ಕೂಲ್ ಕ್ಯಾಪ್ಟನ್ ಧೋನಿ ಹಳದಿ ಜೆರ್ಸಿಯಲ್ಲಿ ಕಾಣಿಸೋದು ಡೌಟ್..!?

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ, ಅ. 8- ಭಾರತ ತಂಡಕ್ಕೆ ದಿಢೀರನೆ ರಾಜೀನಾಮೆ ನೀಡಿ ಆಶ್ಚರ್ಯ ಮೂಡಿಸಿದ್ದ ಕೂಲ್ ಕ್ಯಾಪ್ಟನ್ ಮಹೇಂದ್ರಸಿಂಗ್ ಧೋನಿ ಈಗ ತಮ್ಮ ಆಟದ ಛಾರ್ಮ್ ಕಳೆದುಕೊಂಡಂತೆ ಕಂಡರೂ ತಮ್ಮ ಹೇಳಿಕೆಗಳ ಮೂಲಕ ಸದಾ ಸುದ್ದಿಯಲ್ಲಿದ್ದಾರೆ.

ಇತ್ತೀಚೆಗೆ ಧೋನಿಯವರು ನಾನು ಚೆನ್ನೈನ ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ಕೊನೆಯ ಪಂದ್ಯ ಆಡಬೇಕೆಂಬುದು ನನ್ನ ಹೆಬ್ಬಯಕೆ ಎಂದು ಹೇಳುವ ಮೂಲಕ ಮುಂದಿನ ಐಪಿಎಲ್‍ನ ನಂತರ ಸಿಎಸ್‍ಕೆಯಿಂದಲೂ ಧೋನಿ ದೂರ ಉಳಿಯಲಿದ್ದಾರೆ ಎಂಬ ಸುಳಿವು ನೀಡಿದ್ದರು, ಆದರೆ ನಿನ್ನೆ ಪಂಜಾಬ್ ವಿರುದ್ಧದ ಪಂದ್ಯ ವೇಳೆ ಈ ಋತುವಿನ ನಂತರ ನನ್ನನ್ನು ಹಳದಿ ಜೆರ್ಸಿಯಲ್ಲಿ ನೋಡುವುದು ಅನುಮಾನ ಎಂದು ಹೇಳುವ ಮೂಲಕ ಮತ್ತೊಂದು ಹೇಳಿಕೆ ಮೂಲಕ ಗಮನ ಸೆಳೆದಿದ್ದಾರೆ.

ಪ್ರಸಕ್ತ ನಡೆಯುತ್ತಿರುವ ಐಪಿಎಲ್‍ನಲ್ಲಿ ಸಿಎಸ್‍ಕೆ ತಂಡವು ಪಾಯಿಂಟ್ ಪಟ್ಟಿಯಲ್ಲಿ 2ನೆ ಸ್ಥಾನವನ್ನು ಅಲಂಕರಿಸಿದ್ದರೂ ಕೂಡ ಟೂರ್ನಿ ಉದ್ದಕ್ಕೂ ಕಳಪೆ ಪ್ರದರ್ಶನ ನೀಡುವ ಮೂಲಕ ಫ್ರಾಂಚೈಸಿಗಳ ಹಾಗೂ ಅಭಿಮಾನಿಗಳ ಕೆಂಗಣ್ಣಿಗೆ ಧೋನಿ ಗುರಿಯಾಗಿದ್ದಾರೆ. ಐಪಿಎಲ್ 14 ಮುಗಿದ ನಂತರ ಭಾರೀ ಬಿಡ್ಡಿಂಗ್ ನಡೆಯಲಿದ್ದು ಜೊತೆಗೆ ಎರಡು ತಂಡಗಳು ಹೊಸದಾಗಿ ಸೇರ್ಪಡೆಗೊಳ್ಳುವುದರಿಂದ ಸಿಎಸ್‍ಕೆ ತಂಡವು ಹಲವು ಸ್ಟಾರ್ ಆಟಗಾರರನ್ನೇ ಕೈ ಬಿಡಲು ಚಿಂತನೆ ನಡೆಸುತ್ತಿದೆ.

ಈ ಋತುವಿನಲ್ಲಿ ಕಳಪೆ ಪ್ರದರ್ಶನ ನೀಡಿದ್ದರ ಪರಿಣಾಮ ಆ ತಂಡದ ಸ್ಟಾರ್ ಆಟಗಾರರಾದ ಸುರೇಶ್‍ರೈನಾರನ್ನು ಈಗಾಗಲೇ ಕೈಬಿಡಲಾಗಿದ್ದು, ಕಳಪೆ ಪ್ರದರ್ಶನ ನೀಡುತ್ತಿರುವ ಧೋನಿಯನ್ನು ಕೂಡ ತಂಡದಿಂದ ಹೊರಕ್ಕೆ ಕಳುಹಿಸುತ್ತಾರೋ ಎಂಬ ಅನುಮಾನ ಮೂಡಿದೆ.

ಆಟಗಾರನಾಗಿ ಕಳಪೆ ಪ್ರದರ್ಶನ ನೀಡಿದರೂ ಕೂಡ ನಾಯಕನಾಗಿ ಈಗಲೂ ತಮ್ಮ ಛಾರ್ಮನ್ನು ಉಳಿಸಿಕೊಂಡಿರುವ ಧೋನಿಯನ್ನು ಮುಂದಿನ ಹರಾಜಿನಲ್ಲಿ ಪಾಲ್ಗೊಳ್ಳುವ ನೂತನ 2 ತಂಡಗಳ ಪೈಕಿ ಒಂದು ತಂಡವು ಬಿಕರಿ ಮಾಡಿಕೊಳ್ಳಲು ಈಗಾಗಲೇ ಧೋನಿಯೊಂದಿಗೆ ಚರ್ಚೆ ನಡೆಸಿದೆ ಎಂದು ಹೇಳಲಾಗಿದ್ದು, 2022ರಲ್ಲಿ ಸಿಎಸ್‍ಕೆ ಫ್ರಾಂಚೈಸಿಗಳು ಧೋನಿಯನ್ನು ಕೈಬಿಡುವ ಬಗ್ಗೆಯೂ ಚರ್ಚೆಗಳಾಗುತ್ತಿರುವಾಗಲೇ ಧೋನಿಯು ಇನ್ಮುಂದೆ ನನ್ನನ್ನು ಹಳದಿ ಜೆರ್ಸಿಯನ್ನು ಅಭಿಮಾನಿಗಳು ನೋಡುವುದು ಅನುಮಾನ ಎಂಬ ಹೇಳಿಕೆಯು ಕುತೂಹಲ ಮೂಡಿಸಿದೆ.

Facebook Comments