ಹಿಮಾಚಲ ಪ್ರದೇಶದಲ್ಲಿ ಪ್ರವಾಹಕ್ಕೆ ನಾಲ್ಕು ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಶಿಮ್ಲಾ,ಜು.28-ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಕಾರ ಮಳೆಗೆ ನಾಲ್ಕು ಮಂದಿ ಜೀವ ಕಳೆದುಕೊಂಡು ಒಂಬತ್ತು ಮಂದಿ ನಾಪತ್ತೆಯಾಗಿದ್ದಾರೆ. ಧಾರಾಕಾರ ಮಳೆಯಿಂದ ಪ್ರವಾಹ ಪರಿಸ್ಥಿತಿ ಎದುರಾಗಿದ್ದು ಇದುವರೆಗೂ ನಾಲ್ಕು ಮಂದಿ ಪ್ರಾಣ ಕಳೆದುಕೊಂಡಿದ್ದರೆ 9 ಮಂದಿ ನಾಪತ್ತೆಯಾಗಿದ್ದಾರೆ ಎಂದು ಪ್ರಕೃತಿ ವಿಕೋಪ ನಿರ್ವಹಣಾ ತಂಡದ ನಿರ್ದೇಶಕ ಸುದೇಶ್‍ಕುಮಾರ್ ತಿಳಿಸಿದ್ದಾರೆ.

ಕುಲ್ಲು ಪ್ರಾಂತ್ಯದಲ್ಲಿ ಬ್ರಹ್ಮಗಂಗಾ ನದಿಯಲ್ಲಿ ಪೂನಂ ಎಂಬ ಮಹಿಳೆ ಹಾಗೂ ಆಕೆಯ ನಾಲ್ಕು ವರ್ಷದ ಮಗ ನಿಕುಂಜ್ ಕೊಚ್ಚಿ ಹೋಗಿದ್ದಾರೆ. ಅದೇ ರೀತಿ ಉದಯ್‍ಪುರದ ಲಾಹುಲ್ ಎಂಬಲ್ಲಿ ಕೂಲಿ ಕಾರ್ಮಿಕರ ಎರಡು ಟೆಂಟ್‍ಗಳು ಹಾಗೂ ಒಂದು ಜೆಸಿಬಿ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಘಟನೆಯಲ್ಲಿ ಒಬ್ಬ ಕೂಲಿ ಕಾರ್ಮಿಕ ಮೃತಪಟ್ಟಿದ್ದರೆ, ಮತ್ತೊಬ್ಬ ತೀವ್ರವಾಗಿ ಗಾಯಗೊಂಡಿದ್ದಾನೆ.

ಒಟ್ಟಾರೆ, ಪ್ರವಾಹ ಪರಿಸ್ಥಿಗೆ ನಾಲ್ಕು ಮಂದಿ ಪ್ರಾಣ ಕಳೆದುಕೊಂಡಿದ್ದು ನಾಪತ್ತೆಯಾಗಿರುವ ಒಂಬತ್ತು ಮಂದಿಯ ಶೋಧ ಕಾರ್ಯ ತಿವ್ರಗೊಳಿಸಲಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.

Facebook Comments