ವೈರಲ್ ಆಯ್ತು ಹಿಟ್ಲರ್ ಟೀಸರ್

ಈ ಸುದ್ದಿಯನ್ನು ಶೇರ್ ಮಾಡಿ

ಹಿಟ್ಲರ್ ಚಿತ್ರದ ತುಣುಕುಗಳು ಈಗ ವೈರಲ್ ಆಗಿದೆ. ಅಮೋಘ ಕಥಾವಸ್ತುವಿನಿಂದ ಕೂಡಿರುವ ಈ ಚಿತ್ರ ಭಾರೀ ನಿರೀಕ್ಷೆ ಮೂಡಿಸಿದ್ದು, ಹಲವು ವಿಶೇಷತೆಗಳಿಂದ ಕೂಡಿದೆ. ಹಳಬರು, ಹೊಸಬರು ಅಂತ ನೋಡದೆ ಜನರು ಒಳ್ಳೆಯ ಚಿತ್ರವನ್ನು ವೀಕ್ಷಿಸುತ್ತಾರೆ ಎಂಬುದಕ್ಕೆ ಹಲವಾರು ಉದಾಹರಣೆಗಳಿವೆ. ಅಂತೆಯೇ ಈಗ ಹೊಸ ಪ್ರತಿಭಾನ್ವಿತರು ಸೇರಿಕೊಂಡು ಸಿದ್ಧಪಡಿಸಿರುವ ಹಿಟ್ಲರ್ ಚಿತ್ರವು ಸಾಕ್ಷಿಯಾಗುತ್ತದೆ.

ಟೀಸರ್ ಬಿಡುಗಡೆ ಮಾಡಿದ ಹನ್ನೆರಡು ಗಂಟೆಗಳ ಒಳಗೆ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಆಗಿರುವುದು ತಂಡಕ್ಕೆ ಖುಷಿ ತಂದಿದೆ. ಬಿಡುಗಡೆ ದಿನಾಂಕದ ಪೋಸ್ಟರ್ ಅನಾವರಣ ಮಾಡಿದ ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಮಾತನಾಡಿ, ಇಡೀ ಜಗತ್ತಿಗೆ ಹೆಸರು ತಂದು ಕೊಟ್ಟ ಸಿನಿಮಾ ಅಂದರೆ ಕೆಜಿಎಫ್. 2008ರಂದು ಅಂಬಿ ಉತ್ಸವದಲ್ಲಿ ಯಶ್ ಅವರು ಶ್ರೀಕೃಷ್ಣದೇವರಾಯನ ಒಂದು ಪಾತ್ರವನ್ನು ಚೆನ್ನಾಗಿ ಮಾಡಿದ್ದರು. ನಿಮಗೆ ಒಳ್ಳೆಯ ಭವಿಷ್ಯವಿದೆ. ಎಲ್ಲರೂ ಹೊಗಳುವಂತೆ ಆಗುವಿರಿ ಎಂದು ಅಂದು ಹೇಳಿದ್ದ. ಕಿನ್ನಾಳ್‍ರಾಜ್ ಕೆಜಿಎಫ್‍ನಲ್ಲಿ ಅಮ್ಮನ ಬಗ್ಗೆ ಬರೆದ ಹಾಡು ಮನ ಮುಟ್ಟುತ್ತದೆ.

ಉತ್ತರ ಕರ್ನಾಟಕದ ಪ್ರತಿಭೆಗಳು ಈ ಮಟ್ಟಕ್ಕೆ ಬಂದಿರುವುದು ಸಂತಸ ತಂದಿದೆ. ಇದು ಕೂಡ ಯಶ್ ಸಿನಿಮಾದಂತೆ ಆಗಲಿ. ಒಂದು ವರ್ಷದಿಂದ ಅವರಿಗಾಗಿ ಕಾಯುತ್ತಿದ್ದೇನೆ. ಅಮ್ಮನ ದಿನದಂದು ಇವರ ಜೊತೆಗೆ ಅನನ್ಯಭಟ್, ರವಿ ಬಸ್ರೂರು ಸೇರಿಕೊಂಡು ಹಾಡುವ ಗೀತೆಗೆ ನಾನು ಸೇರಿಕೊಳ್ಳಬೇಕೆಂದು ಬಯಸಿದ್ದಾ. ಅದು ಆಗಲಿಲ್ಲ. ಮುಂದಿನ ವರ್ಷ ಆಗುತ್ತದೆಂಬ ನಿರೀಕ್ಷೆಯಲ್ಲಿ ಇದ್ದೇನೆ. ಒಳ್ಳೆಯದಾಗಲಿ ಎಂದರು. ನಿರ್ದೇಶಕರೊಂದಿಗೆ ಹನ್ನೆರಡು ವರ್ಷದ ಒಡನಾಟವಿದೆ.

ಅಂದೇ ನನ್ನ ಸಂಗೀತದಲ್ಲಿ ಅವರು ನಿರ್ದೇಶನ ಮಾಡಬೇಕಿತ್ತು. ಕಾಲಕೂಡಿ ಬರಲಿಲ್ಲ. ಅವರಿಗೆ ಎಲ್ಲಾ ಶೇಡಿನ ಬರವಣಿಗೆ ಗೊತ್ತಿದೆ. ಅವರುಗಳ ಶ್ರಮ ತೆರೆಯ ಮೇಲೆ ಬಂದಿದೆ. ಇನ್ನೆನಿದ್ದರೂ ಪ್ರೇಕ್ಷಕ ಮಹಾಪ್ರಭುಗಳು ನಮಗೆ ಹರಸಬೇಕೆಂದು ಸಂಗೀತ ಸಂಯೋಜಕ ರವಿಬಸ್ರೂರು ಹೇಳಿದರು. ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು. ಅಂತಹುದೆ ಕೆಲಸವನ್ನು ಇವರೆಲ್ಲರೂ ಮಾಡಿದ್ದಾರೆ. ಹಿಟ್ ಆಗುವ ಲಕ್ಷಣವಿದೆ ಎಂದು ಕೆಜಿಎಫ್ ಖ್ಯಾತಿಯ ಗರುಡರಾಮ್ ಭವಿಷ್ಯ ನುಡಿದರು. ನಿರ್ದೇಶಕರು ಹೇಳಿದ ಒನ್ ಲೈನ್ ಕೇಳಿ ಖುಷಿಯಿಂದ ನಿರ್ಮಾಣ ಹಾಗೂ ನಟಿಸಲು ಮನಸ್ಸು ಮಾಡಲಾಯಿತು ಅಂತ ಮಾತಿಗೆ ಹಾಕಿದರು ನಾಯಕ ಲೋಹಿತ್.

ಗಾರ್ಮೆಂಟ್ಸ್ ಹುಡುಗಿಯಾಗಿ ಸಸ್ಯ ನಾಯಕಿ, ಮಾಜಿ ರೌಡಿಯಾಗಿ ಬಲರಾಜವಾಡಿ, ಖಳನಾಗಿ ವರ್ಧನ್ ತೀರ್ಥಹಳ್ಳಿ, ಸಂಗೀತ ನಿರ್ದೇಶಕ ಆಕಾಶ್‍ರಾವ್, ಎಸ್ಕಾರ್ಟ್ ಶಂಕರ್, ಮನಮೋಹನ್ ರೈ, ವಿಜಯ್ ಚೆಂಡೂರು ಎಲ್ಲರೂ ಅವಕಾಶ ಸಿಕ್ಕಬಗೆಯನ್ನು ಹಂಚಿಕೊಂಡರು. ಗಾನಶಿವ ಮೂವೀಸ್ ಮುಖಾಂತರ ಮಮತಾಲೋಹಿತ್ ಬಂಡವಾಳ ಹೂಡಿರುವ ಚಿತ್ರ ಏ.9ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.

Facebook Comments