ಸರ್ಕಾರಿ ನೌಕರರಿಗೆ ಸಾಲು ಸಾಲು ರಜೆ..! ಇಲ್ಲಿದೆ ಮಾಹಿತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.9-ಸರ್ಕಾರಿ ಅಧಿಕಾರಿ ಹಾಗೂ ನೌಕರರಿಗೆ ಸಾಲು ಸಾಲು ರಜೆ ಸೌಲಭ್ಯ ದೊರೆಯಲಿದೆ. ಏ.12ರ ಸೋಮವಾರದಂದು ವೈಯಕ್ತಿಕ ರಜೆ ಪಡೆದರೆ ನಾಳೆಯಿಂದ ನಿರಂತರವಾಗಿ ಐದು ದಿನ ರಜೆ ದೊರೆಯಲಿದೆ.  ನಾಳೆ ಈ ತಿಂಗಳ 2ನೇ ಶನಿವಾರ, ಏ.11 ಭಾನುವಾರ, ಏ.13 ಯುಗಾದಿ ಹಬ್ಬ, ಏ.14 ಅಂಬೇಡ್ಕರ್ ಜಯಂತಿ ಹೀಗೆ ಒಂದರ ಹಿಂದೆ ಮತ್ತೊಂದು ಸರ್ಕಾರಿ ರಜೆ ಸಿಗಲಿದೆ.

ಸರಣಿ ರಜೆ ಇರುವುದರಿಂದ ಊರುಗಳಿಗೆ ಹೋಗುವವರು, ಪ್ರವಾಸ ಕೈಗೊಳ್ಳುವವರಿಗೆ ಅನುಕೂಲವಾಗಿದೆ. ಆದರೆ ಕೋವಿಡ್ ಸಾಂಕ್ರಾಮಿಕ ರೋಗದ 2ನೇ ಅಲೆ ಹೆಚ್ಚುತ್ತಿರುವ ಆತಂಕ ರಜೆ ಸೌಲಭ್ಯ ಸದ್ಬಳಕೆಗೆ ಅಡ್ಡಿಯಾಗಿದೆ. ನಗರ ಪ್ರದೇಶಗಳಲ್ಲಿ ನೆಲೆಸಿರುವ ಬಹಳಷ್ಟು ಮಂದಿ ಯುಗಾದಿ ಹಬ್ಬ ಆಚರಣೆಗೆ ತಮ್ಮ ತಮ್ಮ ಊರುಗಳಿಗೆ ಹೋಗುವುದು ವಾಡಿಕೆ. ಆದರೆ ಸಾರಿಗೆ ಸಂಸ್ಥೆಗಳ ನೌಕರರು ಅನಿರ್ಧಿಷ್ಟ ಅವಧಿ ಮುಷ್ಕರ ನಡೆಸುತ್ತಿರುವುದರಿಂದ ಪ್ರಯಾಣ ಮಾಡುವುದು ಕಷ್ಟವಾಗಿದೆ.

Related Stories :
* ನಾಳೆಯಿಂದ ಕೊರೊನಾ ಕಫ್ರ್ಯೂ : ಏನಿರುತ್ತೆ..? ಏನಿರಲ್ಲ..? ಇಲ್ಲಿದೆ ಕಂಪ್ಲಿಟ್ ಡಿಟೇಲ್ಸ್..!
* 24 ಗಂಟೆಯಲ್ಲಿ 1.31 ಲಕ್ಷ ಮಂದಿಗೆ ಪಾಸಿಟಿವ್, 780 ಸಾವು..! ಭಾರತ ಈಗ ಕೊರೋನಾ ಹಾಟ್‌ಸ್ಪಾಟ್.!
* ಮಾಸ್ಕ್ ದಂಡದ ಪ್ರಮಾಣ ಹೆಚ್ಚಿಸಲು ಸರ್ಕಾರ ನಿರ್ಧಾರ…!

ವೈಯಕ್ತಿಕ ವಾಹನವುಳ್ಳವರಿಗೆ ಸಮಸ್ಯೆಯಿಲ್ಲ. ಇಲ್ಲದಿದ್ದರೆ ಅನಿವಾರ್ಯವಾಗಿ ಖಾಸಗಿ ವಾಹನಗಳ ಮೊರೆ ಹೋಗಬೇಕಿದೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ಕೆಎಸ್‍ಆರ್‍ಟಿಸಿ ದೈನಂದಿನ ಬಸ್‍ಗಳ ಜೊತೆಗೆ ಹೆಚ್ಚುವರಿ ಬಸ್ ಸೌಲಭ್ಯವನ್ನು ಕಲ್ಪಿಸುತ್ತಿತ್ತು. ಈ ಬಾರಿ ದೈನಂದಿನ ಬಸ್‍ಗಳೇ ಇಲ್ಲದಂತಾಗಿದೆ. ಇದರಿಂದ ಬಹಳಷ್ಟು ಮಂದಿ ಹಬ್ಬಕ್ಕೆ ಊರಿಗೆ ಹೋಗುವುದರಿಂದ ಹಿಂದೆ ಸರಿದಿದ್ದಾರೆ.

Facebook Comments