ಲೆಹಂಗಾದಲ್ಲಿತ್ತು ಕೋಟಿ ಮೌಲ್ಯದ ಮಾದಕ ವಸ್ತು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.23- ಮೂರು ಲೆಹಂಗಾಗಳಲ್ಲಿ ಅಡಗಿಸಿಟ್ಟು ಆಸ್ಟ್ರೇಲಿಯಾಕ್ಕೆ ಕಳ್ಳಸಾಗಾಣಿಕೆ ಮಾಡಲೆತ್ನಿಸಿದ ಒಂದು ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಮಾದಕ ವಸ್ತುಗಳನ್ನು ಬೆಂಗಳೂರಿನ ಎನ್‍ಸಿಬಿ ಅಧಿಕಾರಿಗಳು ವಶ ಪಡಿಸಿ ಕೊಂಡಿದ್ದಾರೆ.

ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಎನ್‍ಸಿಬಿ ಅಧಿಕಾರಿಗಳು ದುಬಾರಿ ಬೆಲೆಯ ಲೆಹಂಗಾಗಳಲ್ಲಿ ಬಿಳಿ ಬಟ್ಟೆಯಲ್ಲಿ ಸುತ್ತಿಟ್ಟು ಕಳ್ಳ ಸಾಗಾಣಿಕೆ ಮಾಡುತ್ತಿದ್ದ 3 ಕೆಜಿ ಕ್ರಿಸ್ಟೇಲೈನ್ ಮತ್ತು ಸ್ಯೊಡೋಫೆಡ್ರಿನ್ ಎಂಬ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಆಂಧ್ರ ಪ್ರದೇಶದ ನರಸಾಪುರಂನಿಂದ ಆಸ್ಟ್ರೇಲಿಯಾಗೆ ಈ ಕಳ್ಳಸಾಗಾಣಿಕೆ ನಡೆಯುತ್ತಿತ್ತು. ಚೆನೈಗೆ ಸಾಗಾಣಿಕೆಯಾಗುವ ಹಂತದಲ್ಲಿ ಮಾಲನ್ನು ಅಕಾರಿಗಳು ಗುರುತಿಸಿದ್ದಾರೆ. ಲೆಹಂಗಾದ ಪ್ರತಿ ಮಡಿಕೆಯಲ್ಲೂ ಮಾದಕ ವಸ್ತುವನ್ನು ಅಡಗಿಸಿಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Facebook Comments

Sri Raghav

Admin