ಇಂದಿನ ಪಂಚಾಗ ಮತ್ತು ರಾಶಿಭವಿಷ್ಯ (24-12-2020)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಜ್ಞಾನದ ಬೆಳಕಿಲ್ಲದೆ, ಜ್ಞಾನದ ಅರಿವಿಲ್ಲದೆ ಮಾಡುವ ಕಾರ್ಯ ಗಳು ಕೆಲವೊಮ್ಮೆ ಸರಿಯಾಗಿವೆ ಎನಿಸ ಬಹುದು. ಆದರೆ, ಕಾಲ ಕಳೆದಂತೆ ಅದರ ಪರಿಣಾಮ ಕೆಟ್ಟದ್ದಾಗಿರುತ್ತದೆ. ಆ ನಿಟ್ಟಿನಲ್ಲಿ ಜ್ಞಾನವನ್ನು ಕೊಡುವಂತಹ ಧರ್ಮದ ಜಾಗೃತಿ ಎಲ್ಲದರಲ್ಲೂ ಆಗಬೇಕು.  -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

#  ಪಂಚಾಂಗ :ಗುರುವಾರ, 24.12.2020
ಸೂರ್ಯ ಉದಯ ಬೆ.06.38/ ಸೂರ್ಯ ಅಸ್ತ ಸಂ.06.00
ಚಂದ್ರ ಉದಯ ಮ.01.53/ ಚಂದ್ರ ಅಸ್ತ ರಾ.02.28
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಕಾರ್ತೀಕ ಮಾಸ /
ಕೃಷ್ಣ ಪಕ್ಷ /ತಿಥಿ: ದಶಮಿ (ರಾ.11.18) ನಕ್ಷತ್ರ: ಅಶ್ವಿನಿ (ದಿನಪೂರ್ತಿ)
ಯೋಗ: ಪರಿಘ (ಮ.01.41) ಕರಣ: ತೈತಿಲ-ಗರಜೆ
(ಬೆ.09.58-ರಾ.11.18) ಮಳೆ ನಕ್ಷತ್ರ: ಮೂಲಾ ಮಾಸ: ಧನುರ್ಮಾಸ
ತೇದಿ: 09

# ಇಂದಿನ ಭವಿಷ್ಯ :
ಮೇಷ: ಕುಟುಂಬದಲ್ಲಿ ಅನ್ಯೋನ್ಯತೆ ಕಂಡುಬರುತ್ತದೆ
ವೃಷಭ: ದೀರ್ಘಕಾಲದ ಸಮಸ್ಯೆ ಬಗೆಹರಿಯು ತ್ತದೆ. ಅತಿಥಿಗಳ ಆಗಮನದಿಂದ ಮನಸ್ಸಿಗೆ ಸಂತೋಷ ವಾಗುತ್ತದೆ. ವಿದೇಶ ಪ್ರಯಾಣ ಯೋಗವಿದೆ
ಮಿಥುನ: ಕೆಲಸ-ಕಾರ್ಯಗಳನ್ನು ಸಾಧಿಸಿಕೊಳ್ಳಲು ಶತ ಪ್ರಯತ್ನ ಮಾಡುವಿರಿ
ಕಟಕ: ದಾಂಪತ್ಯ ಜೀವನ ಸಾಮರಸ್ಯದಿಂದ ಕೂಡಿರುತ್ತದೆ
ಸಿಂಹ: ಉದ್ಯೋಗದಲ್ಲಿ ಹಲವಾರು ಸಾಧನೆ ಮಾಡುವ ಯೋಗ ಮತ್ತು ಬಡ್ತಿ ದೊರೆಯುವ ಸಂಭವವಿದೆ
ಕನ್ಯಾ: ಆಯಾಸ, ದಣಿವು ನಿಮ್ಮನ್ನು ಬಾಧಿಸುತ್ತದೆ
ತುಲಾ:ಸಾಲದ ಸುಳಿಯಲ್ಲಿ ಸಿಲುಕುವ ಸಾಧ್ಯತೆಗಳು ಹೆಚ್ಚಾ ಗಿವೆ. ಪಾಲುಗಾರಿಕೆ ವ್ಯವಹಾರ ಮಾಡಬೇಡಿ
ವೃಶ್ಚಿಕ: ಸಮಾಜ ಸೇವಕರಿಗೆ ಮನ್ನಣೆ ದೊರೆಯು ತ್ತದೆ. ಶತ್ರುಗಳು ದೂರ ಸರಿಯುವರು
ಧನುಸ್ಸು: ಆದಾಯ-ಖರ್ಚು ಸಮನಾಗಿರುತ್ತದೆ
ಮಕರ: ಆಪ್ತಮಿತ್ರರು ಮೋಸ ಮಾಡಬಹುದು
ಕುಂಭ: ಬಡ್ಡಿ ವ್ಯಾಪಾರಸ್ಥರಿಗೆ ಲಾಭದಾಯಕ ದಿನ
ಮೀನ: ಮಾನಸಿಕ ಹಿಂಸೆ ನಿಮ್ಮನ್ನು ಬಾಧಿಸುತ್ತದೆ

Facebook Comments