ಎಚ್‍ಎನ್ ವ್ಯಾಲಿಗೆ ಇನ್ನಷ್ಟು ಕೆರೆಗಳ ಸೇರ್ಪಡೆಗಾಗಿ ಕೇಂದ್ರದ ನೆರವಿಗೆ ಯತ್ನ : ಸುಧಾಕರ್

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಬಳ್ಳಾಪುರ,ಸೆ.10- ಎಚ್ ಎನ್ ವ್ಯಾಲಿ ಯೋಜನೆಗೆ ಜಿಲ್ಲೆಯ ಇನ್ನಷ್ಟು ಕೆರೆಗಳನ್ನು ಸೇರಿಸಬೇಕಿದ್ದು ಇದಕ್ಕೆ ಕೇಂದ್ರದ ಜಲಶಕ್ತಿ ಮಂತ್ರಾಲಯದಿಂದ ಹೆಚ್ಚಿನ ನೆರವು ಪಡೆಯಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ. ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಣ್ಣ ನೀರಾವರಿ ಇಲಾಖೆಯ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಕೆಲ ದೂರುಗಳಿವೆ.

ಅವು ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು. ಜನರ ಆಶೋತ್ತರಗಳಿಗೆ ಪೂರಕವಾಗಿ ಕೆಲಸ ಮಾಡಬೇಕು ಎಂದರು. ಜಕ್ಕಲಮಡುಗು ಹೂಳು ತೆಗೆಸುವ ಕಾರ್ಯಕ್ರಮಕ್ಕೆ ವಿವರವಾದ ವರದಿ ಸಿದ್ಧಪಡಿಸಿ ನೀಡುವಂತೆ ಸೂಚನೆ ನೀಡಿದರು. ತಪ್ಪು ಬಿಲ್ ಬರೆಯುವುದು, ಕಾಮಗಾರಿ ಗಳ ಡ್ಯುಪ್ಲಿಕೇಷನ್, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆ ಬಿಲ್ ಮಾಡುವ ಸಂಪ್ರದಾಯ ಜಿಲ್ಲೆಯಲ್ಲಿ ಇರಬಾರದು. ಅದನ್ನು ಸಹಿಸಲು ಆಗುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನರೇಗಾ ಇವತ್ತಿನ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಗ್ರಾಮೀಣ ಭಾಗದ ಬಡವರಿಗೆ ಕೆಲಸ ನೀಡಬೇಕು ಎಂದು ಉದ್ದೇಶಿಸಿಕೊಂಡಿದೆ. ನಮ್ಮ ಜಿಲ್ಲೆಯಲ್ಲಿ ನೂರೈವತ್ತು ಪಂಚಾಯತಿಗಳಿವೆ. ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಯಾಶೀಲ ಕಾರ್ಡುಗಳನ್ನು ಒಂದು ವರ್ಷಕ್ಕೆ 139 ಕೋಟಿ ಮಾಡಲಾಗುತ್ತಿದೆ. ಜಾಬ್ ಕಾಡ್9 ಹೆಚ್ಚಿಸಿದರೆ ಹತ್ತು ಪಟ್ಟು ಹೆಚ್ಚಿಸಬಹುದು. ಆ ನಿಟ್ಟಿನಲ್ಲಿ ಕೆಳಹಂತದ ಅಧಿಕಾರಗಳು, ಪಿಡಿಒಗಳು ಕೆಲಸ ಮಾಡಬೇಕು.

ಇದರಿಂದ ಆಸ್ತಿ ಸೃಜನೆ, ವೈಯಕ್ತಿಕ ಫಲಾನುಭವಿಗಳಿಗೂ ನೆರವಾಗುತ್ತದೆ. ಹೆಚ್ಚಿನ ಹಣ ತರಲು ಅವಕಾಶ ವಿದೆ. ಪ್ರತಿ ತಿಂಗಳು ಗಡುವು ನೀಡಿ ನೀಲನಕ್ಷೆ ಇಟ್ಟುಕೊಂಡು ಕರ್ತವ್ಯ ನಿರ್ವಹಿಸಬೇಕು ಮತ್ತು ನಿಯಮಿತವಾಗಿ ವರದಿ ನೀಡಬೇಕು. ಪ್ರತಿ ವಾರ ಪಿಡಿಒಗಳಿಗೆ ಗುರಿ ನೀಡಿ ಪರಿಶೀಲನೆ ನಡೆಸಬೇಕು. ವರ್ಷಕ್ಕೆ ಕನಿಷ್ಠ ಒಂದು ಸಾವಿರ ಕೋಟಿ ಅನುದಾನ ತರಬೇಕು ಎಂದು ಸೂಚನೆ ನೀಡಿದರು.

Facebook Comments