ನಾಲಿಗೆ ನಿಯಂತ್ರಣದಲ್ಲಿರಲಿ : ಭಗವಾನ್, ಯತ್ನಾಳ್, ಪ್ರತಾಪ್‍ಸಿಂಹಗೆ ಎಂ.ಬಿ.ಪಾಟೀಲ್ ವಾರ್ನಿಂಗ್…!

ಈ ಸುದ್ದಿಯನ್ನು ಶೇರ್ ಮಾಡಿ

ವಿಜಯಪುರ, ಫೆ.17- ಯಾವುದೇ ಕೋಮುಭಾವನೆ ಕೆರಳಿಸುವಂತಹ ಹಾಗೂ ಪ್ರಚೋದನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

ವಿಜಯಪುರದಲ್ಲಿ ಬೇಗ್‍ಂ ತಾಲಾಬ್ ಕೆರೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡಿದ ಬಳಿಕ ಮಾತನಾಡಿದ ಅವರು, ಕೋಮುಭಾವನೆ ಕೆರಳಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೆಲವು ರಾಜಕೀಯ ಮುಖಂಡರು, ಪತ್ರಕರ್ತರು, ವಿದ್ಯಾರ್ಥಿಗಳು ಕೋಮು ಪ್ರಚೋದನೆ ಮಾಡುತ್ತಿದ್ದಾರೆ. ವಾಟ್ಸ್‍ಅಪ್, ಫೇಸ್‍ಬುಕ್‍ಗಳಲ್ಲಿ ದೇಶ ವಿರೋಧಿ ಹೇಳಿಕೆಗಳ ಪೋಸ್ಟ್ ಗಳನ್ನು ಹಾಕುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಅಂತಹವರನ್ನು ಹಲವೆಡೆ ಬಂಧಿಸಲಾಗಿದೆ. ಎಂದು ಹೇಳಿದರು.

ಭಾರತದ ಸೈನಿಕರ ಬಗ್ಗೆ ರಾಷ್ಟ್ರ ವಿರೋಧಿ ಅವಹೇಳನಕಾರಿ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವವರು ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಜಯಪುರದಲ್ಲಿರುವ ಸೆಕೆಂಡ್ ಅನಂತಕುಮಾರ್ ಹೆಗಡೆ ಸಹ ಕೋಮುಭಾವನೆ ಕೆರಳಿಸುವಂತೆ ಹೇಳಿಕೆ ನೀಡುತ್ತಿದ್ದಾರೆ ಎಂದು ಬಸವನಗೌಡ ಪಾಟೀಲ್ ಯತ್ನಾಳ್‍ಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಯಾರೇ ಪ್ರಚೋದನಾಕಾರಿ ಹೇಳಿಕೆ ನೀಡಿದರೂ ಅದು ಮಿತಿಯೊಳಗೇ ಇರಬೇಕು ಅತಿರೇಕವಾದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಚ್ಚರ ಎಂದು ಗುಡುಗಿದ ಅವರು ಕೆ.ಎಸ್.ಭಗವಾನ್, ಅನಂತಕುಮಾರ್ ಹೆಗಡೆ, ಯತ್ನಾಳ್, ಪ್ರತಾಪ್‍ಸಿಂಹ ಎಲ್ಲರೂ ವಾಕ್ ಸ್ವಾತಂತ್ರ್ಯದ ಮಿತಿಯೊಳಗೆ ಮಾತನಾಡಬೇಕು ಎಂದು ಹೇಳಿದರು.

ಕಾನೂನಿಗಿಂತ ಯಾರೂ ದೊಡ್ಡವರಲ್ಲ ಇಂತಹವರ ಬಗ್ಗೆ ಕುರಿತು ಇಲಾಖೆಯಲ್ಲಿ ಚರ್ಚಿಸಲಾಗುವುದು. ಬಹಳ ಜಾಗೃತಿಯಿಂದ ಮಾತನಾಡಬೇಕು ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ನೀಡಿದರು.

ಉಗ್ರರ ದಾಳಿ ಘಟನೆಯ ಬಗ್ಗೆ ಕೆಲವು ಫೇಸ್‍ಬುಕ್‍ಗಳಲ್ಲಿ ಪಾಕ್ ಪರ ಹೇಳಿಕೆಗಳು ಹರಿದಾಡುತ್ತಿರುವುದನ್ನು ಗಮನಿಸಿ ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದಾರೆ. ಶಾಂತಿ ಸೌಹಾರ್ದತೆ ಧಕ್ಕೆಯಾಗುವುದನ್ನು ಸಹಿಸುವುದಿಲ್ಲ ಎಂದು ಅವರು ಹೇಳಿದರು.

ಗೌರಿ ಲಂಕೇಶ್ ಹಾಗೂ ಕಲಬುರಗಿ ಅವರ ಹತ್ಯೆ ಪ್ರಕರಣದ ತನಿಖೆ ತ್ವರಿತ ಗತಿಯಲ್ಲಿ ನಡೆಯುತ್ತಿದೆ ಎಂದು ಹೇಳಿದರು. ವಿಜಯಪುರ ನಗರದಲ್ಲಿ 11ಕೋಟಿ ವೆಚ್ಚದಲ್ಲಿ ಕೆರೆ ಆವರಣದಲ್ಲಿ ಉದ್ಯಾನವನ ನಿರ್ಮಾಣ ಮಾಡುತ್ತಿದ್ದು 3-4ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ ಎಂದು ಅವರು ತಿಳಿಸಿದರು.

Facebook Comments

Sri Raghav

Admin