ಬಂಗಾರದ ಜಿಂಕೆ ಹಿಮಾದಾಸ್‍ಗೆ ಮತ್ತೊಂದು ಸ್ವರ್ಣ ಪದಕ..!

ಈ ಸುದ್ದಿಯನ್ನು ಶೇರ್ ಮಾಡಿ

ಪ್ರೇಗ್ (ಜೆಕ್‍ರಿಪಬ್ಲಿಕ್), ಜು.21- ಭಾರತದ ಹೆಮ್ಮೆಯ ಅಥ್ಲೀಟ್ ಕ್ರೀಡಾಪಟು ಹಿಮಾದಾಸ್ ಮತ್ತೊಂದು ಸ್ವರ್ಣ ಸಾಧನೆ ಮಾಡಿದ್ದಾರೆ. ಚಿನ್ನದ ಹುಡುಗಿ ಹಿಮಾ ದಾಸ್‍ಓಡಿದಲ್ಲೆಲ್ಲಾ ಚಿನ್ನದ ಪದಕಕ್ಕೆ ಮುತ್ತಿಕ್ಕುತ್ತಿದ್ದಾರೆ.

ಈ ಒಂದು ತಿಂಗಳಲ್ಲಿ ಈಗಾಗಲೇ ನಾಲ್ಕು ಚಿನ್ನದ ಪದಕ ಗೆದ್ದಿರುವ ಹಿಮಾ ಈಗ ಮತ್ತೊಂದು ಬಂಗಾರಕ್ಕೆ ಕೊರಳೊಡ್ಡಿದ್ದಾರೆ. ಜೆಕ್‍ಗಣರಾಜ್ಯ ಪ್ರೇಗ್‍ನಲ್ಲಿ ನಡೆಯುತ್ತಿರುವ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ ಹಿಮಾ ಬಂಗಾರ ಗೆದ್ದಿದ್ದಾರೆ.

ಕೂಟದ ಮಹಿಳಾ ವಿಭಾಗದ 400 ಮೀ. ಓಟದಲ್ಲಿ ಭಾರತದ ಬಂಗಾರದ ಚಿಗರೆ ಹಿಮಾ ಕೇವಲ 52.09 ಸೆಕಂಡ್‍ನಲ್ಲಿ ಗುರಿ ತಲುಪಿ ದಾಖಲೆ ಬರೆದಿದ್ದಾರೆ. ಈ ಟೈಮಿಂಗ್ ಕೂಟದ ಅತ್ಯುತ್ತಮ ದಾಖಲೆಯಾಗಿದೆ.

ಆದರೆ ಹಿಮಾ ತನ್ನ ವೈಯಕ್ತಿಕ ದಾಖಲೆಯನ್ನು ಮುರಿಯಲು ವಿಫಲರಾದರು. ಈ ಹಿಂದೆ ಜಕಾರ್ತ ಏಷ್ಯನ್‍ಗೇಮ್ಸ್‍ನಲ್ಲಿ 50.79 ಸೆಕಂಡ್‍ನಲ್ಲಿ 400 ಮೀ. ಗುರಿ ಮುಟ್ಟಿದ್ದರು.

Facebook Comments

Sri Raghav

Admin