‘ದೇಶಕ್ಕೊಂದೇ ಭಾಷೆ’ ಕಲ್ಪನೆಗೆ ಬಿಜೆಪಿಯಲ್ಲೇ ಪರ-ವಿರೋಧ ಟ್ವೀಟ್​

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು. ಸೆ. 16 : ಗೃಹ ಸಚಿವ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹಿಂದಿ ದಿವಸ್ ಆಚರಣೆಯಂದು ಹೇಳಿಕೆ ನೀಡಿದ್ದ ದೇಶಕ್ಕೊಂದೇ ಭಾಷೆ ಕಲ್ಪನೆಗೆ ಈಗ ರಾಜ್ಯದ ಸ್ವಪಕ್ಷೀಯ ನಾಯಕರಲ್ಲಿ ಕೆಲವರು ಸಮರ್ಥನೆ ಮಾಡಿಕೊಂಡರೆ, ಮತ್ತೆ ಕೆಲವರು ಅಪಸ್ವರವನ್ನು ಹೊರಹಾಕಿದ್ದರು. ಈಗ ಸಿಎಂ ಬಿ.ಎಸ್​. ಯಡಿಯೂರಪ್ಪ ಸಹ ಹಿಂದಿ ಹೇರಿಕೆಯನ್ನು ವಿರೋಧಿಸಿ ಟ್ವೀಟ್​ ಮಾಡಿದ್ದಾರೆ.

ಹಿಂದಿ ಹೇರಿಕೆ ವಿರುದ್ಧ ಈಗ ಟ್ವೀಟರನಲ್ಲಿ #StopHindiImposition ಅಭಿಯಾನ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಈಗ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ‘ ನಮ್ಮ ದೇಶದ ಎಲ್ಲಾ ಅಧಿಕೃತ ಭಾಷೆಗಳು ಸಮಾನವಾಗಿವೆ.

ಆದಾಗ್ಯೂ, ಕರ್ನಾಟಕದ ಮಟ್ಟಿಗೆ ಕನ್ನಡವೇ ಪ್ರಮುಖ ಭಾಷೆಯಾಗಿದೆ. ನಾವು ಎಂದಿಗೂ ಅದರ ಪ್ರಾಮುಖ್ಯತೆಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ಕನ್ನಡ ಮತ್ತು ನಮ್ಮ ರಾಜ್ಯದ ಸಂಸ್ಕೃತಿಯನ್ನು ಉತ್ತೇಜಿಸಲು ಬದ್ಧರಾಗಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.

ದೇಶದ ಎಲ್ಲಾ ಅಧಿಕೃತ ಭಾಷೆಗಳು ಸಮಾನವಾಗಿವೆ. ಕರ್ನಾಟಕದ ಕುರಿತು ಹೇಳುವುದಾದರೆ ಕನ್ನಡ ಇಲ್ಲಿನ ಪ್ರಧಾನ ಭಾಷೆ, ಕನ್ನಡ ಭಾಷೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಕನ್ನಡ ಭಾಷೆ ಮತ್ತು ರಾಜ್ಯದ ಸಂಸ್ಕೃತಿಯನ್ನು ಉತ್ತೇಜಿಸಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಹಿಂದಿ ದಿವಸ್ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಷಾ, ಹಿಂದಿಯ ಪ್ರಚಾರಕ್ಕೆ ದೇಶವೇ ಒಂದಾಗಬೇಕಿದೆ. ಬೇರೆ ಬೇರೆ ಭಾಷೆಗಳನ್ನು ಹೊಂದಿರುವ ದೇಶ ನಮ್ಮದು. ಇಲ್ಲಿ ಎಲ್ಲ ಭಾಷೆಗಳಿಗೂ ತನ್ನದೇ ಆದ ಪ್ರಾಮುಖ್ಯತೆಯಿದೆ.

ಆದರೆ, ಜಾಗತಿಕವಾಗಿ ಭಾರತದ ಪ್ರತಿನಿಧಿತ್ವಕ್ಕೆ ಒಂದು ಭಾಷೆಯ ಅಗತ್ಯವಿದೆ. ಇಂದು ದೇಶವನ್ನು ಒಂದುಗೂಡಿಸುವ ಕಾರ್ಯ ಮಾಡುವ ಭಾಷೆಯೆಂದರೆ ಹಿಂದಿ. ಹೀಗಾಗಿ ಭಾರತೀಯರೆಲ್ಲರೂ ಅವರ ಮಾತೃಭಾಷೆಯ ಜತೆಗೆ ಹಿಂದಿಯನ್ನೂ ಬಳಕೆ ಮಾಡಬೇಕು.

ಈ ಮೂಲಕ ಗಾಂಧಿ ಮತ್ತು ಸರ್ದಾರ್ ಪಟೇಲ್​ರ ‘ಒಂದು ದೇಶ, ಒಂದು ಭಾಷೆ’ ಎನ್ನುವ ಕನಸು ಸಾಕಾರಗೊಳ್ಳಲಿದೆ ಎಂದು ತಿಳಿಸಿದ್ದರು. ಇದಕ್ಕೂ ಮೊದಲು ‘ಒಂದು ಭಾಷೆ, ಒಂದು ದೇಶ’ ಎಂದು ಟ್ವೀಟ್ ಮಾಡಿದ್ದರು. ಅಮಿತ್​ ಷಾ ಅವರ ಹೇಳಿಕೆ ಮತ್ತು ಟ್ವೀಟ್​ಗೆ ರಾಷ್ಟ್ರಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಸೆಪ್ಟಂಬರ್ 14 ರಂದು ಕೇಂದ್ರ ಸರ್ಕಾರ ಹಿಂದಿ ದಿವಸ್ ಆಚರಿಸುತ್ತಿರುವ ಸಂದರ್ಭದಲ್ಲಿ ಕುಮಾರಸ್ವಾಮಿ ಕೂಡ ಟ್ವೀಟ್ ಮಾಡಿ ‘ಇಂದು ದೇಶದಾದ್ಯಂತ ಕೇಂದ್ರ ಸರ್ಕಾರ ‘ಹಿಂದಿ ದಿವಸ್’ ಆಚರಿಸುತ್ತಿದೆ.  ಸಂವಿಧಾನದಲ್ಲಿ ಹಿಂದಿಯೊಂದಿಗೆ ಅಧಿಕೃತ ಭಾಷೆ ಎನಿಸಿಕೊಂಡಿರುವ ಕನ್ನಡದ ಭಾಷಾ ದಿವಸವನ್ನು ದೇಶಾದ್ಯಂತ ಯಾವಾಗ ಆಚರಿಸುತ್ತೀರಿ ನರೇಂದ್ರ ಮೋದಿಯವರೇ? ಕನ್ನಡಿಗರೂ ಈ ಒಕ್ಕೂಟ ವ್ಯವಸ್ಥೆಯ ಭಾಗವಾಗಿದ್ದಾರೆ ನೆನಪಿರಲಿ ಎಂದು ಟಿಕಿಸಿದ್ದರು.

ಇನ್ನೊಂದೆಡೆಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ ಶಾ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.”ಭಾರತವು ಶ್ರೀಮಂತ ಇತಿಹಾಸ ಮತ್ತು ವೈವಿಧ್ಯಮಯ ಭೌಗೋಳಿಕತೆಯನ್ನು ಹೊಂದಿದೆ. ಪ್ರತಿಯೊಂದೂ ತನ್ನದೇ ಆದ ರೋಮಾಂಚಕ ಸಂಸ್ಕೃತಿ ಮತ್ತು ಅಭ್ಯಾಸವನ್ನು ವಿವರಿಸುತ್ತದೆ.

ಐಕ್ಯತೆಯಿಂದ ಇರಲು ನಾವು ವೈವಿಧ್ಯತೆಯನ್ನು ಸ್ವೀಕರಿಸಬೇಕು. ಅಮಿತ್ ಶಾ ಜಂಟಿ ಕುಟುಂಬದಲ್ಲಿ ದುಷ್ಟ ಅವರು ಒಳಗಿನವರಂತೆ ಐಕ್ಯತೆಯನ್ನು ಮುರಿಯುವ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ! Hiಈ ಮನೆ ಧ್ವಂಸ ಮಾಡುವವರಿಗೆ ಪಾಠ ಕಲಿಸಬೇಕಾಗಿದೆ !! ಎಂದು ಅವರು ಟ್ವೀಟ್ ಮಾಡಿದ್ದರು.

Facebook Comments

Sri Raghav

Admin