗತ್ತಿನಲ್ಲೇ ಅತ್ಯಂತ ಎತ್ತರವಾದ ಭವ್ಯ ಮೂರ್ತಿ, ಪ್ರವಾಸ ಕೈಗೊಳ್ಳುವಾಗ ಅಲ್ಲಿಗೆ ಭೇಟಿ ನೀಡುವುದು ಸೂಕ್ತ. ಕೌಟುಂಬಿಕ ಪ್ರವಾಸವನ್ನು ಕೈಗೊಳ್ಳಬಹುದು ಎಂದರು.

Facebook Comments