ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-01-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ದೇಹ ಕೊಳಕಾದರೆ ಅದನ್ನು ನೀರಿನಿಂದ ತೊಳೆದು ಕೊಳ್ಳಬಹುದು. ಮನಸ್ಸಿಗೆ ಕೊಳಕನ್ನು ಅಂಟಿಸಿಕೊಂಡರೆ ಅದನ್ನು ನೀರಿನಿಂದ ತೊಳೆ ಯುವುದಕ್ಕಾಗುವುದಿಲ್ಲ. ಮನಸ್ಸನ್ನು ಶುದ್ಧವಾಗಿಟ್ಟು ಕೊಳ್ಳಬೇಕೆಂದರೆ ಅದಕ್ಕೆ ಧಾರ್ಮಿಕ, ಆಧ್ಯಾತ್ಮಿಕ ಶ್ರದ್ಧೆ ಇರಬೇಕು. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

#  ಪಂಚಾಂಗ :ಗುರುವಾರ, 01.01.2021
ಸೂರ್ಯ ಉದಯ ಬೆ.06.41/ ಸೂರ್ಯ ಅಸ್ತ ಸಂ.06.04
ಚಂದ್ರ ಉದಯ ಸಂ.08.11/ ಚಂದ್ರ ಅಸ್ತ ಸಂ.08.11
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಕಾರ್ತೀಕ ಮಾಸ /
ಕೃಷ್ಣ ಪಕ್ಷ /ತಿಥಿ: ದ್ವಿತೀಯಾ (ಬೆ.09.34) ನಕ್ಷತ್ರ: ಪುಷ್ಯಾ (ರಾ.08.15)
ಯೋಗ: ವೈಧೃತಿ (ಮ.01.37) ಕರಣ: ಗರಜೆ-ವಣಿಜ್(ಬೆ.09.34-ರಾ.09.25)
ಮಳೆ ನಕ್ಷತ್ರ: ಪೂರ್ವಾಷಾಢಮಾಸ: ಧನುರ್ಮಾಸ ತೇದಿ: 17

# ಇಂದಿನ ಭವಿಷ್ಯ :
ಮೇಷ: ಹಣ ಗಳಿಸುವುದಕ್ಕೆ ಉತ್ತಮ ಅವಕಾಶ ಗಳು ಲಭಿಸಲಿವೆ. ಜನರಿಂದ ಗೌರವ ಸಿಗುತ್ತದೆ
ವೃಷಭ: ಆರೋಗ್ಯದಲ್ಲಿ ಹಲವಾರು ಸಮಸ್ಯೆ ಗಳನ್ನು ಎದುರಿಸಬೇಕಾಗಬಹುದು
ಮಿಥುನ: ಉದ್ಯೋಗದಲ್ಲಿ ಮುನ್ನಡೆ ಕಂಡು ಬಂದರೂ ಅಪವಾದಕ್ಕೆ ಗುರಿ ಯಾಗುವ ಸಾಧ್ಯತೆಗಳಿವೆ
ಕಟಕ: ಬಂಧು-ಮಿತ್ರರು ನಿಮ್ಮ ವಿರುದ್ಧ ತಿರುಗಿ ಬೀಳುವರು

ಸಿಂಹ: ನ್ಯಾಯಾಲಯದಿಂದ ತೊಂದರೆಯಾಗಬಹುದು
ಕನ್ಯಾ: ಅನಾವಶ್ಯಕ ವಿವಾದಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ
ತುಲಾ: ಶುಭ ಕಾರ್ಯಗಳಿಗೆ ಹೆಚ್ಚು ಹಣ ವ್ಯಯ ಮಾಡುತ್ತೀರಿ
ವೃಶ್ಚಿಕ: ಕುಟುಂಬದಲ್ಲಿ ಅಸಮಾಧಾನ ಕಂಡುಬರುತ್ತದೆ. ಯಾರೊಂದಿಗೂ ವಾದ ಮಾಡದಿರುವುದೇ ಉತ್ತಮ

ಧನುಸ್ಸು: ಯಾವುದೇ ತೊಂದರೆ, ತಾಪತ್ರಯ ಗಳಿಲ್ಲದೆ ನಿಮ್ಮ ಗುರಿ ತಲುಪುತ್ತೀರಿ
ಮಕರ: ನೀವು ಯಾರನ್ನೂ ನಂಬುವುದಿಲ್ಲ
ಕುಂಭ: ಮಕ್ಕಳೊಂದಿಗೆ ವಿರಸ ಉಂಟಾಗಬಹುದು
ಮೀನ: ಅವಿವಾಹಿತರಿಗೆ ವಿವಾಹ ಭಾಗ್ಯ

Facebook Comments