ಹೇಮಾವತಿ ಡ್ಯಾಮ್ ನಿಂದ ನೀರು ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಆ.18- ಜಿಲ್ಲೆಯ ಜೀವನಾಡಿ ಹೇಮಾವತಿ ಜಲಾಶಯ ಬಹುತೇಕ ಭರ್ತಿ ಯಾಗಿದ್ದು ಇಂದು ಆರು ಕ್ರಸ್ಟ್ ಗೇಟ್‍ಗಳ ಮೂಲಕ ನೀರನ್ನು ಹರಿಬಿಡಲಾಯಿತು.

ಕಳೆದ ವರ್ಷ ಇದೇ ಅವಯಲ್ಲಿ ಡ್ಯಾಮ್‍ನಿಂದ ನೀರು ಬಿಡಲಾಗಿತ್ತು. ಸದ್ಯ ಈ ತಿಂಗಳು ಎರಡನೇ ಬಾರಿ ಆರು ಕ್ರಸ್ಟ್ ಗೇಟ್ ಮೂಲಕ 15 ಸಾವಿರ ಕ್ಯೂಸೆಕ್ಸ್ ನೀರು ಬಿಡಲಾಗಿದೆ.

ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು 9 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ನೀರನ್ನು ಬಿಡಲಾಗಿದೆ.

2922 ಅಡಿ ಸಾಮಥ್ರ್ಯದ ಜಲಾಶಯದಲ್ಲಿ ಇದೀಗ 2921.60 ಅಡಿ ನೀರು ಸಂಗ್ರಹವಾಗಿದೆ.

Facebook Comments

Sri Raghav

Admin