ಪತ್ರಿಕಾ ಸ್ವಾತಂತ್ರ್ಯ ಬೆಂಬಲಿಸಿ ಭಾರಿ ಸಂಖ್ಯೆಯಲ್ಲಿ ನ್ಯೂಸ್ ಪೇಪರ್ ಖರೀದಿಸಿದ ಹಾಂಕಾಂಗ್ ಜನತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಂಕಾಂಗ್, ಆ.11-ಪತ್ರಿಕಾ ಸ್ವಾತಂತ್ರ್ಯವನ್ನು ಕಸಿಯಲು ಮುಂದಾಗಿರುವ ಚೀನಾದ ಕಮ್ಯೂನಿಸ್ಟ್ ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವ ಹಾಂಕಾಂಗ್ ಜನರು, ಪತ್ರಿಕಾ ಸ್ವಾತಂತ್ರ್ಯಕ್ಕೆ ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸರ್ಕಾರದ ವಿರುದ್ಧ ಧ್ವನಿ ಎತ್ತಿ ಪ್ರಜಾಪ್ರಭುತ್ವದ ಪರ ನಿಂತಿರುವ ಪತ್ರಿಕೆಗಳನ್ನು ಭಾರೀ ಸಂಖ್ಯೆಯಲ್ಲಿ ಖರೀದಿಸಿದ್ದಾರೆ.

ವಿದೇಶಿ ಶಕ್ತಿಗಳೊಂದಿಗೆ ಶಾಮೀಲಾದ ಆರೋಪದ ಮೇಲೆ ಹೊಸ ರಾಷ್ಟ್ರೀಯ ಭದ್ರತಾ ಕಾನೂನು ಅಡಿ ಹಾಂಕಾಂಗ್‍ನ ಮಾಧ್ಯಮ ಕ್ಷೇತ್ರದ ದಿಗ್ಗಜ ಜಿಮ್ಮಿರೈ ಅವರನ್ನುನಿನ್ನೆ ಬೆಳಗ್ಗೆ ಬಂಸಲಾಗಿತ್ತು.

ಅಲ್ಲದೇ ಪತ್ರಿಕೋದ್ಯಮಿಯ ಕೇಂದ್ರ ಕಚೇರಿ ಮತ್ತು ಪ್ರಕಾಶನ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗಿತ್ತು. ಚೀನಾದ ಸ್ವಾಯತ್ತ ಪ್ರದೇಶವಾಗಿರುವ ಹಾಂಕಾಂಗ್‍ನಲ್ಲಿ ಕಮ್ಯೂನಿಸ್ಟ್ ಸರ್ಕಾರದ ಈ ಕ್ರಮಕ್ಕೆ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪತ್ರಿಕಾ ಸ್ವಾತಂತ್ರ್ಯಕ್ಕೆ ಭಾರೀ ಬೆಂಬಲ ಸೂಚಿಸಿದ್ಧಾರೆ.

ಪತ್ರಿಕೋದ್ಯಮಿ ಜಿಮ್ಮೆ ಒಡೆತನ ಆಪಲ್‍ಡೇ ಪತ್ರಿಕೆಗಳನ್ನು ಅಂಗಡಿಗಳ ಮುಂದೆ ಸಾಲುಗಟ್ಟಿ ಜನರು ಖರೀದಿಸುತ್ತಿದ್ದ ದೃಶ್ಯಇಂದು ಬೆಳಗ್ಗೆ ಎಲ್ಲೆಡೆ ಕಂಡುಬಂದಿತು.

ಹಾಂಕಾಂಗ್ ಮತ್ತು ಚೀನಾ ನಡುವಣ ಸಂಘರ್ಷಉಲ್ಬಣಗೊಂಡಿದ್ದು, ಜೂನ್‍ನಲ್ಲಿ ಬೀಜಿಂಗ್, ಹಾಂಕಾಂಗ್ ಮೇಲೆ ವಿಸಿದ ಹೊಸ ರಾಷ್ಟ್ರೀಯ ಕಾನೂನು ಅಡಿ ಇದೇ ಮೊದಲ ಬಾರಿಗೆ ಅತಿಗಣ್ಯ ವ್ಯಕ್ತಿಯನ್ನು ಬಂಸಲಾಗಿದೆ.

ಪತ್ರಿಕೋದ್ಯ ಮಿಟಾ ಜಿಮ್ಮಿ ಲೈ ಈ ಸಮಯದಲ್ಲಿ ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸಿ ಸರ್ಕಾರದ ವಿರುದ್ಧ ಕುತಂತ್ರದಲ್ಲಿ ಶಾಮೀಲಾಗಿದ್ದಾರೆ ಎಂದು ಉನ್ನತಾಕಾರಿಯೊಬ್ಬರು ತಿಳಿಸಿದ್ದಾರೆ.

71 ವರ್ಷದ ಮಾಧ್ಯಮ ಉದ್ಯಮಿ ಜಿಮ್ಮಿ ಲೈ ಒಡೆತನದ ಆಪಲ್‍ಡೈಲಿ ನಿಯತಕಾಲಿಕ ಕಚೇರಿ ಸೇರಿದಂತೆ ಅವರಿಗೆ ಸೇರಿದ ಕಾರ್ಯಾಲಯಗಳು ಮತ್ತು ಪ್ರಕಾಶನ ಸಂಸ್ಥೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ..

ಜಿಮ್ಮಿ ಲೈ ಅವರು ಹಾಂಕಾಂಗ್‍ನಲ್ಲಿ ಚೀನಾದ ಕಮ್ಯೂನಿಸ್ಟ್ ಸರ್ಕಾರದ ಆಳ್ವಿಕೆ ಬಗ್ಗೆ ನಿರಂತರ ಟೀಕೆಗಳನ್ನು ಮಾಡಲು ಪ್ರಜಾಪ್ರಭುತ್ವದ ಪರದ್ವನಿ ಎತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಹೆಸರಾಂತ ಪತ್ರಿಕೋದ್ಯಮಿಯನ್ನು ಬಂಸಲಾಗಿದೆ. ಚೀನಾದ ಈ ಕ್ರಮವನ್ನು ಅಂತಾರಾಷ್ಟ್ರೀಯ ಮಾಧ್ಯಮಗಳು ಖಂಡಿಸಿವೆ.

Facebook Comments

Sri Raghav

Admin