ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-01-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ದೇವರು ಇದ್ದಾನೆ… ಗುಡಿಯಲ್ಲಿರುವ ಕಲ್ಲಿನ ಮೂರ್ತಿಯಲ್ಲಿಲ್ಲ. ಪೂಜ್ಯ ಗುರುಗಳ ರೂಪದಲ್ಲಿ.  -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

#  ಪಂಚಾಂಗ :ಗುರುವಾರ , 14.01.2021
ಸೂರ್ಯ ಉದಯ ಬೆ.06.45/ ಸೂರ್ಯ ಅಸ್ತ ಸಂ.06.12
ಚಂದ್ರ ಉದಯ ರಾ.07.42/ ಚಂದ್ರ ಅಸ್ತ ಬೆ.07.24
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಕಾರ್ತೀಕ ಮಾಸ /
ಕೃಷ್ಣ ಪಕ್ಷ /ತಿಥಿ: ಪ್ರತಿಪತ್ (ಬೆ.09.02) ನಕ್ಷತ್ರ: ಶ್ರವಣ (ರಾ.05.04)
ಯೋಗ: ವಜ್ರ (ರಾ.10.05) ಕರಣ: ಭವ-ಬಾಲವ (ಬೆ.09.02-ರಾ.08.29)
ಮಳೆ ನಕ್ಷತ್ರ: ಉತ್ತರಾಷಾಢ ಮಾಸ: ಮಕರ, ತೇದಿ: 01

# ಇಂದಿನ ಭವಿಷ್ಯ :
ಮೇಷ: ಹಿರಿಯರೊಡನೆ ವಾದ-ವಿವಾದ ಮಾಡದಿರಿ. ವ್ಯಾಪಾರ-ವ್ಯವಹಾರಗಳು ಯಥಾಪ್ರಕಾರ ನಡೆಯ ಲಿವೆ. ಬಂಧು-ಮಿತ್ರರ ಸಹಕಾರದಿಂದ ಕಾರ್ಯಸಿದ್ಧಿ
ವೃಷಭ: ಖರ್ಚು-ವೆಚ್ಚಗಳ ಬಗ್ಗೆ ಜಾಗ್ರತೆ ಇರಲಿ.
ಮಿಥುನ: ಉದ್ಯೋಗಸ್ಥರಿಗೆ ಉನ್ನತ ಅಧಿಕಾರಿ ವರ್ಗದವರಿಂದ ಪ್ರಶಂಸೆ ಸಲ್ಲಲಿದೆ
ಕಟಕ: ನಿರುದ್ಯೋಗಿಗಳಿಗೆ ಸದ್ಯದಲ್ಲೇ ತಾತ್ಕಾಲಿಕ ಅವಕಾಶಗಳು ಒದಗಿ ಬರಲಿವೆ

ಸಿಂಹ: ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹಿರಿಯರು ಗಮನ ಹರಿಸಿ
ಕನ್ಯಾ: ಹಣ ಆಗಾಗ ನೀರಿನಂತೆ ಖರ್ಚಾಗಲಿದೆ. ದಾಂಪತ್ಯ ಜೀವನದಲ್ಲಿ ಸಹಮತವಿರಲಿ
ತುಲಾ: ವೃತ್ತಿರಂಗದಲ್ಲಿ ಹೆಚ್ಚಿನ ಚೇತರಿಕೆ ಇಲ್ಲವಾದರೂ ಯಥಾಪ್ರಕಾರ ನಡೆಯಲಿದೆ
ವೃಶ್ಚಿಕ: ನೆನೆಗುದಿಗೆ ಬಿದ್ದಿದ್ದ ಕೆಲಸ-ಕಾರ್ಯಗಳು ಮುಂದುವರಿಯಲಿವೆ. ಆರೋಗ್ಯ ಉತ್ತಮವಾಗಿರುತ್ತದೆ

ಧನುಸ್ಸು: ಧನಾಗಮನದಿಂದ ಕಾರ್ಯಸಿದ್ಧಿಯಾಗಲಿದೆ
ಮಕರ: ವಿದ್ಯಾರ್ಥಿಗಳ ಅಭ್ಯಾಸಬಲ ಕಡಿಮೆಯಾಗಲಿದೆ
ಕುಂಭ: ಅನಿರೀಕ್ಷಿತ ಅತಿಥಿಗಳ ಆಗಮನವಾಗಲಿದೆ
ಮೀನ: ಹಳೆಯ ಕಡತಗಳಲ್ಲಿನ ಅನಾವಶ್ಯಕವಾದ ಕಾಗದ ಪತ್ರಗಳನ್ನು ಸ್ವಚ್ಛ ಮಾಡಿಕೊಳ್ಳಿ

Facebook Comments