ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಕರ್ತವ್ಯದ ವೇಳೆ 3 ಸರ್ಕಾರಿ ನೌಕರರ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಶಿಮ್ಲಾ, ಮೇ 19-ಹಿಮಾಚಲ ಪ್ರದೇಶದ ನಾಲ್ಕು ಲೋಕಸಭಾ ಚುನಾವಣೆಗಳಿಗೆ ಇಂದು ನಡೆದ ಮತದಾನದ ವೇಳೆ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಮೂವರು ಸರ್ಕಾರಿ ನೌಕರರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಶಾಲಾ ಶಿಕ್ಷಕ ವನೀತ್‍ಕುಮಾರ್, ಹೋಂಗಾರ್ಡ್‍ಗಳಾದ ಯೋಧ ದೇವಿಸಿಂಗ್ ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಯ ತಂತ್ರಜ್ಞ ಲೋಲರಾಮ್ ಚುನಾವಣಾ ಕರ್ತವ್ಯದ ವೇಳೆ ಮೃತಪಟ್ಟ ಸರ್ಕಾರಿ ನೌಕರರು.

ಪ್ರತ್ಯೇಕ ಪ್ರಕರಣಗಳಲ್ಲಿ ಹೃದಯಾಘಾತ ಮತ್ತು ಇತರ ಅನಾರೋಗ್ಯದಿಂದ ಈ ಮೂವರು ಮೃತಪಟ್ಟರು. ಇವರ ಹತ್ತಿರದ ಕುಟುಂಬಗಳಿಗೆ ತಲಾ 15 ಲಕ್ಷ ರೂ. ಪರಿಹಾರ ನೀಡುವುದಾಗಿ ಮುಖ್ಯ ಚುನಾವಣಾಧಿಕಾರಿ ದಲೀಪ್ ನೇಗಿ ತಿಳಿಸಿದ್ದಾರೆ.

ಐದು ಮತ್ತು ಆರನೇ ಹಂತದ ಚುನಾವಣೆ ವೇಳೆ ಕರ್ತವ್ಯಕ್ಕೆ ನಿಯೋಜಿತವಾಗಿದ್ದ ಮೂವರು ಸರ್ಕಾರಿ ನೌಕರರು ಹೃದಯಾಘಾತದಿಂದ ಮೃತಪಟ್ಟರು.

ಏಳನೇ ಮತ್ತು ಕೊನೆಯ ಹಂತಕ್ಕೆ ಹಿಮಾಚಲ ಪ್ರದೇಶದ ಶಿಮ್ಲಾ (ಎಸ್ಸಿ ಕ್ಷೇತ್ರ), ಹಮೀರ್‍ಪುರ್, ಕಂಗರಾ ಮತ್ತು ಮಂಡಿ ಈ ಲೋಕಸಭಾ ಕ್ಷೇತ್ರಗಳಲ್ಲಿ ಬಿರುಸಿನ ಮತದಾನವಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin