ಕಾನ್‍ಸ್ಟೆಬಲ್ ಹುದ್ದೆಗಳ ಭರ್ತಿ ನಂತರ ಪೊಲೀಸರಿಗೆ ಪಾಳಿ ಕರ್ತವ್ಯದ ವ್ಯವಸ್ಥೆ ಜಾರಿ : ಬೊಮ್ಮಾಯಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.18- ಪೊಲೀಸ್ ಕಾನ್‍ಸ್ಟೆಬಲ್ ಹುದ್ದೆಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿದ ಬಳಿಕ ಪಾಳಿ ಕರ್ತವ್ಯದ ವ್ಯವಸ್ಥೆಯನ್ನು ಜಾರಿಗೆ ತರುವ ಕುರಿತು ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದರು.ವಿಧಾನಪರಿಷತ್‍ನಲ್ಲಿ ಪ್ರಶ್ನೋತ್ತರದ ಅವಯಲ್ಲಿ ಸದಸ್ಯ ಎಸ್.ರವಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ 2 ವರ್ಷಗಳಿಂದ ದೊಡ್ಡ ಪ್ರಮಾಣದಲ್ಲಿ ನೇಮಕಾತಿ ನಡೆದಿದೆ. ಪಿಎಸ್‍ಐನಿಂದ ಕಾನ್‍ಸ್ಟೆಬಲ್‍ವರೆಗೆ 15 ಸಾವಿರ ಹುದ್ದೆ ಭರ್ತಿ ಮಾಡಿಕೊಳ್ಳಲಾಗಿದೆ. ಇನ್ನು 23 ಸಾವಿರ ಹುದ್ದೆಗಳು ಖಾಲಿ ಇವೆ ಶೀಘ್ರದಲ್ಲೇ ನೇಮಕಾತಿ ಮಾಡಲಾಗುವುದು.

ಎಲ್ಲಾ ಹುದ್ದೆಗಳಿಗೂ ಸಿಬ್ಬಂದಿಗಳು ಭರ್ತಿಯಾದ ಬಳಿಕ ಪಾಳಿ ಕರ್ತವ್ಯದ ವ್ಯವಸ್ಥೆಯನ್ನು ಜಾರಿಗೆ ತರುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದರು.ಅಂತಾರಾಷ್ಟ್ರೀಯ ಮಾನದಂಡದ ಪ್ರಕಾರ ಕರ್ತವ್ಯದ ಅವಯನ್ನು 9 ಗಂಟೆ ಎಂದು ನಿಗದಿ ಮಾಡಲಾಗಿದೆ. ಅದನ್ನು ಎಲ್ಲಾ ದೇಶಗಳು ಪಾಲನೆ ಮಾಡುತ್ತಿವೆ.

ಪೊಲೀಸರಿಗೆ ಮಹತ್ವದ ಜವಾಬ್ದಾರಿಗಳಿವೆ. ಕರ್ತವ್ಯದ ಅವ ಮುಗಿದು ಹೊರಡುವ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆ ಎದುರಾದರೆ ಅವರು ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕಾಗುತ್ತದೆ. ಸಮಯ ಮುಗಿದಿದೆ ಎಂದು ಹೋಗಲು ಆಗುವುದಿಲ್ಲ.

ಕೆಲವೊಮ್ಮೆ ಬಿಡುವಿಲ್ಲದಂತೆ ದುಡಿಮೆ ಮಾಡುತ್ತಾರೆ. ಅವರ ಒತ್ತಡದ ಬಗ್ಗೆ ನಮಗೆ ಅರಿವಿದೆ. ಅದಕ್ಕಾಗಿ 6 ದಿನಗಳ ಕರ್ತವ್ಯದ ಬಳಿಕ ಎರಡು ದಿನ ವಾರದ ರಜೆ ವ್ಯವಸ್ಥೆ ಜಾರಿಯಲ್ಲಿದೆ ಎಂದು ವಿವರಿಸಿದರು.ಪಿಎಸ್‍ಐಗಿಂತ ಮೇಲ್ಪಟ್ಟ ಎಕ್ಸಿಕ್ಯೂಟಿವ್ ಹುದ್ದೆಗಳನ್ನು 2 ವರ್ಷಗಳಿಗೊಮ್ಮೆ ಬದಲಾವಣೆ ಮಾಡುವ ವ್ಯವಸ್ಥೆ ಈ ಮೊದಲಿತ್ತು. ಅದನ್ನು ಪ್ರಸ್ತುತ 1 ವರ್ಷಕ್ಕೆ ಕಡಿಮೆ ಮಾಡಲಾಗಿದೆ.

ಅಧಿಕಾರಿ ಠಾಣೆಗೆ ನಿಯೋಜನೆಗೊಂಡು ಅಲ್ಲಿನ ಪರಿಸ್ಥಿತಿ ಅರ್ಥ ಮಾಡಿಕೊಂಡು ಕೆಲಸ ಆರಂಭಿಸುವ ವೇಳೆಗೆ ಒಂದು ವರ್ಷ ಕಳೆದು ಹೋಗಿರುತ್ತದೆ. ಇದರಿಂದಾಗಿ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತಿದೆ. ಈ ಹಿಂದಿನಂತೆ 2 ವರ್ಷಗಳಿಗೆ ಸೇವಾ ಅವಯನ್ನು ಹೆಚ್ಚಿಸಬೇಕೆಂಬ ಬೇಡಿಕೆ ಹೆಚ್ಚಾಗಿ ಕೇಳಿಬರುತ್ತಿದೆ ಎಂದರು.

ಬೆಂಗಳೂರಿನಲ್ಲಿ 5 ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಮಾಡಬಾರದು ಎಂಬುದು ಸೇರಿದಂತೆ ನಾನಾ ರೀತಿಯ ನಿಯಮಾವಳಿಯನ್ನು ನಾವು ಜಾರಿಗೆ ತಂದಿದ್ದೇವೆ ಎಂದು ಅವರು ತಿಳಿಸಿದರು.

Facebook Comments

Sri Raghav

Admin