ನಗರಸಭೆ-ಪುರಸಭೆ- ಪಟ್ಟಣ ಪಂಚಾಯತಿಗಳ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ರದ್ದು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು ನ19.ಇತ್ತೀಚೆಗಷ್ಟೇ ನಡೆದಿದ್ದ ನಗರಸಭೆ ಪುರಸಭೆ ಹಾಗೂ ಪಟ್ಟಣ ಪಂಚಾಯತಿಗಳ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಯನ್ನು ರಾಜ್ಯ ಹೈಕೋರ್ಟ್ ರದ್ದುಗೊಳಿಸಿದೆ. ಇತ್ತೀಚೆಗಷ್ಟೇ ಮೀಸಲಾತಿಯ ವಿರುದ್ಧ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದರು ಈ ಸಂದರ್ಭದಲ್ಲಿ ಏಕಸದಸ್ಯಪೀಠ ಅದನ್ನ ವಜಾಗೊಳಿಸಿ ನವೆಂಬರ್ ಎರಡರ ಒಳಗೆ ಚುನಾವಣೆಗಳನ್ನು ನಡೆಸಲು ಸೂಚನೆ ನೀಡಿತ್ತು .

ಅದರಂತೆ ಈಗಾಗಲೇ ರಾಜ್ಯದ ಹಲವಾರು ಕಡೆ ನಗರಸಭೆ ಪುರಸಭೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆದು ಪದಗ್ರಹಣ ಮಾಡಿದ್ದಾರೆ .ಆದರೆ ನ್ಯಾಯಮೂರ್ತಿ ದೇವದಾಸ್ ಅವರ ಪೀಠ ಇಂದು ಮತ್ತೆ
ವಿಚಾರಣೆ ಕೈಗೊಂಡು ಜಿಪಂ ಸದಸ್ಯ ಪೀಠದ ಮುಂದೆ ಬಂದ ವಿಚಾರಣೆಯಲ್ಲಿ ಮೀಸಲಾತಿಯಲ್ಲಿ ಲೋಪವಾಗಿದೆ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಅದನ್ನು ರದ್ದುಪಡಿಸಲಾಗಿದೆ.

ಇದರಿಂದಾಗಿ ಈಗಷ್ಟೇ ಅಧಿಕಾರ ಚುಕ್ಕಾಣಿ ಹಿಡಿದಿರುವ ರಾಜಕೀಯ ಪಕ್ಷಗಳಿಗೆ ಹಾಗೂ ಅಧಿಕಾರ ದಲ್ಲಿ ಕೂತಿರುವ ಅಧ್ಯಕ್ಷ ಉಪಾಧ್ಯಕ್ಷರಿಗೆ ಹೊಸ ಸಂಕಟ ಎದುರಾಗಿದೆ. 4ವಾರದೊಳಗೆ ಹೊಸ ಮೀಸಲಾತಿಯನ್ನು ನೀಡಬೇಕು ಎಂದು ನ್ಯಾಯಮೂರ್ತಿ ದೇವದಾಸ್ ಅವರ ಪೀಠ ತೀರ್ಪು ನೀಡಿದೆ

Facebook Comments

Sri Raghav

Admin