ಸಿಇಟಿ ಮತ್ತು ನೀಟ್ ಪರೀಕ್ಷೆಗೆ ತರಬೇತಿ ಕಾಂಪ್ರೆಹೆನ್ಸಿವ್ ಆನ್‍ಲೈನ್ ಪ್ಲಾಟ್‍ಫಾರ್ಮ್ಗೆ ಸಿಎಂ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.20-ಉನ್ನತ ಶಿಕ್ಷಣ ಇಲಾಖೆಯ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ 2020ನೇ ಸಾಲಿನ ಸಿ.ಇ.ಟಿ ಮತ್ತು ನೀಟ್ ಪರೀಕ್ಷೆಗೆ ಆನ್‍ಲೈನ್ ಕೋಚಿಂಗ್ ತರಬೇತಿಗಳನ್ನು ನಡೆಸಲು ಕಿಯೋನಿಕ್ಸ್ ಸಂಸ್ಥೆಯ ಮುಖಾಂತರ ಅಭಿವೃದ್ಧಿಪಡಿಸಿರುವ ಕಾಂಪ್ರೆಹೆನ್ಸಿವ್ ಆನ್‍ಲೈನ್ ಪ್ಲಾಟ್‍ಫಾರ್ಮ್ ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಕೋವಿಡ್19ರ  ಸೋಂಕಿನಿಂದಾಗಿ ಜನ ಜೀವನದ ಜೊತೆಗೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ ಎಂದರು. ಶೈಕ್ಷಣಿಕ ತರಗತಿಗಳು ಹಾಗೂ ಕೋಚಿಂಗ್ ಮುಂದೂಡುವುದರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಶಿ ಆನ್ ಲೈನ್ ಶಿಕ್ಷಣವೇ ಪರಿಹಾರ ಎಂದು ಭಾವಿಸಿ ಸಿಟಿ ಮತ್ತು ನೀಟ್ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡಲು ತೀರ್ಮಾನಿಸಲಾಗಿದೆ.

ಇದರಿಂದ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವುದು ಸರ್ಕಾರದ ಉದ್ದೇಶ. ಆನ್ ಲೈನ್ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಮೂಲಕ ಆಂಡ್ರಾಯ್ಡ್ ನಲ್ಲಿ ಅಭಿವೃದ್ಧಿ ಪಡಿಸಿರುವ ಗೆಟ್ ಸೆಟ್ ಗೋ ಡಾಟ್ ಇನ್ ಮೂವ್ ಆ್ಯಪ್ ಮೂಲಕ ವಿದ್ಯಾರ್ಥಿಗಳು, ಸಿಇಟಿ ಮತ್ತು ನೀಟ್ ಪರೀಕ್ಷೆ ಯ ಸಾರಾಂಶ, ಅಣಕು ಪರೀಕ್ಷೆ ಸೇರಿದಂತೆ ಅಧ್ಯಯನಕ್ಕೆ ಪೂರಕ ಅಂಶಗಳನ್ನು ಪಡೆಯಬಹುದು. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.

ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ ಮಾತನಾಡಿ, ಕೊರೋನ ವೈರಸ್ ನಿಂದಾಗಿ ಸಿಇಟಿ ಮತ್ತು ನೀಟ್ ಪರೀಕ್ಷೆಗೆ ತೊಂದರೆ ಆಗಿದೆ. ವಿದ್ಯಾರ್ಥಿಗಳ ನೆರವಿಗೆ ಸರ್ಕಾರ ಬರಬೇಕು ಎಂಬ ಉದ್ದೇಶದಿಂದ ಆನ್ ಲೈನ್ ಲ್ಲಿ ತರಬೇತಿ ಕೊಡುವುದಕ್ಕೆ ಸರ್ಕಾರ ನಿರ್ಧಾರ ಮಾಡಿದೆ.  ತಂತ್ರಜ್ಞಾನ ದಲ್ಲಿ ಕರ್ನಾಟಕ ಮುಂದಿದ್ದು ಅದರ ಬಳಕೆ ಮಾಡಬೇಕಾಗಿದೆ ಎಂದರು.

ಭಾರತದಲ್ಲಿ ಹೆಚ್ಚು ಸೀಟ್ ಪಡೆಯಲು ಅನುಕೂಲ ಆಗುವ ರೀತಿ ತರಬೇತಿ ನೀಡಲಾಗುವುದು. ಸುಮಾರು 20 ಸಾವಿರ ಕೊಚಿಂಗ್ ಶುಲ್ಕವಾಗಲಿದ್ದು, ಸರ್ಕಾರ ಉಚಿತವಾಗಿ ಕೊಚಿಂಗ್ ಕೊಡುತ್ತದೆ ಎಂದರು. 1,91 000 ವಿಧ್ಯಾರ್ಥಿಗಳು ಇದರ ಅನುಕೂಲ ಪಡೆಯುತ್ತಿದ್ದಾರೆ ಹೇಳಿದರು.  ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ.

ಈಗಾಗಲೇ ಅವರನ್ನ ಬಂಧಿಸುವ ಕೆಲಸ ಸರ್ಕಾರ ಮಾಡಿದೆ ಎಂದು ಪಾದರಾಯನಪುರ ಘಟನೆ ಬಗ್ಗೆ ಇದೇ ಸಂದರ್ಭದಲ್ಲಿ ಅಶ್ವತ್ಥನಾರಾಯಣ ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸಂಸ್ಕೃತಿ ಸಚಿವ ಸಿ. ಟಿ. ರವಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಉಪಸ್ಥಿತರಿದ್ದರು.

Facebook Comments

Sri Raghav

Admin