ನಿಮಗೆ ನಿರಂತರ ಬಿಕ್ಕಳಿಕೆ ಇದೆಯಾ..? ಹಾಗಾದರೆ ಅದು ಕೊರೋನಾ ಲಕ್ಷಣ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.29-ಇಡೀ ವಿಶ್ವಕ್ಕೇ ದೊಡ್ಡ ಕಂಟಕವಾಗಿ ಪರಿಣಮಿಸಿರುವ ಕಿಲ್ಲರ್ ಕೊರೊನಾ ಹೊಸ ರೂಪದಲ್ಲಿ ದಾಳಿ ನಡೆಸುತ್ತಿರುವ ಸಂಗತಿಯೊಂದು ಪತ್ತೆಯಾಗಿದೆ.

ನೆಗಡಿ, ಶೀತ, ಕೆಮ್ಮು, ಗಂಟಲು ನೋವು, ಜ್ವರ, ಮೈ-ಕೈ ನೋವು ಮತ್ತು ಉಸಿರಾಟ ತೊಂದರೆಯಂಥ ರೋಗ ಲಕ್ಷಣಗಳನ್ನು ತೋರ್ಪಡಿಸುತ್ತಿದ್ದ ಮಹಾಮಾರಿ ಈಗ ಹೊಸ ಚಿಹ್ನೆಯೊಂದರ ಮೂಲಕ ತನ್ನ ರೂಪವನ್ನು ಬದಲಿಸಿದೆ.

ಈ ರೋಗ ಲಕ್ಷಣ ಇರುವವರು ವಾಸನೆ ಮತ್ತು ರುಚಿ ಕಂಡುಹಿಡಿಯಲು ಸಾಧ್ಯವಾಗದಿಲ್ಲ. ಈ ಬೆನ್ನಲ್ಲೇ ನಿರಂತರ ಬಿಕ್ಕಳಿಕೆ ಇದ್ದರೆ ಅದು ಕೋವಿಡ್-19 ವೈರಸ್‍ನ ರೋಗ ಲಕ್ಷಣ ಎಂದು ತಜ್ಞ ವೈದ್ಯರು ಪತ್ತೆ ಮಾಡಿದ್ದಾರೆ.

ಕೆಲವು ರೋಗಿಗಳಲ್ಲಿ ಕೊರೊನಾ ರೋಗ ಲಕ್ಷಣಗಳೊಂದಿಗೆ ದೀರ್ಘಕಾಲದ ಬಿಕ್ಕಳಿಕೆ ಇರುವುದು ಸಹ ಕಂಡುಬಂದಿದೆ. ಈಗಾಗಲೇ ಹೊಸ ರೋಗ ಲಕ್ಷಣಗಳನ್ನು ತೋರ್ಪಡಿಸುತ್ತಿರುವ ಈ ಹೆಮ್ಮಾರಿ ಈಗ ಬಿಕ್ಕಳಿಕೆ ಸ್ವರೂಪದಲ್ಲಿ ಜನರಿಗೆ ಕಾಟ ಕೊಡಲಾರಂಭಿಸಿದೆ.

ಯಾರಿಗೆ ಆಗಲಿ ದೀರ್ಘಕಾಲದ ಬಿಕ್ಕಳಿಕೆ ಇದ್ದರೆ ಅದನ್ನು ನಿರ್ಲಕ್ಷಿಸಬೇಡಿ. ತನ್ನ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ ಎಂದು ಸಂಶೋಧಕರು ತಿಳಿಸಿದ್ದಾರೆ.

Facebook Comments

Sri Raghav

Admin