ಬ್ರೇಕಿಂಗ್ : ನಗರಸಭೆ, ಪುರಸಭೆ ಅಧ್ಯಕ್ಷ ಮೀಸಲಾತಿ ಏಕಸದಸ್ಯ ಪೀಠದ ಆದೇಶಕ್ಕೆ ಹೈಕೋರ್ಟ್ ತಡೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು ನವೆಂಬರ್ .24.ನಗರಸಭೆ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಮೀಸಲಾತಿ ಕುರಿತಂತೆ ಇತ್ತೀಚೆಗೆ ಹೈಕೋರ್ಟ್ ನ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ದ್ವಿಸದಸ್ಯ ಪೀಠ ಇಂದು ತಡೆ ನೀಡಿದೆ.

ಸರ್ಕಾರ ನೀಡಿದ್ದ ಮೀಸಲಾತಿ ಪಟ್ಟಿಯಲ್ಲಿ ಲೋಪವಿದ್ದು ಅದನ್ನು ರದ್ದುಪಡಿಸಬೇಕೆಂದು ಕೆಲ ಪುರಸಭೆಯ ಸದಸ್ಯರು ಸಲ್ಲಿಸಿದ್ದ ಅರ್ಜಿಯನ್ನು ಏಕಸದಸ್ಯಪೀಠ ಪುರಸ್ಕರಿಸಿ 4ವಾರದೊಳಗೆ ಹೊಸ ಮೀಸಲಾತಿ ಪಟ್ಟಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತ್ತು .ಇದನ್ನು ಪ್ರಶ್ನಿಸಿ ಎಂದು ಕೆಲವರು ಸಲ್ಲಿಸಿದ್ದ ಅರ್ಜಿಯನ್ನ ವಿಚಾರಣೆ ಕೈಗೆತ್ತಿಕೊಂಡ ದ್ವಿಸದಸ್ಯ ಪೀಠ ಏಕಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ ಇದರಿಂದಾಗಿ ಹೊಸದಾಗಿ ಅಧ್ಯಕ್ಷ ಉಪಾಧ್ಯಕ್ಷರಾಗಿದ್ದವರು ನಿಟ್ಟುರಿಸುಬಿಡುವಂತಾಗಿದೆ

Facebook Comments