ಮಹಿಳಾ ಹಾಕಿ : ಭಾರತ-ಆಸ್ಟ್ರೇಲಿಯಾ ಒಲಂಪಿಕ್ ಅರ್ಹತಾ ಸುತ್ತಿನ ಪಂದ್ಯ ಡ್ರಾ

ಈ ಸುದ್ದಿಯನ್ನು ಶೇರ್ ಮಾಡಿ

ಟೋಕಿಯೋ, ಆ.18- ಉದಯರವಿ ನಾಡು ಜಪಾನ್ ರಾಜಧಾನಿ ಟೋಕಿಯೋದಲ್ಲಿ ಇಂದು ನಡೆದ ಒಲಂಪಿಕ್ ಕ್ರೀಡಾಕೂಟದ ಮಹಿಳಾ ಹಾಕಿ ಪರೀಕ್ಷಾ ಸುತ್ತಿನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ 2-2 ಸಮಬಲದೊಂದಿಗೆ ಡ್ರಾ ಸಾಧಿಸಿವೆ.

ಮಹಿಳಾ ಹಾಕಿಯಲ್ಲಿ ವಿಶ್ವದ ಎರಡನೆ ಶ್ರೇಯಾಂಕ ಪಡೆದಿರುವ ಪ್ರಬಲ ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸುವುದನ್ನು ಭಾರತೀಯ ವನಿತೆಯರು ಯಶಸ್ವಿಯಾಗಿ ತಡೆದರು.

ಭಾರತದ ವಂದನಾ ಕಟಾರಿಯಾ (36 ನಿಮಿಷ) ಮತ್ತು ಗುರ್ಜಿತ್ ಕೌರ್ (59 ನಿಮಿಷ) ತಲಾ ಒಂದೊಂದು ಗೋಲುಗಳನ್ನು ಬಾರಿಸಿದರು. ಆಸ್ಟ್ರೇಲಿಯಾ ಪರ ಕೈಟ್ಲಿನ್ ನೋಬ್ಸ್ (14 ನಿ.) ಮತ್ತು ಗ್ರೇಸ್ ಸ್ಟಿವಾರ್ಟ್ (43ನಿ.) ಎರಡು ಗೋಲುಗಳನ್ನು ಗಳಿಸಿದರು.

ಆದರೆ, ಮತ್ತೊಂದು ಗೋಲು ಬಾರಿಸುವ ಆಸ್ಟ್ರೇಲಿಯಾ ವನಿತೆಯರ ಯತ್ನವನ್ನು 10ನೆ ಶ್ರೇಯಾಂಕದ ಭಾರತೀಯ ಮಹಿಳಾ ತಂಡ ಯಶಸ್ವಿಯಾಗಿ ತಡೆಗಟ್ಟಿ 2-2 ಗೋಲುಗಳಲ್ಲಿ ಡ್ರಾ ಮಾಡಿಕೊಂಡಿತು.

ನಿನ್ನೆ ನಡೆದ ರಾಬಿನ್ ಹಂತದ ಮೊದಲ ಪಂದ್ಯದಲ್ಲಿ ಭಾರತದ ವನಿತೆಯರು ಜಪಾನ್ ತಂಡವನ್ನು 2-1 ಗೋಲುಗಳಿಂದ ಮಣಿಸಿ ಮುನ್ನಡೆ ಸಾಧಿಸಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin