ಹೋಂಡಾ ಶೂರೂಂ ಧಗ ಧಗ, 65ಕ್ಕೂ ಹೆಚ್ಚು ಹೊಸ ಬೈಕ್‍ಗಳು ಭಸ್ಮ..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ನ.15- ನಗರದ ಜಿಲ್ಲಾ ಪಂಚಾಯಿತಿ ಕಛೇರಿಯ ಹಿಂಭಾಗದಲ್ಲಿರುವ ಸೆಂಚುರಿ ಹೊಂಡಾ ಶೋ ರೂಂನಲ್ಲಿ ರಾತ್ರಿ 1.30ರಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ಶೋ ರೂಂ ಆವರಿಸಿದ ಪರಿಣಾಮ 65ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು, ಬಿಡಿ ಭಾಗಗಳು, ಪೀಠೋಪಕರಣಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.

ಸುದ್ದಿ ತಿಳಿದ ಅಗ್ನಿಶಾಮಕ ದಳದ ಅಕಾರಿಗಳಾದ ಮಹಾಲಿಂಗಪ್ಪ ಲಂಗೋಟಿ, ಉಪಾೀಕ್ಷಕರಾದ ಪಂಚಾಕ್ಷರಿ ಸೇರಿದಂತೆ 4 ವಾಹನಗಳಲ್ಲಿ 18 ಕ್ಕೂ ಹೆಚ್ಚು ಸಿಬ್ಬಂದಿಗಳು ರಾತ್ರಿ 1.30 ರಿಂದ ಬೆಳಗಿನ ಜಾವ 5 ಗಂಟೆಯವರೆಗೂ ಸತತವಾಗಿ ಬೆಂಕಿಯನ್ನು ನಂದಿಸಿದ್ದಾರೆ.

ದೀಪಾವಳಿ ಹಬ್ಬವನ್ನು ರಾತ್ರಿ ಮಾಲೀಕರು, ನೌಕರರು ಶೋ ರೂಂನಲ್ಲಿ ಸಂಭ್ರಮದಿಂದ ಆಚರಿಸಿ ಹೋಗಿದ್ದರು.ದೀಪಾವಳಿ ಹಬ್ಬದ ಪ್ರಯುಕ್ತ ರಾತ್ರಿ 10.30ರವರೆಗೆ ಪೂಜೆ ಮುಗಿಸಿ 10.30ರಲ್ಲಿ ಎಲ್ಲರು ಮನೆಗೆ ಹೋದೆವು ಅದರೆ ರಾತ್ರಿ 1,20 ರಲ್ಲಿ ಫೋನ್ ಬಂದಿತ್ತು ಶೋ ರೂಂ ಬೆಂಕಿ ಬಿದ್ದಿದೆ ಎಂದು ಬಂದು ನೋಡಿದರೆ ಎಲ್ಲಾವನ್ನು ಬೆಂಕಿಯ ಕೆನ್ನಾಲಿಗೆ ಆವರಿಸಿತ್ತು ಎಂದು ಶೋ ರೂಂ ಮಾಲೀಕರಾದ ಪ್ರವೀಣ್ ತಿಳಿಸಿದರು.

ಈ ಘಟನೆಯಿಂದ 2.50 ಕೋಟಿಯಷ್ಟು ನಷ್ಟವಾಗಿದೆ. ಬೈಕ್‍ಗಳು, ಸ್ಕೂಟರ್‍ಗಳು, ಅದರಲ್ಲಿ ಐಶಾರಾಮಿ ಬೈಕ್‍ಗಳು ಇದ್ದವು ನಷ್ಟ ಹೆಚ್ಚಾಗಬಹುದು ಎಂದು ಅಂದಾಜಿಸಲಾಗುತ್ತಿದೆ. ಕಟ್ಟಡಕ್ಕೆ ತುಂಬಾ ಡ್ಯಾಮೇಜ್ ಅಗಿದೆ ಎಂದು ಅವರು ತಿಳಿಸಿದರು.

ಬಿ.ಎಚ್.ರಸ್ತೆಯಲ್ಲಿರುವ ಶೋ ರೂಂ ಬೆಂಕಿ ಬಿದ್ದಿರುವ ಪ್ರಕರಣವನ್ನು ಹೊಸ ಬಡಾವಣೆ ಪೊಲೀಸ್ ಠಾಣೆಯ ಎಸ್‍ಐ ರಾಮಚಂದ್ರಪ್ಪ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

2 ಗಂಟೆಗಳ ಕಾಲ ಬಿಎಚ್ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಸ್ಥಳಕ್ಕೆ ಡಿವೈಎಸ್ಪಿ ತಿಪ್ಪೇಸ್ವಾಮಿ, ತಿಲಕ್ ಪಾರ್ಕ್ ವೃತ್ತದ ನಿರೀಕ್ಷಕರಾದ ಮುನಿರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Facebook Comments

Sri Raghav

Admin