ಹಾಂಕಾಂಗ್‍ನ ಖ್ಯಾತ ಪತ್ರಿಕೋದ್ಯಮಿ ಜಿಮ್ಮಿ ಲೈ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಹಾಂಕಾಂಗ್, ಆ.10-ವಿದೇಶಿ ಶಕ್ತಿಗಳೊಂದಿಗೆ ಶಾಮೀಲಾದ ಆರೋಪದ ಮೇಲೆ ಹೊಸ ರಾಷ್ಟ್ರೀಯ ಭದ್ರತಾ ಕಾನೂನು ಅಡಿ ಹಾಂಕಾಂಗ್‍ನ ಮಾಧ್ಯಮ ಕ್ಷೇತ್ರದ ದಿಗ್ಗಜ ಜಿಮ್ಮಿ ರೈ ಅವರನ್ನು ಇಂದು ಬೆಳಗ್ಗೆ ಬಂಸಲಾಗಿದೆ.

ಅಲ್ಲದೇ ಪತ್ರಿಕೋದ್ಯಮಿಯ ಕೇಂಧ್ರ ಕಚೇರಿ ಮತ್ತು ಪ್ರಕಾಶನ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗಿದೆ. ಹಾಂಕಾಂಗ್ ಮತ್ತು ಚೀನಾ ನಡುವಣ ಸಂಘರ್ಷ ಉಲ್ಬಣಗೊಂಡಿದ್ದು, ಜೂನ್‍ನಲ್ಲಿ ಬೀಜಿಂಗ್, ಹಾಂಕಾಂಗ್ ಮೇಲೆ ವಿಸಿದ ಹೊಸ ರಾಷ್ಟ್ರೀಯ ಕಾನೂನು ಅಡಿ ಇದೇ ಮೊದಲ ಬಾರಿಗೆ ಅತಿಗಣ್ಯ ವ್ಯಕ್ತಿಯನ್ನು ಬಂಸಲಾಗಿದೆ.

ಪತ್ರಿಕೋದ್ಯಮಿ ಟಾಜಿಮ್ಮಿ ಲೈ ಈ ಸಮಯದಲ್ಲಿ ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸಿ ಸರ್ಕಾರದ ವಿರುದ್ಧ ಕುತಂತ್ರದಲ್ಲಿ ಶಾಮೀಲಾಗಿದ್ದಾರೆ ಎಂದು ಉನ್ನತಾಕಾರಿಯೊಬ್ಬರು ತಿಳಿಸಿದ್ದಾರೆ.

71 ವರ್ಷದ ಮಾಧ್ಯಮ ಉದ್ಯಮಿ ಜಿಮ್ಮಿ ಲೈ ಒಡೆತನದ ಆಪಲ್ ಡೈಲಿ ನಿಯತಕಾಲಿಕ ಕಚೇರಿ ಸೇರಿದಂತೆ ಅವರಿಗೆ ಸೇರಿದ ಕಾರ್ಯಾಲಯಗಳು ಮತ್ತು ಪ್ರಕಾಶನ ಸಂಸ್ಥೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ..

ಜಿ ಮ್ಮಿ ಲೈ ಅವರು ಹಾಂಕಾಂಗ್‍ನಲ್ಲಿ ಚೀನಾದ ಕಮ್ಯೂನಿಸ್ಟ್ ಸರ್ಕಾರದ ಆಳ್ವಿಕೆ ಬಗ್ಗೆ ನಿರಂತರ ಟೀಕೆಗಳನ್ನು ಮಾಡಲು ಪ್ರಜಾಪ್ರಭುತ್ವದ ಪರ ದ್ವನಿ ಎತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಸರಾಂತ ಪತ್ರಿಕೋದ್ಯಮಿಯನ್ನು ಬಂಸಲಾಗಿದೆ. ಚೀನಾದ ಈ ಕ್ರಮವನ್ನು ಅಂತಾರಾಷ್ಟ್ರೀಯ ಮಾಧ್ಯಮಗಳು ಖಂಡಿಸಿವೆ.

Facebook Comments

Sri Raghav

Admin