ಕೊರೊನಾಗೆ ಮನೆ ಮದ್ದು ಸೇವಿಸಿ ಪ್ರಾಣಕ್ಕೆ ಕುತ್ತು ತಂದುಕೊಂಡ ಅಪ್ಪ-ಮಗ..!

ಈ ಸುದ್ದಿಯನ್ನು ಶೇರ್ ಮಾಡಿ

ಕಾರವಾರ, ಮೇ 24- ಕೊರೊನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಮನೆ ಮದ್ದು ತಯಾರಿಸಿ ಸೇವಿಸಿದ ತಂದೆ, ಮಗ ಪ್ರಾಣಕ್ಕೆ ಸಂಚಕಾರ ತಂದುಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ರಾಮನ ಬೈಲಿನಲ್ಲಿ ನಡೆದಿದೆ.

ಫ್ರಾನ್ಸಿಸ್ ರೇಘೋ (42) ಮತ್ತು ನೆಕ್ಲಾಂ ಅಂಥೋನಿ (70) ತಂದೆ-ಮಗ ವಿಷಪೂರಿತ ಕಾಸರ್ಕನ ಚಕ್ಕೆ ಔಷ ಸೇವಿಸಿದ್ದರು. ಸದ್ಯ ಮಗ ಸಾವನ್ನಪ್ಪಿದ್ದು, ತಂದೆಯ ಸ್ಥಿತಿ ಗಂಭೀರವಾಗಿದ್ದು, ಶಿರಸಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ತಂದೆ-ಮಗ ಕೆಲ ದಿನಗಳಿಂದ ಉಸಿರಾಟದ ತೊಂದರೆ ಮತ್ತು ಅಲ್ಪ ಕೆಮ್ಮು ಹೊಂದಿದ್ದರು. ಇದು ಕೊರೊನಾ ಲಕ್ಷಣ ಇರಬಹುದು ಎಂದು ತಿಳಿದ ತಂದೆ-ಮಗ ಯಾರದ್ದೋ ಮಾತು ಕೇಳಿ ವಿಷ ಪೂರಿತ ಕಾಸರ್ಕನ ಚಕ್ಕೆಯ ಲೇಹ ಮಾಡಿ ಸೇವಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಸಂಬಂಧ ಶಿರಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin