ಪೊಲೀಸರ ಜೋಶ್ ಕೊಂಡಾಡಿದ ಪೊಲೀಸ್ ಆಯುಕ್ತ ನಿಂಬಾಳ್ಕರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.9- ಕೊರೊನಾ ವಾರಿಯರ್ಸ್‍ಗಳಾಗಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿರುವ 395 ಮಂದಿಗೆ ಸೋಂಕು ತಗುಲಿದೆ, 20 ಪೊಲೀಸ್ ಠಾಣೆಗಳು ಸೀಲ್‍ಡೌನ್ ಆಗಿವೆ. ಆದರೂ ಪೊಲೀಸರ ಜೋಶ್ ಹೇಗಿದೆಯೆಂದರೆ ಎಲ್ಲರೂ ಜೋರು ದನಿಯಲ್ಲಿ ಎಸ್ ಸಾರ್ ಎಂದು ಕೂಗುತ್ತಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬೆಂಗಳೂರು ನಗರ ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ಲಿಂಬಾಳ್ಕರ್ ಅವರು ಈ ದಿನದವರೆಗೆ ಐದು ಮಂದಿ ಪೊಲೀಸರು ಕೆಲಸ ಮಾಡುತ್ತಲೇ ಪ್ರಾಣ ಬಿಟ್ಟಿದ್ದಾರೆ.

190 ಮಂದಿಯನ್ನು ಕೋವಿಡ್ ಸೋಂಕನ್ನು ಕರ್ತವ್ಡಯನಿ ್ಹಣೆ ವೇಳೆಯೇ ಅಂಟಿಸಿಕೊಂಡಿದ್ದಾರೆ. ಒಟ್ಟು 395 ಮಂದಿಗೆ ಸೋಂಕು ತಗುಲಿದ್ದು 200 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರಿಸಿದ್ದಾರೆ.

ಆದರೂ ನಮ್ಮ ಕುಟುಂಬ ಧೈರ್ಯವಾಗಿದೆ. ಈ ಕ್ಷಣದಲ್ಲೂ ಪೊಲೀಸರ ಜೋಶ್ ಹೇಗಿದೆ ಎಂದರೆ ಜೋರು ದನಿಯಲ್ಲೇ ಪ್ರತಿಕ್ರಿಯೆ ಬರುತ್ತಿದೆ ಎಂದು ನಿಂಬಾಳ್ಕರ್ ಹೇಳಿದ್ದಾರೆ. ಹೇಮಂತ್ ನಿಂಬಾಳ್ಕರ್‍ರ ಈ ಟ್ವೀಟ್‍ಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಮಾರು 4 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ,

ಪೊಲೀಸರ ಕಾರ್ಯಕ್ಷಮತೆ ಬಗ್ಗೆ ವ್ಯಾಪಕ ಪ್ರಶಂಸೆಗಳು ವ್ಯಕ್ತವಾಗಿದೆ. 650 ಮಂದಿ ರೀಟ್ವೀಟ್ ಮಾಡಿದ್ದಾರೆ. ಸಂಸದ ಪಿ.ಸಿ.ಮೋಹನ್ ಸೇರಿದಂತೆ ಹಲವಾರು ಮಂದಿ ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.

Facebook Comments