ಟಿಕ್‍ಟಾಕ್ ಸುಂದರಿಯ ಹೈಟೆಕ್ ವೇಶ್ಯಾವಾಟಿಕೆ ಜಾಲ ಭೇದಿಸಿದ ಪೊಲೀಸರು..!

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಮಾ.13- ಆ್ಯಪ್ ಮೂಲಕ ಯುವಕರನ್ನು ಸೆಳೆದು ಹೈಟೆಕ್ ಆಗಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಜಾಲವನ್ನು ಮೇಟಗಳ್ಳಿ ಠಾಣೆ ಪೊಲೀಸರು ಭೇದಿಸಿದ್ದಾರೆ. ಕೆಆರ್ ನಗರ ಮೂಲದ ಸುಮಾ (32) ಬಂಧಿತಳಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೈಸೂರಿನ ಕುಂಬಾರ ಕೊಪ್ಪಲಿನ ಕಿಡಿಗಣ್ಣಮ್ಮನ ಬಡಾವಣೆಯಲ್ಲಿ ಮನೆ ಮಾಡಿಕೊಂಡು ಈಕೆ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಳು. ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಈಕೆಯೊಂದಿಗೆ ಸಿದ್ದರಾಜು(37) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಮೂವರು ಮಹಿಳೆಯರನ್ನು ರಕ್ಷಿಸಿದ್ದಾರೆ.

ಆ್ಯಪ್ ಮೂಲಕ ಸುಮಾ ಯುವಕರನ್ನು ಸೆಳೆಯುತ್ತಿದ್ದಳು. ಈ ಹಿಂದೆ ಕೆಲವೆಡೆ ಪೊಲೀಸರು ವೇಶ್ಯಾವಾಟಿಕೆ ಸಂಬಂಧ ದಾಳಿ ನಡೆಸಿದಾಗ ಈಕೆ ಸಿಕ್ಕಿ ಬಿದ್ದಿದ್ದು, ಪೊಲೀಸರ ಬಳಿ ತಾನು ಸಂತ್ರಸ್ತೆ ಎಂದು ಹೇಳಿಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯನ್ನು ಪೊಲೀಸರು ರಕ್ಷಿತ ಮಹಿಳೆ ಎಂದು ಪರಿಗಣಿಸಿ, ಬಿಡುಗಡೆ ಮಾಡಿದ್ದರು. ಈಗ ಆಕೆಯೇ ವೇಶ್ಯಾವಾಟಿಕೆ ನಡೆಸುತ್ತಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾ ಟಿಕ್‍ಟಾಕ್, ರೀಲ್ಸï ಸೇರಿ ಮತ್ತಿತರ ಆಕ್ಟಿಂಗ್ ವಿಡಿಯೋ ಆ್ಯಪ್ ಮೂಲಕ ಭಾರೀ ಸಕ್ರಿಯರಾಗಿದ್ದು, ಈ ಮೂಲಕವೇ ಯುವಕರನ್ನು ತನ್ನೆಡೆಗೆ ಸೆಳೆಯುತ್ತಿದ್ದಳು ಎನ್ನಲಾಗಿದೆ. ಆ್ಯಪ್ ಮೂಲಕ ಡೀಲ್ ಕುದುರಿಸುತ್ತಿದ್ದಳು ಎಂದು ತಿಳಿದುಬಂದಿದೆ.

Facebook Comments