ಹಿರಿಯೂರಿನಲ್ಲಿ ಬಿಟ್ಟು ಬಿಡದಂತೆ ಕಾಡುತ್ತಿರುವ ಕೊರೊನಾ

ಈ ಸುದ್ದಿಯನ್ನು ಶೇರ್ ಮಾಡಿ

ಹಿರಿಯೂರು,ಜು.3- ಬಿಟ್ಟು ಬಿಡದಂತೆ ಕಾಡುತ್ತಿರುವ ಕೊರೊನಾ ಸೋಂಕು ಪ್ರತಿ ನಿತ್ಯ ಏರಿಕೆಯಾಗುತ್ತಲ್ಲಿದ್ದು, ನಗರ ಕೊರೊನಾ ಸೋಂಕು ಹರಡುವ ಹಾಟ್ ಸ್ಪಾಟ್ ಕೇಂದ್ರವಾಗಿ ಪರಿವರ್ತನೆಯಾಗಿದೆ. ಹಿರಿಯೂರಿನಲ್ಲಿ ಬುಧವಾರ ಒಂದು ಪಾಸಿಟಿವ್ ಪ್ರಕರಣ ಸೇರಿ ಒಟ್ಟು ಕೋವಿಡ್ ಪಾಸಿಟಿವ್ 22ಕ್ಕೆ ಏರಿಕೆಯಾಗಿದೆ. ಮಂಗಳವಾರ ರಾತ್ರಿಯು ಇಬ್ಬರಿಗೆ ಕೊರೊನಾ ವೈರಸ್ ದೃಢ ಪಟ್ಟಿತ್ತು.

ವೇದಾವತಿ ನಗರದ ಕಿರಾಣಿ ವರ್ತಕರೊಬ್ಬರ ಮೊಮ್ಮಗನ ಹುಟ್ಟು ಹಬ್ಬದ ಆಚರಣೆಯಲ್ಲಿ ಭಾಗಿಯಾಗಿದ್ದವರಲ್ಲಿ 13 ಕೋವಿಡ್ ಸೋಂಕು ಪಾಸಿಟಿವ್ ಪ್ರಕರಣಗಳು ದೃಢ ಪಟ್ಟಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಾಲಾಕ್ಷ ತಿಳಿಸಿದ್ದಾರೆ.

ಒಟ್ಟು 22 ಪ್ರಕರಣಗಳಲ್ಲಿ 13 ಸೋಂಕಿತರು ಹುಟ್ಟು ಹಬ್ಬ ಆಚರಣೆಯ ಕೊಡುಗೆಯಾದರೆ ಉಳಿದ 9 ಪ್ರಕರಣಗಳಲ್ಲಿ ಕಡೂರು ತಾಲೂಕಿನ ಚೌಳ ಹಿರಿಯೂರು ಆರೋಗ್ಯ ಕೇಂದ್ರದಲ್ಲಿ ವೈದ್ಯ ವೃತ್ತಿ ಮಾಡುತ್ತಿರುವ ವೇದಾವತಿ ನಗರದ ವೈದ್ಯರು ಸೇರಿದಂತೆ ಬೆಂಗಳೂರು ಸಂಪರ್ಕ ಹೊಂದಿದವರು, ಮಹಾರಾಷ್ಟ ಮೂಲದ ಟೋಲ್ ಸಿಬ್ಬಂದಿ, ನಿವೃತ್ತ ತೋಟಗಾರಿಕೆ ಕಾಲೇಜಿನ ಮುಖ್ಯಸ್ಥರು ಸೇರಿದ್ದಾರೆ.

ನಗರದಲ್ಲಿ ಕೊರೊನಾ ಸೋಂಕು ಸಮುದಾಯಕ್ಕೆ ಹರಡುತ್ತಿರುವುದರಿಂದ ಹೆಚ್ಚೆತ್ತಿರುವ ತಾಲೂಕು ಆಡಳಿತವು ಸೋಂಕು ಪೀಡಿತ ನಗರಗಳಾದ ವೇದಾವತಿ ನಗರ, ಆಜದ್ ನಗರ, ನೆಹರು ಮೈದಾನ, ಗೋಪಾಲಪುರ ಬಡಾವಣೆ ಸೇರಿದಂತೆ ಮತ್ತಿತರ ಪ್ರದೇಶಗಳನ್ನು ಸಂಪೂರ್ಣ ಸೀಲ್ ಡೌನ್ ಮಾಡಿರುವುದಲ್ಲದೆ ವರ್ಕತರು ಕೂಡ ಮಧ್ಯಾಹ್ನ ಮೂರು ಗಂಟೆ ನಂತರ ಯಾವುದೇ ಅಂಗಡಿಗಳನ್ನು ತೆರೆದು ವಹಿವಾಟು ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕರು ಲಾಕ್ ಡೌನ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಕೊರೊನಾ ಮುಕ್ತರಾಗಿರಬೇಕು.

Facebook Comments