ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-03-2021)

ಈ ಸುದ್ದಿಯನ್ನು ಶೇರ್ ಮಾಡಿ

 ನಿತ್ಯನೀತಿ : ಜೀವನದಲ್ಲಿ ಏಕಾಗ್ರತೆಯನ್ನು ಮೈಗೂಡಿಸಿಕೊಂಡರೆ, ಕಠಿಣ ಪರಿಶ್ರಮ ವಹಿಸಿದರೆ ಯಾವುದೂ ಕಷ್ಟವಲ್ಲ. ಎಲ್ಲವೂ ಸುಲಭ ಸಾಧ್ಯವಾಗುತ್ತದೆ.

#  ಪಂಚಾಂಗ : ಮಂಗಳವಾರ, 02.03.2021
ಸೂರ್ಯ ಉದಯ ಬೆ.06.35 / ಸೂರ್ಯ ಅಸ್ತ ಸಂ.06.28
ಚಂದ್ರ ಉದಯ ರಾ.09.30/ ಚಂದ್ರ ಅಸ್ತ ಬೆ.08.53
ಶಾರ್ವರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು /ಮಾಘ ಮಾಸ / ಶುಕ್ಲ ಪಕ್ಷ
ತಿಥಿ: ಚತುರ್ಥಿ (ರಾ.03.00) ನಕ್ಷತ್ರ: ಚಿತ್ತಾ (ರಾ.03.29)
ಯೋಗ: ಗಂಡ-ವೃದ್ಧಿ (ಬೆ.09.25-ರಾ.05.58) ಕರಣ: ಭವ-ಬಾಲವ
(ಸಾ.04.23-ರಾ.03.00) ಮಳೆ ನಕ್ಷತ್ರ: ಶತಭಿಷಾ
ಮಾಸ: ಕುಂಭ, ತೇದಿ: 19

# ಇಂದಿನ ಭವಿಷ್ಯ :
ಮೇಷ: ಕುಟುಂಬದಲ್ಲಿ ಮೂರನೇ ವ್ಯಕ್ತಿಯ ವಿಚಾರದಲ್ಲಿ ಕಲಹ, ಮನಸ್ತಾಪವಾಗುತ್ತದೆ
ವೃಷಭ: ಸಮಾಜ ಸೇವಕರು ಜನರಿಂದ ವಿರೋಧ ಎದುರಿಸಬೇಕಾಗುತ್ತದೆ. ವಾದ-ವಿವಾದ ಮಾಡದಿರಿ
ಮಿಥುನ: ಸ್ನೇಹಿತರಿಂದ ಒಳ್ಳೆಯದಾಗುತ್ತದೆ. ಬಂಧು-ಮಿತ್ರರು ಸಹಾಯ ಮಾಡುವರು
ಕಟಕ: ಅತ್ತೆ-ಮಾವಂದಿರು ನಿಮಗೆ ಹಣ ಸಹಾಯ ಮಾಡಬಹುದು

ಸಿಂಹ: ಸಹೋದ್ಯೋಗಿಗಳು ನಿಮಗೆ ಹಿತವಚನ ಹೇಳುವರು
ಕನ್ಯಾ: ತಂದೆ-ತಾಯಿಯರ ಬಗ್ಗೆ ಕಾಳಜಿ ವಹಿಸಿ
ತುಲಾ: ಪ್ರತಿಯೊಂದು ಕೆಲಸ -ಕಾರ್ಯಗಳಲ್ಲೂ ನೀವು ನಿರೀಕ್ಷಿಸಿದಂತೆ ಫಲ ದೊರೆಯುತ್ತದೆ
ವೃಶ್ಚಿಕ: ಅಣ್ಣ-ತಮ್ಮಂದಿರಲ್ಲಿ ವೈಮನಸ್ಸು ಕಡಿಮೆಯಾಗುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ದುಷ್ಟ ಜನರಿಂದ ದೂರವಿರಿ

ಧನುಸ್ಸು: ಸಾಲದ ಸುಳಿಯಲ್ಲಿ ಸಿಲುಕುವಿರಿ
ಮಕರ: ವಾಹನ ಓಡಿಸದಿರುವುದೇ ಉತ್ತಮ
ಕುಂಭ: ಉದ್ಯೋಗದಲ್ಲಿ ಬಡ್ತಿ ದೊರೆಯಬಹುದು
ಮೀನ: ಪತ್ನಿಯ ಕಡೆಯಿಂದ ಆಸ್ತಿ ಸಿಗಬಹುದು

Facebook Comments