ಹೆಲ್ಮೆಟ್‍ನಲ್ಲಿ ಬ್ರೌನ್ ಶುಗರ್ ಇಟ್ಟುಕೊಂಡು ಮಾರಾಟಕ್ಕೆತ್ನಿಸುತ್ತಿದ್ದವನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.17- ಮಾದಕವಸ್ತು ಡ್ರಗ್ಸ್ ನಿಯಂತ್ರಣಕ್ಕೆ ಪೊಲೀಸರು ಕಡಿವಾಣ ಹಾಕುತ್ತಿರುವ ಸಂದರ್ಭದಲ್ಲೇ ಹೆಲ್ಮೆಟ್‍ನಲ್ಲಿ ಅಡಗಿಸಿಟ್ಟಿದ್ದ ಬ್ರೌನ್ ಶುಗರ್‍ನ್ನು ಸಿಟಿಮಾರ್ಕೆಟ್ ಠಾಣೆ ಪೊಲೀಸರು ವಶಕ್ಕೆ ಪಡೆದು ಯುವಕನನ್ನು ಬಂಧಿಸಿದ್ದಾರೆ.  ಗಿರಿನಗರ ನಿವಾಸಿ ವಿಕ್ರಂ ಖಿಲೇರಿ(25) ಬಂಧಿತ ಆರೋಪಿ.

ಸಿಟಿ ಮಾರ್ಕೆಟ್ ವಾಪ್ತಿಯ ಪಟ್ನೂರ್ ಪೇಟೆಯ ಮಹಾವೀರ ಡ್ರಗ್ ಹೌಸ್ ಬಳಿ ಯುವಕನೊಬ್ಬ ಬ್ರೌನ್ ಶುಗರ್ ಎಂಬ ಮಾದಕವಸ್ತು ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ತೆರಳಿ ಯುವಕನನ್ನು ಬಂಧಿಸಿ 90 ಗ್ರಾಂ ಬ್ರೌನ್‍ಶುಗರ್, 6 ಸಾವಿರ ರೂ. ಎರಡು ಮೊಬೈಲ್ ಹಾಗೂ ಬೈಕ್‍ನ್ನು ವಶಪಡಿಸಿಕೊಂಡಿದ್ದಾರೆ.

ದೇವರ ಪ್ರಸಾದವೆಂದು ಬಸ್‍ಗಳು ಮತ್ತು ವಿವಿಧ ಕಂಪನಿಗಲ ಕೊರಿಯರ್ ಮುಖಾಂತರ ರಾಜ್ಯದ ವಿವಿಧ ಸ್ಥಳಗಳಿಗೆ ಮಾರಾಟ ಮಾಡುತ್ತಿರುವುದು ಪ್ರಾಥಮಿಕ ತನಿಖೆಯಿಂದ ಕಂಡುಬಂದಿದೆ.

Facebook Comments