ರಾಜ್ಯದಲ್ಲಿ ಕೊರೊನಾ ಸಾವಿನ ಸತ್ಯ ಮುಚ್ಚಿಡಲಾಗುತ್ತಿದೆ: ಎಚ್.ಕೆ.ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.31-ಉದ್ದೇಶ ಪೂರ್ವಕವಾಗಿ ಕೊರೊನಾ ಸಾವಿನ ಸತ್ಯ ಮುಚ್ಚಿಡಲಾಗುತ್ತಿದೆ ಎಂದು ಆರೋಪಿಸಿದ ಮಾಜಿ ಸಚಿವ ಎಚ್.ಕೆ.ಪಾಟೀಲ್, ವಿರೋಧ ಪಕ್ಷಗಳು ಹಾಗೂ ತಜ್ಞರ ಸಭೆ ಕರೆದು ಪರಿಹಾರದ ಬಗ್ಗೆ ಚರ್ಚಿಸಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸಾವಿನ ಪ್ರಕರಣ ರಾಜ್ಯದಲ್ಲಿ ಹೆಚ್ಚುತ್ತಿದೆ.

ಜನವರಿಯಿಂದ ಜುಲೈವರೆಗೆ 49136 ಸಾವು ಸಂಭವಿಸಿದೆ. ಸ್ಮಶಾನ, ಚಿತಾಗಾರ, ಖಬರಸ್ತಾನಗಳಿಂದ ಮಾಹಿತಿ ದೊರೆತಿದೆ. ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 1866 ಎಂದು ಮಾಹಿತಿ ನೀಡಲಾಗಿದೆ. ಆದರೆ 10ಸಾವಿರ ಸಂಖ್ಯೆ ವ್ಯತ್ಯಾಸ ಆಗುತ್ತಿದೆ. ಬೆಂಗಳೂರಲ್ಲಿ ಕೊರೋನಾ ಹೊರತುಪಡಿಸಿ ಹತ್ತು ಸಾವಿರ ಸಾವು ಹೆಚ್ಚಾಗಿದೆ. ಈ ಬಗ್ಗೆ ಸರ್ಕಾರ ಸಮಗ್ರ ಮಾಹಿತಿ ನೀಡಬೇಕು ಎಂದರು.
ಸಾವು, ಸಾವಿನ ಕಾರಣ ಸಮೀಕ್ಷೆ ಮಾಡಬೇಕಿತ್ತು. ಆದರೆ ಈ ಬಾರಿ ಯಾವುದೇ ಸಮೀಕ್ಷೆ ಕೈಗೊಂಡಿಲ್ಲ. ಸತ್ಯಾಂಶ ಮರೆಮಾಚಲು ಸರ್ಕಾರ ಯತ್ನಿಸುತ್ತಿದೆ. ಹೀಗಾಗಿ ಸಮೀಕ್ಷೆ ಮಾಡಲು ಸರ್ಕಾರ ಹಿಂದೇಟು. ಉಸಿರಾಟ ತೊಂದರೆ ಕಾರಣ 8.5% ಸಾವು ಸಂಭವಿಸಿದೆ. ಆಕ್ಷಿಜನ್ಕೊರತೆ ನೀಗಿಸಲು ಕ್ರಮ ತೆಗೆದುಕೊಂಡಿಲ್ಲ. ಸರ್ಕಾರದ ಬೇಜವಬ್ದಾರಿ ಮತ್ತೊಮ್ಮೆ ಬಯಲಾಗಿದೆ ಎಂದು ಟೀಕಿಸಿದರು.
ಕರ್ನಾಟಕದಲ್ಲಿ ಕೊರೋನ ದಿನೇ ದಿನೇ ಗಂಭೀರವಾಗುತ್ತಿದೆ. ರಾಷ್ಟ್ರೀಯ ಸರಾಸರಿಗಿಂತ ರಾಜ್ಯದಲ್ಲಿ ದುಪ್ಪಟ್ಟಾಗಿದೆ. ಬೆಂಗಳೂರಿನ ಪರಿಸ್ಥಿತಿ ಭಯಾನಕವಾಗಿದೆ ಎಂದು ಆರೋಪಿಸಿದರು.
ಸರಿಯಾದ ಸಾವಿನ ಚಿತ್ರಣ ಯಾರಿಗೂ ಸಿಕ್ಕಿಲ್ಲ. ಈ ಬಗ್ಗೆ ಮುಖ್ಯಮಂತ್ರು ಉತ್ತರ ನೀಡಬೇಕು. ವಿದೇಶದಿಂದ ಬಂದ ಜನರನ್ನು ಕ್ವಾರಂಟೈನ್ ಮಾಡಿ ಎಂದರೆ ಉದಾಸೀನ ಮಾಡಿದರು. ಇನ್ನೂ ಆಕ್ಸಿಜನ್ ಸಮಸ್ಯೆ ರಾಜ್ಯದಲ್ಲಿ ಇದೆ. ಎಚ್‍ಎಫ್‍ಎನ್‍ಸಿ ಅಳವಡಿಕೆ ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ, ಎಲ್ಲೂ ಮಾಡುತ್ತಿಲ್ಲ. ನಿರ್ಲಕ್ಷ್ಯಕ್ಕೆ ಇದೂ ಒಂದು ಕಾರಣ. ಜನರ ಆಕ್ರೋಶಕ್ಕೆ ಮೊದಲು ಉತ್ತರ ನೀಡಲಿ ಎಂದು ಸರ್ಕಾರಕ್ಕೆ ಎಚ್.ಕೆ.ಪಾಟೀಲ್ ಆಗ್ರಹಿಸಿದರು.

Facebook Comments