ಮಧ್ಯಾಹ್ನ 12 ಗಂಟೆ ನಂತರ ಮನೆಯಿಂದ ಹೊರಗೆ ಬಂದರೆ ಹುಷಾರ್..! :

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.15-ಮಧ್ಯಾಹ್ನ 12 ಗಂಟೆ ನಂತರ ಯಾವುದೇ ಕಾರಣಕ್ಕೂ ಯಾರೂ ಹೊರಗೆ ಬರಬಾರದು. ನಿಯಮ ಉಲ್ಲಂಘಿಸಿದರೆ ಪೊಲೀಸ್ ಫೋರ್ಸ್ ಬಳಕೆ ಮಾಡಬೇಕಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

ಆರ್.ಟಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಗತ್ಯ ಸಾಮಗ್ರಿಗಳ ಖರೀದಿ ಮಾಡಲು ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ 12 ಗಂಟೆಯ ವರೆಗೆ ಜನರಿಗೆ ಹೊರಬರಲು ಅವಕಾಶ ನೀಡಲಾಗಿದೆ.

ಆದರೆ ಮಧ್ಯಾಹ್ಮದ ಬಳಿಕ ಲಾಕ್‍ಡೌನ್ ಉಲ್ಲಂಘನೆ ಮಾಡಿದರೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಕೊಟ್ಟರು.

ಲಾಕ್‍ಡೌನ್ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು, ಅನಿವಾರ್ಯ ಬಂದರೆ ಪೊಲೀಸ್ ಫೋರ್ಸ್ ಪ್ರಯೋಗ ಮಾಡಲಾಗುವುದು. ಆದರೆ ಅಂತಹ ಪರಿಸ್ಥಿತಿಯನ್ನು ಸಾರ್ವಜನಿಕರು ತಂದು ಕೊಡಬಾರದು.

ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್‍ಡೌನ್ ಜಾರಿಗೆಗೊಳಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಾಹನ ಸಂಚಾರ ನಿಯಂತ್ರಣ ಮಾಡುವ ನಿಟ್ಟಿನ್ಲಲಿ ಎಲ್ಲಾ ಕಡೆಗಳಲ್ಲಿ ಬ್ಯಾರಿಕೇಡ್‍ಗಳನ್ನು ಹಾಕಲಾಗಿದೆ. 12 ಗಂಟೆಯ ವರೆಗೆ ಅಗತ್ಯ ಸಾಮಗ್ರಿಗಳ ಖರೀದಿಗೆ ಅವಕಾಶ ನೀಡಿಲಾಗಿದೆ. ಜನರಿಗೆ ಸದ್ಯದ ಪರಿಸ್ಥಿತಿ ಅರಿವಾಗಿದೆ ಎಂದರು.

ಬೆಂಗಳೂರು ನಗರ, ಗ್ರಾಮಾಂತರದಲ್ಲಿ ಲಾಕ್ಡೌನ್ ಕಟ್ಟುನಿಟ್ಟಿನ ಪಾಲನೆ ಮಾಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ವಾಹನ, ಜನಸಂಚಾರ ನಿಯಂತ್ರಣದ ಸಲುವಾಗಿ ಹಲವಾರು ಬ್ಯಾರಿಕೇಡ್ಗಳನ್ನು ಹಾಕಲಾಗಿದೆ. 12 ಗಂಟೆವರೆಗೂ ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದೇವೆ. ವಾಹನದಟ್ಟಣೆ ಕಡಿಮೆ ಇದ್ದು, ಲಾಕ್ಡೌನ್ ವಾತಾವರಣ ಈಗಾಗಲೇ ನಿರ್ಮಾಣವಾಗಿದೆ. ಜನರಿಗೂ ಕೂಡ ಇದರ ಅರಿವಾಗಿದೆ ಎಂದರು.

ಈ ಲಾಕ್ಡೌನ್ ಬಹಳ ಮಹತ್ವದ್ದಾಗಿದ್ದು, ಕಳೆದ ಬಾರಿ ಇಷ್ಟು ದೊಡ್ಡ ಮಟ್ಟದಲ್ಲಿ ಸೋಂಕಿರಲಿಲ್ಲ. ಆದರೆ, ಈಗ ಪರಿಸ್ಥಿತಿ ಬೇರೆ ಇದೆ. ಅತಿ ಹೆಚ್ಚು ಸೋಂಕಿತರಿರುವ ಭಾಗದಲ್ಲಿ ಲಾಕ್ಡೌನ್ ಜಾರಿ ಮಾಡಲಾಗಿದೆ. ಕೊರೊನಾ ಸೋಂಕು ನಿಯಂತ್ರಿಸಲು ಜನರು ಸಹಕಾರ ನೀಡಬೇಕಾಗಿದೆ.

ವೈದ್ಯಕೀಯ ಸೇವೆ, ಆಹಾರ ಸೇರಿದಂತೆ ತುರ್ತು ಸೇವೆಗೆ ಮಾತ್ರ ಅವಕಾಶ ಕಲ್ಪಿಸುವಂತೆ ಸೂಚಿಸಲಾಗಿದೆ. ಎಲ್ಲರಿಗೂ ಸಹಕಾರ ಆಗುವ ರೀತಿಯಲ್ಲಿ ಪೆÇಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ.

ಈ ಬಾರಿ ಲಾಕ್‍ಡೌನ್ ಯಶಸ್ವಿಯಾಗಬೇಕಾದರೆ ಜನರ ಸಹಕಾರ ಮುಖ್ಯ. ಜನರು ಸ್ವಯಂಪ್ರೇರಿತ ಲಾಕ್‍ಡೌನ್ ಆದರೆ ಮಾತ್ರ ಯಶಸ್ವಿಯಾಗಲಿದೆ ಎಂದು ಜನರ ಸಹಕಾರ ಕೋರಿದರು.

ಮಧ್ಯಾಹ್ನ 12ರ ನಂತರ ಯಾರಿಗೂ ಯಾವುದೇ ಅವಕಾಶವಿಲ್ಲ. ಅಷ್ಟರೊಳಗೆ ಜನ ತಮಗೆ ಬೇಕಿರುವ ಅಗತ್ಯ ವಸ್ತುಗಳನ್ನು ಖರೀದಿಸಬೇಕು. ವೈರಾಣು ಕಟ್ಟಿ ಹಾಕಲು ಕನಿಷ್ಠ 18 ತಾಸು ಸಮಯ ಬೇಕಿದೆ. ಹಾಗಾಗಿ 12 ಗಂಟೆಗೆ ನಿಯಂತ್ರಣ ಮಾಡಿದ್ದೇವೆ.

ಯಾರು ನಿಯಮಾವಳಿ ಉಲ್ಲಂಘನೆ ಮಾಡುತ್ತಾರೋ ಅನಿವಾರ್ಯವಾಗಿ ನಾವು ಪೊಲೀಸ್ ಪೊರ್ಸ್ ಬಳಕೆ ಮಾಡಬೇಕಾಗಲಿದೆ. ಅದಕ್ಕೆ ಅವಕಾಶ ಮಾಡಬೇಡಿ. ಪೊಲೀಸ್ ಪೊರ್ಸ್ ್ನ ಬಳಕೆ ಮಾಡಿ ನಿಯಂತ್ರಣ ಮಾಡುವ ಸ್ಥಿತಿ ನಿರ್ಮಾಣವಾಗಬಾರದು. ಆ ರೀತಿ ಜನ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ 8 ಗಂಟೆಯಿಂದ ಒಂದು ವಾರಗಳ ಕಾಲ ಲಾಕ್‍ಡೌನ್ ಜಾರಿಗೊಳಿಸಲಾಗಿದೆ.

Facebook Comments

Sri Raghav

Admin